ಮುಂಬೈ:ಸದ್ಯ ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಮಹಾರಾಷ್ಟ್ರ ಸರ್ಕಾರ ಸದ್ಯ ಪತನದ ಅಂಚಿನಲ್ಲಿದೆ. ಕೊನೆಯ ಹಂತದವರೆಗೂ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಉದ್ಧವ್​ ಠಾಕ್ರೆ ರೆಬೆಲ್​ ಶಾಸಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ನೀವೂ ಏನಾದರೂ ಮಾಡಿಕೊಳ್ಳಿ, ನಿಮಗೆ ಅನ್ನಿಸಿದ್ದನ್ನು ಮಾಡಿ ಆದರೆ ಬಾಳಾ ಸಾಹೇಬ್​ ಠಾಕ್ರೆ ಅವರ ಹೆಸರು ಮಾತ್ರ ಎಲ್ಲಿಯೂ ಬಳಸುವಂತಿಲ್ಲ ಎಂದು ರೆಬೆಲ್​ ಶಾಸಕರಿಗೆ ಹೇಳಿದ್ದಾರೆ.
ನಿಮ್ಮ ವಿಚಾರದ ಮಧ್ಯೆ ನಾನು ಬರುವುದಿಲ್ಲ. ನೀವು ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಲು ಅರ್ಹರಿದ್ದೀರಿ, ಆದರೆ ಬಾಳಾಸಾಹೇಬ್​ ಠಾಕ್ರೆ ಎಲ್ಲಿಯಾದರೂ ಬಳಸಿದ್ದು ಕಂಡುಬಂದರೆ ಸುಮ್ಮನಿರುವುದಿಲ್ಲ ಎಂದಿದ್ದಾರೆ.
ಬಾಳಾಸಾಹೇಬ್​ ಠಾಕ್ರೆ ಅವರ ನಿಜವಾದ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿರುವ ಏಕನಾಥ್​ ಶಿಂಧೆ ಬಣದ ಶಾಸಕ ದೀಪಕ್​ ಕೇಸರ್ಕರ್​ ಘೋಷಿಸಿದ್ದರು. ಒಡೆದ ಒಂದು ಗುಂಪು ಯಾವುದೇ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ ಎಂದು ಹೇಳಿದ್ದರು. ಇದೀಗ ಇದೇ ವಿಚಾರ ಉದ್ಧವ್​​ ಠಾಕ್ರೆಗೆ ಮತ್ತಷ್ಟು ಕೆಣಕುವಂತೆ ಮಾಡಿದೆ.(ಏಜೆನ್ಸೀಸ್​)
ದತ್ತಾತ್ರೇಯ ದೇವರ ಹೆಸರಲ್ಲಿ ಭಕ್ತರಿಗೆ “ಮಹಾ ವಂಚನೆ” ಪ್ರಕರಣ ಸೆನ್​​​ ಪೊಲೀಸರಿಗೆ ವರ್ಗಾವಣೆ: ಐವರಿಗೆ ನೋಟಿಸ್​​ ಜಾರಿ

ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 19 =
Remember me
