ಚೆನ್ನೈ:ಯುವತಿಯೊಬ್ಬಳ ಸೌಂದರ್ಯಕ್ಕೆ ಮಾರುಹೋಗಿದ್ದ ಡಿಎಂಕೆ ಯುವ ಘಟಕದ ಪದಾಧಿಕಾರಿಯೊಬ್ಬ ಆಕೆಗೆ ಸಾಕಷ್ಟು ಲೈಂಗಿಕ ಕಿರುಕುಳ ಕೊಟ್ಟಿದ್ದ. ಹೆದರಿಸಿ ಬೆದರಿಸಿದರೂ ದೈಹಿಕ ಸಂಪರ್ಕಕ್ಕೆ ಸಹಕರಿಸಲು ಒಪ್ಪದಿದ್ದಾಗ ಆಕೆಯನ್ನು ಕೊಂದು ಪರಾರಿಯಾಗಿದ್ದಾನೆ.
ದೇವೇಂದ್ರನ್​ ಪರಾರಿಯಾಗಿರುವ ಕೊಲೆಗಾರ. ಶಶಿಕಲಾ ಕೊಲೆಯಾದಾಕೆ. ತಮಿಳುನಾಡಿನ ಚೆಂಗಾಲಪಟ್ಟು ಜಿಲ್ಲೆಯ ಚೆಯ್ಯೂರು ಸಮೀಪದ ನೈನಾರ್​ ಕುಪ್ಪಂ ಎಂಬಲ್ಲಿ ಈ ಕೊಲೆ ನಡೆದಿದೆ. ಕೊಲೆಗೀಡಾದ ಯುವತಿಯ ಸಹೋದರ ನೀಡಿರುವ ದೂರನ್ನು ಸ್ವೀಕರಿಸಿ, ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಶಶಿಕಲಾ ನೈನಾರ್​ ಕುಪ್ಪಂ ಬಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಿನವೂ ಈಕೆಯನ್ನು ಹಿಂಬಾಲಿಸುತ್ತಿದ್ದ ದೇವೇಂದ್ರನ್​ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅದೊಂದು ದಿನ ಈಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಲೇಬೇಕು ಎಂಬ ಹಟಕ್ಕೆ ಬಿದ್ದ ಆತ, ಅದಕ್ಕಾಗಿ ಆಕೆಯನ್ನು ಪೀಡಿಸಿದ್ದ. ಆದರೆ ಆಕೆ ಒಪ್ಪದಿದ್ದಾಗ ಆಕೆಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ:ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ
ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದ:ದೇವೇಂದ್ರನ್​ ತನ್ನ ಸಹೋದರ ಪುರುಷೋತ್ತಮನ ಜತೆಗೂಡಿ ಶಶಿಕಲಾ ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದ. ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್​ ಮಾಡಿ, ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆ ದೇವೇಂದ್ರನ್​ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಆದರೆ ತುಂಬಾ ದಿಟ್ಟೆಯಾಗಿದ್ದ ಶಶಿಕಲಾ ಇದಾವುದಕ್ಕೂ ಜಗ್ಗಿರಲಿಲ್ಲ. ಅಲ್ಲದೆ ತನ್ನ ಪಾಲಕರಿಗೆ ಈ ಬಗ್ಗೆ ತಿಳಿಸಿ ತಕ್ಕಶಾಸ್ತಿ ಮಾಡಿಸುವುದಾಗಿ ದೇವೇಂದ್ರನ್​ನನ್ನೇ ಬೆದರಿಸಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಾದ ದೇವೇಂದ್ರನ್​ ಕತ್ತು ಹಿಸುಕಿ ಆಕೆಯನ್ನು ಕೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲು ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸಂಬಳ ಕೋಡೋಕೆ ಕಾಸಿಲ್ಲ ಎನ್ನುವ ಸರ್ಕಾರಕ್ಕೆ ಇದ್ಯಾಕೆ ಬೇಕು..? ಸಾಮಾನ್ಯರ ಆಕ್ರೋಶಕ್ಕೂ ಕಾರಣವಿಲ್ಲದಿಲ್ಲ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
