ಅಲಹಾಬಾದ್:ನಟ ಪ್ರಭಾಸ್​ ಅಭಿನಯದ ಆದಿಪುರುಷ್​ ಚಿತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಚಿತ್ರವನ್ನು ಬ್ಯಾನ್​ ಮಾಡಬೇಕೆಂದು ಕೆಲವರು ಕೋರ್ಟ್​ ಮೆಟ್ಟಿಲನ್ನು ಏರಿದ್ದರು. ಈ ಕುರಿತು ಅರ್ಜಿ ವಿಚಾರಣೆಯನ್ನು ನಡೆಸಿದ ಅಲಹಾಬಾದ್ ಹೈಕೋರ್ಟ್ ಚಿತ್ರ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದೆ.
ಆದಿಪುರುಷ್​​ ಚಿತ್ರದ ಡೈಲಾಗ್‌ಗಳು ದೊಡ್ಡ ವರ್ಗದ ಪ್ರೇಕ್ಷಕರನ್ನು ಕೆರಳಿಸಿದ್ದು,ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ್ ಮುಂತಶಿರ್ ಶುಕ್ಲಾರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ:ಚಿತ್ರಸಾಹಿತಿ, ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್ ವಿಧಿವಶ
ರಾಮಾಯಣವು ನಮಗೆ ಮಾದರಿಯಾಗಿದ್ದು, ಜನರು ಮನೆಯಿಂದ ಹೊರಡುವ ಮೊದಲು ಇದನ್ನು ಓದುತ್ತಾರೆ. ಚಿತ್ರದಲ್ಲಿನ ಸಂಭಾಷಣೆಯ ಸ್ವರೂಪವು ಗಂಭೀರ ಸಮಸ್ಯೆಯಾಗಿದ್ದು, ಚಲನಚಿತ್ರಗಳು ಕೆಲವು ಸೂಕ್ಷ್ಮ ವಿಷಯಗಳನ್ನು ಮುಟ್ಟಬಾರದು ಎಂದು ಕೋರ್ಟ್​ ಹೇಳಿದೆ.
ಜತೆಗೆ, ಸೆನ್ಸಾರ್ ಮಂಡಳಿಯು ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ ಎಂದು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದ್ದು, ಜನರು ಚಿತ್ರವನ್ನು ನೋಡಿದ ಬಳಿಕವೂ ಸುಮ್ಮನಿದ್ದು, ಇದೊಂದು ಒಳ್ಳೆಯ ವಿಚಾರವಾಗಿದೆ. ಹನುಮಂತ ಮತ್ತು ಸೀತೆಯನ್ನು ಏನೂ ಇಲ್ಲ ಎಂಬಂತೆ ಚಿತ್ರದಲ್ಲಿ ತೋರಿಸಲಾಗಿದ್ದು, ಕೆಲವು ದೃಶ್ಯಗಳನ್ನು ಚಿಕ್ಕಮಕ್ಕಳು ನೋಡಲು ಅಸಾಧ್ಯ ಎಂದು ಚಾಟಿ ಬೀಸಿದೆ.
ಇದನ್ನೂ ಓದಿ:VIDEO | ಫೇಸ್‌ಬುಕ್ ಲೈವ್‌ನಲ್ಲಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಿದ ಕೈದಿ!
ಇದೊಂದು ಅತ್ಯಂತ ಗಂಭೀರ ವಿಷಯ ಎಂದು ಹೇಳಿರುವ ಕೋರ್ಟ್​, ಜನರು ಸಹಿಷ್ಣುರಾಗಿದ್ದಾರೆಂದು ಅದನ್ನು ಸಹ ಪರೀಕ್ಷಿಸುತ್ತೀರಾ? ಎಂದು  ಚಿತ್ರತಂಡವನ್ನು ಪ್ರಶ್ನಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
