ಬೆಂಗಳೂರು:ಸ್ಯಾಂಡಲ್​ವುಡ್​ ನಟ ಶ್ರೀಮುರಳಿ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಚಂದ್ರ ಚಕೋರಿ. ಈ ಚಿತ್ರ ಶ್ರೀಮುರಳಿ ಅವರ ಸಿನಿಮಾ ಕರಿಯರ್​ ಹಾದಿಯನ್ನೇ ಬದಲಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಇಬ್ಬರು ನಟಿಯರು ಕಾಣಿಸಿಕೊಂಡಿದ್ದರು. ಈ ಇಬ್ಬರ ಪೈಕಿ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದ್ದು, ಪ್ರಿಯಾ ಪೇರಿರಾ ಅವರ ನಟನೆ.

2003 ಆಗಸ್ಟ್ 15ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ಪ್ರಿಯಾ ಪೇರಿರಾ ನಾಯಕಿಯಾಗಿ ನಟಿಸಿದ್ದರು. ಇದು ಇವರ ಮೊದಲ ಸಿನಿಮಾ ಹಾಗೂ ಕೊನೆಯ ಚಿತ್ರವೂ ಎಂದು ಹೇಳಲಾಗ್ತಿದೆ. ಈ ನಟಿ ಇದೀಗ ಏನು ಮಾಡುತ್ತಿದ್ದಾರೆ? ಈಗ ಹೇಗಿದ್ದಾರೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚಂದ್ರಚಕೋರಿ ಚಿತ್ರವನ್ನ ನಿರ್ಮಾಣ ಮಾಡಿದ್ದರು. ಪ್ರಿಯಾ ಪೇರಿರಾ ಮತ್ತು ನಾಜ್ ಎಂಬ ಇಬ್ಬರು ನಾಯಕಿಯರಿದ್ದರು. ಎಸ್ ನಾರಾಯಣ ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಶ್ರೀಮುರುಳಿ ಅವರ ಸಿನಿಮಾ ಕೆರಿಯರ್​ಗೆ ಒಂದು ಒಳ್ಳೆಯ ಹೆಸರು ತಂದುಕೊಟ್ಟಿರುವ ಸಿನಿಮಾವಾಗಿದೆ. 2003ರಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆದ ಸಿನಿಮಾ ‘ಚಂದ್ರ ಚಕೋರಿ’. ಆ ಚಿತ್ರದ ಹಾಡುಗಳು ಇಂದಿಗೂ ಕೇಳುಗರ ಮೆಚ್ಚಿನ ಗೀತೆಗಳಾಗಿವೆ.

‘ಚಂದ್ರ ಚಕೋರಿ’ ಚಿತ್ರದಲ್ಲಿ ನಯಕಿಯಾಗಿ ಮಿಂಚಿದ್ದ ಸುಂದರಿ ಮುಂಬೈ ಮೂಲಕ ಪ್ರೀಯಾ ಪೇರಿರಾ. ಚಿತ್ರದಲ್ಲಿ ಪ್ರೀಯಾ ಅದ್ಭುತವಾಗಿ ಅಭಿನಯಿಸಿದ್ದಾರೆ. ಶ್ರೀಮುರುಳಿ ಜತೆ ಚಂದ್ರಚಕೋರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾ ಪೇರಿರಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಹಳ ವರ್ಷದ ನಂತರ ಕ್ಯಾಮೆರಾ ಮುಂದೆ ಬಂದಿರುವುದು ಅಚ್ಚರಿ ಮೂಡಿಸಿದ್ದರು. ನಂತರ ಮತ್ತೆ ಎಲ್ಲೂ ಕಾಣಿಸಿಕೊಂಡಿಲ್ಲ.

ಪ್ರಿಯಾ ಉದ್ಯಮಿಯೊಬ್ಬರನ್ನು ಮದುವೆಯಾಗಿ  ವಿದೇಶದಲ್ಲಿ ನೆಲೆಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ಸಖತ್​ ಆಕ್ಟೀವ್​ ಆಗಿರುತ್ತಾರೆ. ಕೆಲವು ಹಾಟ್​​ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಈ ಹಿಂದೆ ಖಾಸಗಿವಾಹಿನಿ ನಡೆಸಿದ ಸಂದರ್ಶನವೊಂದರಲ್ಲಿ ಸ್ಯಾಂಡಲ್​ವುಡ್​ನಲ್ಲಿ ಅವಕಾಶ ಸಿಕ್ಕರೆ ಮತ್ತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಪ್ರೀಯಾ ಡಾನ್ಸ್​ ತುಂಬಾ ಚೆನ್ನಾಗಿ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಅವರ ಇನ್​ಸ್ಟಾಗ್ರಾಮ್​ನಲ್ಲಿ ಕೆಲವು ವಿಡಿಯೋಗಳನ್ನು ನೋಡಬಹುದಾಗಿದೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − 5 =
Remember me
