ನವದೆಹಲಿ:ಭಾರತದ ಕರೊನಾ-ತಡೆ ವ್ಯಾಕ್ಸಿನ್​ ಬತ್ತಳಿಕೆಗೆ ಜಗತ್ತಿನ ಪ್ರಪ್ರಥಮ ಡಿಎನ್​ಎ ವ್ಯಾಕ್ಸಿನ್​ ಸದ್ಯವೇ ಸೇರ್ಪಡೆಗೊಳ್ಳಲಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್​ ಮಾಂಡವೀಯ ಸಂಸತ್ತಿಗೆ ಈ ಮಾಹಿತಿ ಒದಗಿಸಿದ್ದಾರೆ. ಡಿಎನ್​ಎ ಲಸಿಕೆ ಉತ್ಪಾದಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದವರು ಹೇಳಿದ್ದಾರೆ.
ಅಹಮದಾಬಾದ್​ನ ಝೈಡುಸ್​ ಕ್ಯಾಡಿಲಾ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಝೈಕೊವ್​-ಡಿ ಎಂದು ಹೆಸರಿಡಲಾಗಿದೆ. ಝೈಕೊವ್​-ಡಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಝೈಡುಸ್​ ಕ್ಯಾಡಿಲಾ ಈ ತಿಂಗಳ ಆರಂಭದಲ್ಲಿ ಭಾರತ ಔಷಧಗಳ ಮಹಾ ನಿಯಂತ್ರಕರಿಗೆ (ಡಿಸಿಜಿಐ) ಮನವಿ ಸಲ್ಲಿಸಿದೆ.
* ಪ್ಲಾಸ್ಮಿಡ್​ ಡಿಎನ್​ಎ ವ್ಯಾಕ್ಸಿನ್​: ಇದು ಜಗತ್ತಿನ ಮೊದಲ ಪ್ಲಾಸ್ಮಿಡ್​ ಡಿಎನ್​ಎ ಲಸಿಕೆಯಾಗಿದೆ. ಕೋವಿಡ್​ ವಿರುದ್ಧ ಶೇಕಡ 66.6 ಪರಿಣಾಮಕಾರಿಯಾಗಿದೆ ಎಂಬುದು ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ನಲ್ಲಿ ಸಾಬೀತಾಗಿದೆ.
ಪರೀಕ್ಷೆಯಲ್ಲಿ ಭಾಗವಹಿಸಿದ ಯಾವುದೇ ಸ್ವಯಂಸೇವಕರಲ್ಲಿ ಗಂಭೀರ ವ್ಯಾಧಿ ಹರಡಿಲ್ಲ ಅಥವಾ ಯಾರೂ ಮೃತಪಟ್ಟಿಲ್ಲ ಎಂದು ಕಂಪೆನಿ ಪ್ರಕಟಿಸಿದೆ. ಡಿಸಿಜಿಐ, ಕ್ಯಾಡಿಲಾ ಕಂಪೆನಿಯಿಂದ ಹೆಚ್ಚುವರಿ ದತ್ತಾಂಶ ಕೋರಿದೆ. ತೃಪ್ತಿಯಾಗಿ ಅನುಮತಿ ನೀಡಿದರೆ ಆಗಸ್ಟ್​ನಲ್ಲಿ ಝೈಕೊವ್​-ಡಿ ಲಸಿಕೆ ಉತ್ಪಾದನೆ ಆರಂಭವಾಗಲಿದ್ದು ಅದು ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ನಂತರ ಎರಡನೇ ದೇಶೀಯ ಲಸಿಕೆ ಆಗಲಿದೆ.* 50 ಕೇಂದ್ರಗಳಲ್ಲಿ: ದೇಶದಾದ್ಯಂತ 50 ಕೇಂದ್ರಗಳಲ್ಲಿ ನಡೆಸಿದ ಮೂರನೇ ಹಂತದ ಪರೀೆಗಳಲ್ಲಿ 28,000ಕ್ಕೂ ಅಧಿಕ ಸ್ವಯಂಸೇವಕರು ಭಾಗಿಯಾಗಿದ್ದರು.
