ಚೆನ್ನೈ:ನಟಿ, ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಖುಷ್ಬೂ ಸುಂದರ್ ವಿರುದ್ಧ ಅವಹೇಳನಾಕಾರಿ​ ಹೇಳಿಕೆ ನೀಡಿದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷದ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಚೆನ್ನೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಲ್ಲದೆ, ಅವರನ್ನು ಪಕ್ಷದಿಂದಲೂ ಉಚ್ಛಾಟನೆ ಮಾಡಲಾಗಿದೆ.
ತಮ್ಮ ವಿರುದ್ಧ ಕೃಷ್ಣಮೂರ್ತಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ, ಮಹಿಳೆಯರನ್ನು ಕೀಳಾಗಿ ಕಾಣುವ ವ್ಯಕ್ತಿಗಳಿಗೆ ಆಶ್ರಯ ನೀಡುತ್ತಿರುವುದಕ್ಕೆ ಡಿಎಂಕೆ ವಿರುದ್ಧ ಖುಷ್ಬೂ ಕಿಡಿಕಾರಿದರು. ಅಲ್ಲದೆ, ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ತುಂಬಾ ಗದ್ಗದಿತರಾದ ಖುಷ್ಬೂ ಈ ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಕೃಷ್ಣಮೂರ್ತಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಬಿಲ್ ಭಾಗಶಃ ಪಾವತಿ ಅವಕಾಶ: ಎಇಇಗೆ ಲಿಖಿತ ಮನವಿ ಸಲ್ಲಿಸಿದರೆ ಸೌಲಭ್ಯ; ಎಲ್ಲ ಬಗೆಯ ಗ್ರಾಹಕರಿಗೆ ನಿಯಮ ಅನ್ವಯ
DMK spokesperson Sivaji Krishnamurthy, who was removed from the party has now been arrested.
The Kodungaiyur police have registered a case and arrested Shivaji Krishnamurthy for his remarks against TN Governor RN Ravi and NCW member Khushbu Sundar.
(File pic)pic.twitter.com/zycNIGRmBu
— ANI (@ANI)June 18, 2023

ಖುಷ್ಬೂ ಅವರು ಟ್ವಿಟರ್‌ನಲ್ಲಿ ಮತ್ತು ಪತ್ರಿಕಾಗೋಷ್ಠಿಯಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆಡಳಿತಾರೂಢ ಡಿಎಂಕೆ, ಅಶಿಸ್ತು ಮತ್ತು ಹೆಸರಿಗೆ ಕಳಂಕ ತರುವ ಕಾರಣಕ್ಕಾಗಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಚಾಟಿಸುವುದಾಗಿ ಘೋಷಿಸಿತು. ಬಳಿಕ ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಖುಷ್ಬು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು ಮತ್ತು ಎಲ್ಲ ಮಹಿಳೆಯರ ಪರವಾಗಿ ಮಾತನಾಡಿದರು. ಕೃಷ್ಣಮೂರ್ತಿಯಂತಹ ವ್ಯಕ್ತಿಗಳನ್ನು ಡಿಎಂಕೆ ಪೋಷಿಸುತ್ತಿದೆ. ಇದು ಕೇವಲ ಬಿಜೆಪಿ ಮಹಿಳಾ ನಾಯಕಿಯ ಮೇಲಿನ ದಾಳಿಯಲ್ಲ, ಒಟ್ಟಾರೆ ಮಹಿಳೆಯರ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.
#WATCH| Khushbu Sundar, BJP leader and member of National Commission for Women (NCW) on DMK speaker Sivaji Krishnamurthy's alleged remarks on her, says "When they do not have anything to say, they will stoop to this level of maligning and character assassination. I wanted CM MK…pic.twitter.com/kvYKuNOPcA
— ANI (@ANI)June 18, 2023

ಬಿಜೆಪಿಯಿಂದ ಟೀಕೆಗಳನ್ನು ಎದುರಿಸಿದ ನಂತರ, ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಯಿತು. ಡಿಎಂಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಅವರು ಪಕ್ಷದ ಶಿಸ್ತಿನ ಉಲ್ಲಂಘನೆ ಮತ್ತು ಪಕ್ಷಕ್ಕೆ ಅಪಖ್ಯಾತಿ ತಂದಿರುವ ಕಾರಣ ಕೃಷ್ಣಮೂರ್ತಿ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸುವುದು ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಮಾಡುವುದಾಗಿ ಘೋಷಿಸಿದರು.
ಇದನ್ನೂ ಓದಿ:‘ಶಕ್ತಿ’ ಸೌಕರ್ಯ ಬಂದರೂ ಬಸ್ ಇಲ್ಲದೆ ಪರದಾಟ‘ಶಕ್ತಿ’ ಸೌಕರ್ಯ ಬಂದರೂ
ಕೃಷ್ಣಮೂರ್ತಿ ಅವರು ಈ ಹಿಂದೆ ರಾಜ್ಯಪಾಲ ರವಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು, ಆದರೆ ಅವರು ಕ್ಷಮೆಯಾಚಿಸಿದ ನಂತರ ಅಮಾನತು ಹಿಂತೆಗೆದುಕೊಳ್ಳಲಾಯಿತು.(ಏಜೆನ್ಸೀಸ್​)
ಮೃನಾಲ್​ ಠಾಕೂರ್​ ಹಳೇ ಫೋಟೋ ವೈರಲ್​! ಇವರೇನಾ ಸೀತಾಮಹಾಲಕ್ಷ್ಮೀ ಎನ್ನುತ್ತಿರುವ ನೆಟ್ಟಿಗರು

ಬೆಂಗಳೂರಿಗೆ ಹೊಸ ರೂಪ: ರಾಜಧಾನಿಯಾಚೆಗೂ ಪ್ರಗತಿರಥ ಸಾಗಬೇಕು..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four + 6 =
Remember me
