ನವದೆಹಲಿ:ಮಾನವ ಅಂಗಾಂಗಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿಯೇ ಅದಕ್ಕೆ ಸಂಬಂಧಿಸಿದ ಗ್ರಾಫಿಕ್ಸ್​ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹುಬೇಗನೇ ಜನರನ್ನು ಸೆಳೆದುಬಿಡುತ್ತದೆ.
ಇದೀಗ ಅಂಥದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ. ಆ್ಯಪ್​ಸರ್ಕಲ್​ ಸಂಸ್ಥಾಪಕ, ಉದ್ಯಮಿ ತನ್ಸು ಯೆಜೆನ್​ ಅವರು ಒಂದು ವರ್ಷದ ಹಿಂದೆ ಶೇರ್​ ಮಾಡಿಕೊಂಡಿದ್ದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವೈರಲ್​ ಆಗಿರುವ ವಿಡಿಯೋ, ನಾವು ಉಸಿರಾಡಿದಾಗ ನಮ್ಮ ಹೃದಯ ಮತ್ತು ಶ್ವಾಸಕೋಶ ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸುತ್ತದೆ. ನಾವು ಉಸಿರಾಡಿದಾಗ ಎರಡೂ ಶ್ವಾಸಕೋಶಗಳು ಉಬ್ಬುತ್ತವೆ. ಇದರಿಂದ ಎದೆಯ ಭಾಗ ವಿಸ್ತರಗೊಳ್ಳುತ್ತದೆ ಮತ್ತು ಹೊಟ್ಟೆ ಉಬ್ಬುತ್ತದೆ.
ಇದನ್ನೂ ಓದಿ:ಚಂದ್ರನ ಮೇಲೆ ಭಾರತದ ನಡಿಗೆ: ದಕ್ಷಿಣ ಧ್ರುವದಲ್ಲಿ ಮೂನ್​ವಾಕ್​ ಆರಂಭಿಸಿದ ಪ್ರಜ್ಞಾನ್ ರೋವರ್​!
Lung and heart when we are breathing…
pic.twitter.com/lAUQO7H240
— Tansu Yegen (@TansuYegen)July 18, 2022

ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ನಾವು ಉಸಿರಾಡಿದಾಗ ಹೊಟ್ಟೆ ಏಕೆ ಉಬ್ಬುತ್ತದೆ ಎಂಬುದು ನನಗೀಗ ತಿಳಿಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವಿಡಿಯೋ ನೋಡಿದ್ರೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ.(ಏಜೆನ್ಸೀಸ್​)
ಬೆಂಗ್ಳೂರು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸಿದ ಜರ್ಮನಿ ಸಚಿವ: ಡಿಜಿಟಲ್ ಇಂಡಿಯಾ ಬಗ್ಗೆ ಮೆಚ್ಚುಗೆ

VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 4 =
Remember me
