ನವದೆಹಲಿ: ಮೆಟ್ರೋ ರೈಲುಗಳಲ್ಲಿ ಇತ್ತೀಚೆಗೆ ಕೆಲವು ಅಸಹ್ಯಕರ ಘಟನೆಗಳು ನಡೆಯುತ್ತಿರುವುದು ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಸಂಬಂಧಿತ ಸಂಸ್ಥೆಗಳು ಇದೀಗ ಮತ್ತೊಂದು ಮಹತ್ವದ ನಿರ್ಣಯ ತಳೆದಿವೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.
ಸೋಷಿಯಲ್ ಮೀಡಿಯಾ ಕ್ರೇಜ್​ನ ಈ ಕಾಲದಲ್ಲಿ ಯುವಪೀಳಿಗೆ ರೀಲ್ಸ್​ಗಳಿಗೆ ಮಾರುಹೋಗಿದ್ದಾರೆ. ಎಲ್ಲೆಂದರಲ್ಲಿ ರೀಲ್ಸ್ ಮಾಡುತ್ತಿರುವ ಯುವಕ-ಯುವತಿಯರಿಗೆ ಇನ್ನು ಮುಂದೆ ಮೆಟ್ರೋ ರೈಲುಗಳಲ್ಲಿ ಖಂಡಿತ ಅವಕಾಶ ಇರುವುದಿಲ್ಲ. ದೆಹಲಿ ಮೆಟ್ರೋ ರೈಲು ನಿಗಮ ಇಂಥದ್ದೊಂದು ಸೂಚನೆಯನ್ನು ಹೊರಡಿಸಿದೆ.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
‘ಜಾನಿ ಜಾನಿ ಎಸ್​ ಪಾಪ’ ಶೈಲಿಯಲ್ಲಿ ಕ್ರಿಯೇಟಿವ್ ಆಗಿಯೇ ಈ ಸೂಚನೆಯನ್ನು ನೀಡಲಾಗಿದೆ. ‘ಜಾನಿ ಜಾನಿ ಎಸ್​ ಪಾಪ, ಮೇಕಿಂಗ್ ರೀಲ್ಸ್ ಇನ್ ಮೆಟ್ರೋ ನೋ ಪಾಪ’ ಎಂಬ ಜಾಹೀರಾತು ಮೂಲಕ ಈ ಸೂಚನೆ ನೀಡಲಾಗಿದೆ. ಇತರ ಪ್ರಯಾಣಿಕರಿಗೆ ಕಿರಿಕಿರಿ ಮಾಡುವಂಥ ಯಾವುದೇ ವರ್ತನೆಗಳನ್ನು ದೆಹಲಿ ಮೆಟ್ರೋ ಒಳಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಡಿಎಂಆರ್​ಸಿ ತಿಳಿಸಿದೆ.
Open your camera, Na Na Na!#DelhiMetropic.twitter.com/6hT6jxC007
— Delhi Metro Rail Corporation I कृपया मास्क पहनें😷 (@OfficialDMRC)June 16, 2023

ಇದು ದೇಶದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲೇ ಪ್ರಥಮ: ಈ ಆಸ್ಪತ್ರೆಯ ವೈದ್ಯರು ದೇಹದೊಳಗೇ ಓಡಾಡಿ ಪರೀಕ್ಷಿಸುತ್ತಾರೆ!

ಈ ಕಾರ್ ‘ರೇಂಜೇ’ ಬೇರೆ!: ಬ್ಯಾಟರಿ ಫುಲ್ ಚಾರ್ಜ್ ಮಾಡಲು ಹತ್ತೇ ನಿಮಿಷ, ಒಮ್ಮೆ ಚಾರ್ಜ್​ ಮಾಡಿದ್ರೆ 1,200 ಕಿ.ಮೀ. ಪ್ರಯಾಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
