ನವದೆಹಲಿ:ಈಗ ಏನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಪ್ರತಿನಿತ್ಯವು ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ದಿಢೀರನೇ ವೈರಲ್​ ಆಗಿಬಿಡುತ್ತವೆ. ಈ ಹಿಂದೆ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇತ್ತೀಚೆಗೆ 1986ರಲ್ಲಿ ಖರೀದಿ ಮಾಡಿದ ರಾಯಲ್​ ಎನ್​ಫೀಲ್ಡ್​ ಬೈಕ್​ನ ಬಿಲ್​ ಒಂದು ವೈರಲ್ ಆಗಿದೆ. ಬಿಲ್​ ನೋಡಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
ಅಂದಹಾಗೆ ರಾಯಲ್​ ಎನ್​ಫೀಲ್ಡ್ ಕ್ಲಾಸಿಕ್ 350 ಬೈಕ್ ತನ್ನದೇಯಾದ ಅಭಿಮಾನಿ ಬಳಗವನ್ನು ಹೊಂದಿದೆ. ಅದರ ಸೌಂಡ್​ ಕೇಳಿದರೆ ಸಾಕು ಎಲ್ಲರ ಕಣ್ಣು ಆ ಬೈಕ್ ಓಡಿಸುವವನ ಮೇಲೆಯೇ ಇರುತ್ತದೆ. ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕಾರನ್ನು ಕೊಳ್ಳುವುದನ್ನು ಸ್ಟೇಟಸ್ ಸಿಂಬಲ್ ಎಂದು ಪರಿಗಣಿಸಿದಂತೆಯೇ ಈ ರಾಯಲ್ ಎನ್​ಫೀಲ್ಡ್ ಬೈಕ್ ಕೂಡ ಸ್ಟೇಟಸ್ ಸಿಂಬಲ್ ಎಂದು ಪರಿಗಣಿಸಲಾಗಿದೆ. ವರ್ಷಗಳಿಂದ ವರ್ಷಕ್ಕೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಎಷ್ಟೇ ತಾಂತ್ರಿಕ ಬದಲಾವಣೆಗಳಾದರೂ ಕಂಪನಿ ಮಾತ್ರ ಬೈಕ್‌ನ ನೋಟ ಮತ್ತು ಭಾವನೆಯನ್ನು ಹಾಗೇ ಉಳಿಸಿಕೊಂಡಿದೆ. ಈ ರೀತಿ ಬೈಕ್ ಬ್ರ್ಯಾಂಡ್​ ಹಾಳಾಗದಂತೆ ನೋಡಿಕೊಳ್ಳುವುದು ಸಾಮಾನ್ಯದ ಸಂಗತಿಯಲ್ಲ.
ಪ್ರಸ್ತುತ ಆಲ್ ನ್ಯೂ ಕ್ಲಾಸಿಕ್ 350 ಬೈಕ್​ನ ಬೆಲೆ 2.2 ಲಕ್ಷ ರೂ. ಇದೆ. ಇದು ಎಕ್ಸ್ ಶೋ ರೂಂ ಬೆಲೆ. ಆದರೆ, ಈ ಮಾಡೆಲ್ ಬೈಕಿನ ಬೆಲೆ 1986ರಲ್ಲಿ ಕೇವಲ 18,700 ರೂಪಾಯಿ ಮಾತ್ರ ಇತ್ತು. ಇದನ್ನು ಕೇಳಿ ನಿಮಗೆ ಖಂಡಿತ ಆಶ್ಚರ್ಯವಾಗಬಹುದು. ಇಷ್ಟೊಂದು ಕಮ್ಮಿ ಇತ್ತ ಅನಿಸಬಹುದು. ಕೇವಲ 38 ವರ್ಷದಲ್ಲಿ 18 ಸಾವಿರದಿಂದ 2.2 ಲಕ್ಷ ರೂ.ಗೆ ಬೆಲೆ ಏರಿಕೆಯಾಗಿದೆ.
ವ್ಯಕ್ತಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೈಕ್ ಬೆಲೆಗೆ ಸಂಬಂಧಿಸಿದ ಇನ್‌ವಾಯ್ಸ್ ಅನ್ನು ಹಂಚಿಕೊಂಡಿದ್ದಾರೆ. ರಾಯಲ್​ ಎನ್​ಫೀಲ್ಡ್​ ಬೈಕ್​ ಅನ್ನು 1986 ಜನವರಿ 23 ರಂದು ಖರೀದಿಸಿದ್ದರು. ಜಾರ್ಖಂಡ್‌ನ ಬೊಕಾರೊ ಸ್ಟೀಲ್ ಸಿಟಿಯಲ್ಲಿರುವ ‘ಅಧಿಕೃತ ಎನ್‌ಫೀಲ್ಡ್ ಡೀಲರ್’ ಸಂದೀಪ್ ಆಟೋ ಕಂಪನಿಯಿಂದ ಖರೀದಿ ಮಾಡಲಾಗಿತ್ತು. 38 ವರ್ಷಗಳ ಹಿಂದೆ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗೆ 18,700 ರೂ. ಇತ್ತು. ಆದರೆ, ಈಗ ಸೆಕೆಂಡ್​ ಹ್ಯಾಂಡ್​ ಬೈಕ್​ ಕೂಡ ಸಿಗುವುದಿಲ್ಲ.

A post shared by Being Royal (@royalenfield_4567k)

ಈ ಬಗ್ಗೆ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆಗ 10 ಸಾವಿರ ರೂ. ಬೆಲೆ ಲಕ್ಷಕ್ಕಿಂತಲೂ ಹೆಚ್ಚಿತ್ತು. ಆಗ ಮತ್ತು ಈಗ ಏನು ಬದಲಾಗಿಲ್ಲ. ಆದರೆ ಈಗಿನ ದರಗಳಿಗೂ ಅಂದಿನ ಬೆಲೆಗಳಿಗೂ ಇರುವ ವ್ಯತ್ಯಾಸವನ್ನು ನೋಡಿದರೆ ನೋವಾಗುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

ಇಂಡಿಯಾ ಮೈತ್ರಿ ಒಕ್ಕೂಟದ ಚುನಾವಣಾ ರ‍್ಯಾಲಿ: ರಾಹುಲ್ ಗಾಂಧಿ ಗೈರು? ಕಾರಣ ಹೀಗಿದೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + sixteen =
Remember me