ಕೋವಿಡ್​ ಮಹಾಮಾರಿಯ ಎರಡನೇ ಅಲೆಯ ಉಚ್ಛಾ ್ರಯ ಅವಧಿಯ ನಡುವೆ ಈ ವ್ಯಾಕ್ಸಿನ್​ ಪರೀೆ ನಡೆಸಲಾಗಿದ್ದು ಅದರ ಪರಿಣಾಮದ ಮಟ್ಟ, ವಿಶೇಷವಾಗಿ ಡೆಲ್ಟಾ ಸಹಿತ ಹೊಸ ರೂಪಾಂತರಿಗಳ ವಿರುದ್ಧ ಸೆಣಸುವ ವಿಶ್ವಾಸಕ್ಕೆ ಬಲ ತುಂಬಿದೆ ಎಂದು ಝೈಡುಸ್​ ಕ್ಯಾಡಿಲಾ ಹೇಳಿದೆ.
* 12-18 ವಯಸ್ಸಿನ ಮಕ್ಕಳಲ್ಲೂ ಇದನ್ನೂ ಪರೀಕ್ಷಿಸಲಾಗಿದ್ದು ಸುರತವೆನ್ನುವುದು ಖಾತರಿಪಟ್ಟಿದೆ.
* ವಾಷಿರ್ಕ 12 ಕೋಟಿ ಡೋಸ್​: ಪ್ರತಿ ವರ್ಷ 12 ಕೋಟಿ ಡೋಸ್​ ಝೈಕೊವ್​-ಡಿ ಲಸಿಕೆ ಉತ್ಪಾದಿಸುವುದು ಕಂಪೆನಿಯ ಗುರಿಯಾಗಿದೆ.
ಆಸ್ಟ್ರೆಲಿಯಾದಲ್ಲಿ ಹೆಚ್ಚಿದ ಸೋಂಕು
ಆಸ್ಟ್ರೆಲಿಯಾದ ಅರ್ಧಕ್ಕಿಂತ ಹೆಚ್ಚು ಜನರು ಲಾಕ್​ಡೌನ್​ನಿಂದಾಗಿ ಮನೆಯೊಳಗೇ ಇದ್ದರೂ ಎರಡು ಅತಿ ದೊಡ್ಡ ರಾಜ್ಯಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚಿದ್ದು ಲಾಕ್​ಡೌನ್​ ಸಡಿಲಿಕೆಯ ಸಂಭಾವ್ಯತೆಗೆ ತಣ್ಣೀರೆರಚಿದಂತಾಗಿದೆ. ಅಪಾಯಕಾರಿ ಡೆಲ್ಟಾ ಪ್ರಭೇದ ಹೆಚ್ಚಿನ ಹಾವಳಿ ನಡೆಸುತ್ತಿದೆ. ದೇಶದ ಅತಿ ಹೆಚ್ಚು ಜನಸಂಖ್ಯೆ ನಗರವಾದ ಸಿಡ್ನಿಯನ್ನು ಒಳಗೊಂಡಿರುವ ನ್ಯೂ ಸೌತ್​ ವೇಲ್ಸ್​ ರಾಜ್ಯದಲ್ಲಿ ಬುಧವಾರ 110 ಹೊಸ ಪ್ರಕರಣ ಪತ್ತೆಯಾಗಿದೆ. ಮಂಗಳವಾರ ಅಲ್ಲಿ 78 ಕೇಸ್​ ವರದಿಯಾಗಿತ್ತು. ವಿಕ್ಟೋರಿಯಾ ರಾಜ್ಯದಲ್ಲಿ 22 ಹೊಸ ಪ್ರಕರಣಗಳು ದಾಖಲಾಗಿವೆ. ಮಂಗಳವಾರ 9 ಪ್ರಕರಣಗಳು ಕಂಡು ಬಂದಿದ್ದವು. ಕೆಲವು ವಾರಗಳ ಹಿಂದೆಯೇ ಲಾಕ್​ಡೌನ್​ ವಿಧಿಸಿರದಿದ್ದರೆ ಇಂದಿನ 110ರ ಬದಲು ಸಾವಿರಾರು ಕೇಸ್​ಗಳು ದಾಖಲಾಗುತ್ತಿದ್ದವು ಎಂದು ನ್ಯೂ ಸೌತ್​ ವೇಲ್ಸ್​ ಪ್ರಧಾನಿ ಗ್ಲಾಡಿಸ್​ ಬೆರಂಜಿಕ್ಲಿಯಾನ್​ ಹೇಳಿದ್ದಾರೆ. ಸೋಂಕಿನ ವಿರುದ್ಧ ಎಲ್ಲರೂ ಕಠಿಣ ಹೋರಾಟ ನಡೆಸಬೇಕಾಗಿದೆ ಎಂದಿದ್ದಾರೆ.
