ಬೆಂಗಳೂರು:ನನ್ನ ಬಿಡುಗಡೆಗೆ ಸಂಬಂಧಪಟ್ಟ ಹಾಗೂ ಇನ್ಯಾವುದೇ ವೈಯಕ್ತಿಕ ವಿಚಾರವನ್ನು ಮೂರನೇ ವ್ಯಕ್ತಿಗೆ ತಿಳಿಸಬೇಡಿ ಎಂದು ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ,  2021 ಜನವರಿ 27ಕ್ಕೆ ಬಿಡುಗಡೆಯಾಗಲಿದ್ದಾರೆ ಎಂದು ಮಾಹಿತಿ ಹಕ್ಕು ಅರ್ಜಿಗೆ ಕಾರಾಗೃಹ ಅಧೀಕ್ಷಕರು ಉತ್ತರಿಸಿದ್ದರು. ಈ ವಿಚಾರ ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಬಿಡುಗಡೆ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನು 3ನೇ ವ್ಯಕ್ತಿಗಳಿಗೆ ತಿಳಿಸದಂತೆ ಕಾರಾಗೃಹ ಅಧಿಕಾರಿಗಳಿಗೆ ಶಶಿಕಲಾ ಮನವಿ ಮಾಡಿದ್ದಾರೆ.ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ: ತಲೆ ಮರೆಸಿಕೊಂಡಿದ್ದ ಆರೋಪಿ ಸೈಯದ್​ನನ್ನು ಬಂಧಿಸಿದ ಎನ್ಐಎ
ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್​​ ಸ್ವಾಮಿ ದಾಖಲಿಸಿದ್ದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ 4 ವರ್ಷ ಸಜೆ ಮತ್ತು 10 ಕೋಟಿ ರೂ. ದಂಡ ವಿಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿ 2017ರ ಫೆ.15ರಿಂದ ಶಶಿಕಲಾ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಶಶಿಕಲಾ ಅವಧಿಗೂ ಮುನ್ನ ಬಿಡುಗಡೆ ಆಗಲಿದ್ದಾರೆ ಎಂಬ ಚರ್ಚೆಗಳು ತಮಿಳುನಾಡು ರಾಜಕೀಯ ವಲಯದಲ್ಲಿ ನಡೆಯುತ್ತಿದ್ದವು. ಈ ಕುರಿತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಸಾಮಾಜಿಕ ಕಾರ್ಯಕರ್ತ ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ:ಬ್ಯಾಂಕ್​ ದರೋಡೆಕೋರರ ಚಾಲಕಿತನದಿಂದ ಕಂಗೆಟ್ಟ ಪೊಲೀಸರು: ಸಿಸಿಟಿವಿ ವೀಕ್ಷಿಸಿದವರಿಗೆ ಕಾದಿತ್ತು ಶಾಕ್​!
ಇದಕ್ಕೆ ಜೈಲು ಮುಖ್ಯ ಅಧೀಕ್ಷಕರು ಉತ್ತರಿಸಿದ್ದು, 2021ರ ಜನವರಿ 27ಕ್ಕೆ ಶಶಿಕಲಾ ಸಜಾ ಅವಧಿ ಮುಗಿಯಲಿದೆ. ಕೋರ್ಟ್ ತೀರ್ಪಿನಂತೆ 10 ಕೋಟಿ ರೂ. ದಂಡ ಪಾವತಿ ಮಾಡದೆ ನಿಯಮ ತೀರ್ಪು ಉಲ್ಲಂಸಿದರೆ 2022ರ ಫೆ.27ವರೆಗೆ ಶಿಕ್ಷೆ ಮುಂದುವರೆಯಲಿದೆ ಎಂದು ಜೈಲು ಅಧಿಕಾರಿಗಳು ಆರ್‌ಟಿಎಗೆ ಮಾಹಿತಿ ನೀಡಿದ್ದಾರೆ.
ಕಾನೂನಿನಲ್ಲಿ ಅವಕಾಶ ಇರುವಂತೆ 2017ರ ಅಕ್ಟೋಬರ್, 2018ರ ಮಾರ್ಚ್‌ನಲ್ಲಿ ತಲಾ ಐದು ದಿನ ಮತ್ತು ತನ್ನ ಪತಿ ನಟರಾಜನ್ ಮೃತಪಟ್ಟಾಗ 12 ದಿನ ಪೆರೋಲ್ ಪಡೆದಿದ್ದರು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿದರೆ ಶಶಿಕಲಾ ಕೋರ್ಟ್ ವಿಧಿಸಿದ್ದ ಶಿಕ್ಷೆಯಲ್ಲಿ ಬಹುತೇಕ ಅವಧಿ ಪೂರ್ಣಗೊಳಿಸಿದ್ದಾರೆ. 4 ತಿಂಗಳು ಮಾತ್ರ ಬಾಕಿ ಇದೆ. ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಮೃತಪಟ್ಟ ಮೇಲೆ ರಾಜಕೀಯ ಮುಖಂಡರು ತಮ್ಮ ಪ್ರಾಬಲ್ಯ ಬೆಳೆಸಿಕೊಂಡಿಲ್ಲ. ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಅಲೆ ಮೂಡಿಸುತ್ತಾರಾ ಎಂಬುದನ್ನು ಎಲ್ಲರು ಕಾದು ನೋಡಬೇಕಾಗಿದೆ.
ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಗೆ ಕರೊನಾ ಜತೆಗೆ ಡೆಂಘೆ ಆಘಾತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 15 =
Remember me
