ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಲ್ಲದೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಶಾಸಕ ಕು.ಕಾ.ಸೆಲ್ವಂ ಅವರನ್ನು ಡಿಎಂಕೆ ಪಕ್ಷ ಇಂದು ಶಾಸಕನ ಸ್ಥಾನದಿಂದ ಅಮಾನತು ಮಾಡಿದೆ.
ಅಷ್ಟೇ ಅಲ್ಲ ಸೆಲ್ವಂ ವಿರುದ್ಧ ಕಾನೂನು ಕ್ರಮವನ್ನೂ ತೆಗೆದುಕೊಂಡಿದ್ದು, ಡಿಎಂಕೆ ಶೋಕಾಸ್​ ನೋಟಿಸ್​ ಕಳಿಸಿದೆ. ನಿಮ್ಮನ್ನು ಯಾಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಬಾರದು ಎಂಬುದಕ್ಕೆ ಕಾರಣ ಕೊಡಿ ಎಂದು ನೋಟಿಸ್​ನಲ್ಲಿ ಪ್ರಶ್ನಿಸಿದೆ.ಸೆಲ್ವಂ ಅವರು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಕೆಟ್ಟ ಹೆಸರು ತಂದಿದ್ದಾರೆ. ಈ ಬಗ್ಗೆ ವಿವರಣೆ ಕೇಳಿದ್ದೇವೆ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್​ ತಿಳಿಸಿದ್ದಾರೆ.ಇದನ್ನೂ ಓದಿ:ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್​ ಭಾಗವತ್​
ದೆಹಲಿಗೆ ಭೇಟಿ ನೀಡಿದ್ದ ಸೆಲ್ವಂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆಂದು ಹೊಗಳಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅವರು ಪ್ರಯತ್ನಿಸಿದ್ದಾರೆ ಎಂದಿದ್ದರು.
ಹಾಗೇ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ, ಸೆಲ್ವಂ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಸೆಲ್ವಂ ಈ ಸುದ್ದಿಯನ್ನು ನಿರಾಕರಿಸಿದ್ದರು. ನಾನು ದೆಹಲಿಗೆ ಹೋಗಿದ್ದು ಕೇಂದ್ರ ರೈಲ್ವೆ ಸಚಿವ ಪಿಯುಷ್​ ಗೋಯಲ್​ ಅವರನ್ನು ಭೇಟಿಯಾಗಲು ಎಂದು ತಿಳಿಸಿದ್ದರು. ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ರಾಮೇಶ್ವರ ಅಭಿವೃದ್ಧಿಯ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದೂ ಸೆಲ್ವಂ ಸ್ಪಷ್ಟನೆ ನೀಡಿದ್ದರು.  ಆದರೆ ಡಿಎಂಕೆ ಅವರನ್ನು ಅಮಾನತು ಮಾಡಿದ್ದು, ಶೋಕಾಸ್​ ನೋಟಿಸ್​ ಜಾರಿಗೊಳಿಸಿದೆ. (ಏಜೆನ್ಸೀಸ್​)
ಕಾಶ್ಮಿರದಲ್ಲೂ ಸಂಭ್ರಮಾಚರಣೆ…; ಆದರೆ ಕಾರಣ ರಾಮಮಂದಿರವಲ್ಲ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
