ನವದೆಹಲಿ:ಕೇಂದ್ರ ಹಣಕಾಸು ಸಚಿವಾಲಯ ಕಂದಾಯ ವಿಭಾಗ, ಗಂಗಾಜಲ, ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ವಿನಾಯಿತಿ ಪಟ್ಟಿಯಲ್ಲಿವೆ ಎಂದು ಹೇಳಿದೆ. ಗಂಗಾ ಜಲ, ಕುಂಕುಮ, ಸಿಂದೂರ, ಕೈಬಳೆ ಇತ್ಯಾದಿಗಳಿಗೆ ಜಿಎಸ್​ಟಿ ತೆರಿಗೆ ಇರುವುದಿಲ್ಲ ಎಂದು ಸಿಬಿಐಸಿ (CBIC- central board of indirect taxes and customs)  ಹೇಳಿದೆ.
2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚಿಸಲಾಗಿದೆ. ಇವುಗಳನ್ನು ಜಿಎಸ್​ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿತ್ತು. ಜಿಎಸ್​ಟಿ ಜಾರಿಗೆ ಬಂದಾಗಿನಿಂದಲೂ ಈ ಐಟಂಗಳಿಗೆ ಜಿಎಸ್​ಟಿ ಇಲ್ಲ,’ ಎಂದು ಸಿಬಿಐಸಿ ಹೇಳಿದೆ.
Clarification regarding certain media reports on applicability of GST on Gangajal.pic.twitter.com/t598ahN07x
— CBIC (@cbic_india)October 12, 2023
ಈ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ಇಲ್ಲ:ಕುಂಕುಮ, ಸಿಂದೂರ, ಗಾಜಿನ ಕೈಬಳೆ, ಪ್ಲಾಸ್ಟಿಕ್ ಕೈಬಳೆ, ಕಾಡಿಗೆ, ಅಗರಬತ್ತಿ, ಹಣೆಬೊಟ್ಟು, ಗೋರಂಟಿ, ವಿಭೂತಿ, ಕರ್ಪೂರ ಇತ್ಯಾದಿ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ಇರುವುದಿಲ್ಲ.ಹಣ್ಣು, ತರಕಾರಿ, ಇತರ ಹಲವು ಅವಶ್ಯಕ ವಸ್ತುಗಳಿಗೂ ಜಿಎಸ್​ಟಿ ಇಲ್ಲ.
ಭಾರತದಲ್ಲಿ ಹೆಚ್ಚುತ್ತಿರುವ ಜಿಎಸ್​ಟಿ ಸಂಗ್ರಹ :ಈ ಹಣಕಾಸು ವರ್ಷದಲ್ಲಿ ಈವರೆಗೆ ಆಗಿರುವ ಸರಾಸರಿ ಮಾಸಿಕ ಜಿಎಸ್​ಟಿ ಸಂಗ್ರಹ 1.65 ಲಕ್ಷಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2022-23) ಸರಾಸರಿ ಮಾಸಿಕ ಜಿಎಸ್​ಟಿ ಸಂಗ್ರಹ 1.51 ಲಕ್ಷ ಕೋಟಿ ರೂ ಇತ್ತು.
ಜಿಎಸ್​ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ರಾಜ್ಯ ನಂಬರ್ ಒನ್ ಆಗಿದೆ. ವಾಣಿಜ್ಯ ನಗರಿ ಮುಂಬೈನಿಂದ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಆಗುತ್ತದೆ. ಮಹಾರಾಷ್ಟ್ರದ ಬಳಿಕ ಕರ್ನಾಟಕದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಆಗುವುದು. ಬಹಳಷ್ಟು ಸ್ಟಾರ್ಟಪ್​ಗಳು ಮತ್ತು ಉದ್ದಿಮೆಗಳು ಬೆಂಗಳೂರಿನಲ್ಲಿವೆ. ಹೀಗಾಗಿ, ಕರ್ನಾಟಕದಲ್ಲಿ ಜಿಎಸ್​ಟಿ ಕಲೆಕ್ಷನ್ಸ್ ಬಹಳ ಅಧಿಕ ಇವೆ. ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೂ ಹೆಚ್ಚಿನ ಜಿಎಸ್​ಟಿ ಸಂಗ್ರಹ ಆಗುತ್ತದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × three =
Remember me