ದೇಶದಲ್ಲಿ ಸೋಂಕೇ ಇಲ್ಲವೆನ್ನುವ ಸರ್ಕಾರ!ಭಾರತದಲ್ಲಿ ಕೋವಿಡ್​-19 ಸೋಂಕೇ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಸದ್ಯದಲ್ಲೇ ಹೇಳಿದರೂ ಅಚ್ಚರಿಯಿಲ್ಲ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಬುಧವಾರ ಕೇಂದ್ರ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ದೇಶದಲ್ಲಿ ಯಾರೂ ಮೆಡಿಕಲ್​ ಆಕ್ಸಿಜನ್​ ಕೊರತೆಯಿಂದ ಮೃತಪಟ್ಟಿಲ್ಲ ಎಂದು ಸರ್ಕಾರ ಮಂಗಳವಾರ ಸಂಸತ್ತಿಗೆ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಜೈನ್​, ಕೇಂದ್ರದ ಧೋರಣೆಯನ್ನು ಟೀಕಿಸಿದ್ದಾರೆ. ದೆಹಲಿ ಮತ್ತು ದೇಶದ ಅನೇಕ ಭಾಗಗಳಲ್ಲಿ ಹಲವಾರು ಕೋವಿಡ್​ ರೋಗಿಗಳು ಆಮ್ಲಜನಕ ಕೊರತೆಯಿಂದ ಸತ್ತಿದ್ದರು ಎಂದವರು ನೆನಪಿಸಿದ್ದಾರೆ.“ದೇಶದಲ್ಲಿ ಕರೊನಾವೇ ಇಲ್ಲ ಎಂದು ಕೇಂದ್ರ ಸರ್ಕಾರ ಇಷ್ಟರಲ್ಲೇ ಹೇಳಬಹುದು. ಆಕ್ಸಿಜನ್​ ಕೊರತೆಯಿಂದ ಯಾರೂ ಸತ್ತಿಲ್ಲವಾದರೆ ಆಮ್ಲಜನಕ ಕೊರತೆ ವಿಚಾರದಲ್ಲಿ ಆಸ್ಪತ್ರೆಗಳು ಕೋರ್ಟ್​ಗೆ ಯಾಕೆ ಮೊರೆ ಹೋಗುತ್ತಿದ್ದವು?’ ಎಂಬುದು ಜೈನ್​ ಪ್ರಶ್ನೆ. “ಸರ್ಕಾರದ ಹೇಳಿಕೆ ಸಂಪೂರ್ಣ ಸುಳ್ಳು’ ಎಂದರು.
ದೇಶದಲ್ಲಿ ಸೋಂಕು, ಸಾವು ಗಣನೀಯ ಏರಿಕೆಭಾರತದಲ್ಲಿ ಬುಧವಾರ ಬೆಳಿಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 42,015 ಕರೊನಾ ಸೋಂಕಿನ ಹೊಸ ಪ್ರಕರಣ ದೃಢಪಟ್ಟಿದೆ. ಇದು ಹಿಂದಿನ ದಿನಕ್ಕಿಂತಲೂ ಜಾಸ್ತಿಯಾಗಿದೆ. ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,12,16,337ಕ್ಕೆ ಏರಿದೆ. ಮಂಗಳವಾರ 30,093 ಕೇಸ್​ಗಳು ಪತ್ತೆಯಾಗಿದ್ದವು. ಸೋಂಕಿಗೆ ಕಳೆದ 24 ಗಂಟೆಯಲ್ಲಿ 3,998 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 4,18,480ಕ್ಕೆ ತಲುಪಿದೆ. ದೇಶದಲ್ಲಿ 4,07,170 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು 41,54,72,455 ಡೋಸ್​ ಲಸಿಕೆ ಹಾಕಲಾಗಿದೆ.
