ಮುಂಬೈ:ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಭವಿಷ್ಯ ವಿರೋಧ ಪಕ್ಷದ ಕೈಯಲ್ಲಿಲ್ಲ ಎಂದು ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದಾರೆ.ಸಂಸದ ಸಂಜಯ್​ ರಾವುತ್​ ಶಿವಸೇನಾ ಮುಖವಾಣಿ ಸಾಮ್ನಾಗಾಗಿ ನಡೆಸಿದ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ತಾಕತ್ತಿದ್ದರೆ ಸರ್ಕಾರವನ್ನು ಉರುಳಿಸಲಿ ಎಂದು ಸವಾಲು ಹಾಕಿದ್ದಾರೆ.
ಸರ್ಕಾರ ಮೂರು ಗಾಲಿಯ ಗಾಡಿಯಿದ್ದಂತೆ ಎಂಬ ವಿಪಕ್ಷದ ಆರೋಪಕ್ಕೆ ತೀಕ್ಷ್ಣ ಉತ್ತರ ನೀಡಿರುವ ಉದ್ಧವ್​, ಒಂದು ವೇಳೆ ಬುಲೆಟ್​ ಟ್ರೈನ್​ ಹಾಗೂ ತ್ರಿಚಕ್ರ ವಾಹನದ ಆಯ್ಕೆ ನೀಡಿದಲ್ಲಿ ನಾನು ಬಡವರು ಬಳಸುವ ತ್ರಿಚಕ್ರ ವಾಹನವನ್ನೇ ಆಯ್ದುಕೊಳ್ಳುತ್ತೇನೆ ಎಂದಿದ್ದಾರೆ. ಜತೆಗೆ ಬುಲೆಟ್​ ಟ್ರೇನ್​ ಯೋಜನೆ ಬೇಡ ಎಂದಿದ್ದಕ್ಕೂ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಇದೆಂಥ ಹಿನ್ನಡೆ?
ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ನ​ ಮೈತ್ರಿ ಸರ್ಕಾರ ಬಡವರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಸರ್ಕಾರ ಸುಭದ್ರವಾಗಿದ್ದು, ನಾನು ಚಾಲಕನಾಗಿದ್ದರೆ, ಇನ್ನಿಬ್ಬರು ಜತೆಗಿದ್ದಾರೆ. ಸರ್ಕಾರದ ವಿಷಯಗಳಲ್ಲಿ ಶರದ್​ ಪವಾರ್​ ಸಲಹೆ ಪಡೆಯುತ್ತೇನೆ. ಆಗಾಗ ಸೋನಿಯಾ ಗಾಂಧಿ ಜತೆಗೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಾನು ಈ ಹಿಂದೆ ಕೇಂದ್ರದ ಎನ್​ಡಿಎ ಸರ್ಕಾರದ ಸಭೆಗಳಲ್ಲಿ ಭಾಗವಹಿಸುತ್ತಿದೆ. ಅಲ್ಲಿ 30-35 ಪ್ರಾದೇಶಿಕ ಪಕ್ಷಗಳ ನಾಯಕರಿರುತ್ತಿದ್ದರು. ಹಾಗಾದರೆ ಕೇಂದ್ರ ಸರ್ಕಾರವನ್ನು ಟ್ರೇನ್​ ಸರ್ಕಾರ ಎಂದು ಕರೆಯಬೇಕೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ;ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ
ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಯತ್ನ ನಡೆಸಿದೆ. ಆದರೆ, ಮಹಾರಾಷ್ಟ್ರದಲ್ಲಿ ಆಪರೇಷನ್​ ಕಮಲಕ್ಕೆ ಯಾವುದೇ ಯಶಸ್ಸು ದೊರೆಯುವುದಿಲ್ಲ ಎಂದು ಹೇಳಿದರು.
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + fourteen =
Remember me
