ಅನೇಕ ಜನರುತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್​ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.
ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.
ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ಹಸ್ತದ ಮಧ್ಯಭಾಗದ ರೇಖೆಗಳ ನಡುವೆ ‘X’ ಆಕಾರದಲ್ಲಿ ಗುರುತು ಇರುತ್ತದೆ. ಪ್ರಪಂಚದಲ್ಲಿ ಕೇವಲ 5 ಪ್ರತಿಶತ ಜನರು ಮಾತ್ರ ಈ ಗುರುತು ಹೊಂದಿರುತ್ತಾರೆ. ಹಸ್ತದ ಮೇಲೆ ಎಕ್ಸ್ ಆಕಾರದ ಗುರುತು ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.
ಹಸ್ತದ ಮಧ್ಯ ಭಾಗದಲ್ಲಿ X ಮಾರ್ಕ್ ಇರುವವರು ತುಂಬಾ ಪ್ರತಿಭಾವಂತರು ಎಂದರ್ಥ. ಈ ವ್ಯಕ್ತಿಗಳು ಯಶಸ್ಸಿನ ಹಾದಿಯಲ್ಲಿ ನಡೆಯುವುದಲ್ಲದೆ ಇತರರನ್ನು ಆ ದಾರಿಯಲ್ಲಿ ಮುನ್ನಡೆಸುತ್ತಾರೆ. ಈ ಚಿಹ್ನೆಯನ್ನು ಹೊಂದಿರುವ ಜನರು ಜಗತ್ತನ್ನು ಸಹ ಗೆಲ್ಲುತ್ತಾರಂತೆ! ಜಗತ್ತನ್ನು ಗೆದ್ದ ಅಲೆಕ್ಸಾಂಡರ್ ತನ್ನ ತೋಳಿನ ಮೇಲೆ ಈ X ಚಿಹ್ನೆಯನ್ನು ಹೊಂದಿದ್ದನು. ಅಲ್ಲದೆ, ಅಲೆಕ್ಸಾಂಡರ್ ಕೂಡ ತನ್ನ ಅಂಗೈ ಗೆರೆಗಳ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದ್ದನು ಎಂದು ಇತಿಹಾಸ ಹೇಳುತ್ತದೆ.
ಮಾಸ್ಕೋದ ಎಚ್​ಟಿಐ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅನೇಕ ಕೈ ರೇಖೆಗಳ ಮೇಲೆ ಈಗಾಗಲೇ ಸಂಶೋಧನೆ ಮಾಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈಯಲ್ಲೂ ಈ X ಗುರುತು ಇತ್ತು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಸಂಶೋಧನೆಯ ಪ್ರಕಾರ, ಎರಡೂ ಕೈಗಳಲ್ಲಿ X ಗುರುತು ಇದ್ದರೆ, ಅವರು ಪ್ರತಿಭಾವಂತರು ಹಾಗೂ ಪ್ರಬಲರು ಎಂಬರ್ಥವನ್ನು ಸೂಚಿಸುತ್ತದೆ. ಅಲ್ಲದೆ X ಗುರುತು ಹೊಂದಿರುವರಿಗೆ ಮೋಸ ಮಾಡುವುದು ತುಂಬಾನೇ ಕಷ್ಟ ಎನ್ನಲಾಗಿದೆ. ಇನ್ನು X ಚಿಹ್ನೆಯನ್ನು ಹೊಂದಿರುವ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿರುತ್ತಾರೆ. ಈ ಜನರು ಸಮಾಜದಲ್ಲಿ ಪ್ರಸಿದ್ಧರು ಮತ್ತು ಹೆಚ್ಚು ಗೌರವಾನ್ವಿತರು ಎಂದು ಸಂಶೋಧಕರು ಹೇಳಿದ್ದಾರೆ.(ಏಜೆನ್ಸೀಸ್​)
ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಮಾಂಸಕ್ಕಾಗಿ ಕೊಲ್ಲಬೇಡಿ ನಾವು ಸಹಾಯ ಮಾಡ್ತೀವಿ: ನಮೀಬಿಯಾ ಪ್ರಾಣಿಗಳ ರಕ್ಷಣೆಗೆ ಮಿಡಿದ ಅನಂತ್​ ಅಂಬಾನಿಯ ವಂತಾರಾ

ಮನುಷ್ಯರ ವಿರುದ್ಧ ಸೇಡಿನ ಸಮರ: ತೋಳಗಳ ಅಟ್ಟಹಾಸ ಹಿಂದಿದೆ ಮರಿಗಳನ್ನು ಕಳೆದುಕೊಂಡ ಆಕ್ರಂದನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + twenty =
Remember me