1,19,000 ಮಕ್ಕಳು ಅನಾಥರು21 ದೇಶಗಳಲ್ಲಿ ಒಟ್ಟು 15 ಲಕ್ಷಕ್ಕೂ ಹೆಚ್ಚು ಮಕ್ಕಳು ಕರೊನಾಘಾತದಿಂದ ಅನಾಥರಾಗಿದ್ದಾರೆ. ಆ ಪೈಕಿ ಭಾರತದ 1,19,000 ಮಕ್ಕಳು ಹೆತ್ತವರು ಅಥವಾ ಪೋಷಕರನ್ನು ಕಳೆದು ಕೊಂಡಿದ್ದಾರೆ ಎಂದು ಲ್ಯಾನ್ಸೆಟ್​ ವರದಿ ತಿಳಿಸಿದೆ. ಕರೊನಾ ಸಾಂಕ್ರಾಮಿಕತೆಯ ಮೊದಲ 14 ತಿಂಗಳಲ್ಲಿ ಈ ದುರಂತ ಸಂಭವಿಸಿದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಲ್ಯಾನ್ಸೆಟ್​ ತಿಳಿಸಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ (ಎನ್​ಐಎಚ್​) ಭಾಗವಾಗಿರುವ ರಾಷ್ಟ್ರೀಯ ಮಾದಕದ್ರವ್ಯ ದುರುಪಯೋಗ ತಡೆ ಸಂಸ್ಥೆ (ಎನ್​ಐಡಿಎ) ಈ ಅಧ್ಯಯನಕ್ಕೆ ಭಾಗಶಃ ನೆರವು ನೀಡಿದೆ. ಭಾರತದಲ್ಲಿ 25,500 ಮಕ್ಕಳ ತಾಯಂದಿರು, 90,751 ಮಕ್ಕಳ ತಂದೆ ಹಾಗೂ 12 ಮಕ್ಕಳ ತಂದೆ-ತಾಯಿ ಇಬ್ಬರೂ ಕೋವಿಡ್​ಗೆ ಬಲಿಯಾಗಿದ್ದಾರೆ.
ಜಗತ್ತಿನಾದ್ಯಂತ ಅಂದಾಜು 11,34,000 ಮಕ್ಕಳು ಹೆತ್ತವರು ಅಥವಾ ಆರೈಕೆ ಮಾಡುತ್ತಿದ್ದ ಅಜ್ಜ-ಅಜ್ಜಿಯರನ್ನು ಕಳೆದು ಕೊಂಡಿದ್ದಾರೆ. ಒಟ್ಟಾರೆಯಾಗಿ 15,62,000 ಮಕ್ಕಳು ಕರೊನಾ ಮಹಾಮಾರಿಯಿಂದಾಗಿ ಹೆತ್ತವರ ಅಥವಾ ಪೋಷಕರ ಸಾವನ್ನು ಅನುಭವಿಸಿದ್ದಾರೆ ಎಂದು ಎನ್​ಐಎಚ್​ ತಿಳಿಸಿದೆ. ಭಾರತವಲ್ಲದೆ ದಕ್ಷಿಣ ಆಫ್ರಿಕಾ, ಪೆರು, ಅಮೆರಿಕ, ಬ್ರೆಜಿಲ್​ ಮತ್ತು ಮೆಕ್ಸಿಕೊ ಮುಂತಾದ ದೇಶಗಳ ಮಕ್ಕಳು ದುಃಖದ ಮಡುವಿಗೆ ಬಿದ್ದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 2 =
Remember me
