ಚೆನ್ನೈ:ಸಾಮಾಜಿಕ ಜಾಲತಾಣ ಹೆಚ್ಚೆಚ್ಚು ಜನಪ್ರಿಯತೆ ಗಳಿಸುತ್ತಾ ಹೋದಂತೆ ಅನೇಕರಿಗೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಂದು ಒಳ್ಳೆಯ ವೇದಿಕೆ ಸಿಕ್ಕಂತಾಯಿತು. ಸೃಜನಶೀಲ ವಿಷಯದೊಂದಿಗೆ ವಿಡಿಯೋಗಳನ್ನು ರಚಿಸುವುದು ಮತ್ತು ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವುದಷ್ಟೇ ಅಲ್ಲದೆ, ಉದ್ಯೋಗಗಳನ್ನು ಸಹ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜೀವನಕ್ಕೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾ ಮತ್ತು ಯೂಟ್ಯೂಬ್ ಬಳಕೆದಾರರು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿ ಜನಪ್ರಿಯ ವಿಲೇಜ್ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ತನ್ನ ವಿಭಿನ್ನ ರೀತಿಯ ಖಾದ್ಯಗಳ ಮೂಲಕವೇ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.
ಮೊದಲ ಡೈಮಂಡ್ ಕ್ರಿಯೇಟರ್ ಪ್ರಶಸ್ತಿಯನ್ನು ಪಡೆದ ಮೊದಲ ತಮಿಳು ಯೂಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆಯನ್ನು ವಿಲೇಜ್​ ಕುಕ್ಕಿಂಗ್​ ಚಾನೆಲ್​ ಹೊಂದಿದೆ. ಅವರ ಅಡುಗೆಯ ವಿಡಿಯೋಗಳು 100 ಮಿಲಿಯನ್ ವೀಕ್ಷಣೆಗಳ ಹೊಸ ದಾಖಲೆಯನ್ನು ಸಾಧಿಸಿದೆ. ಆದರೆ, ಈ ಯೂಟ್ಯೂಬ್ ಚಾನೆಲ್ ಬಳಸುತ್ತಿರುವ ಕ್ಯಾಮೆರಾದ ಬೆಲೆ ತಿಳಿದರೆ ನೀವು ಆಶ್ಚರ್ಯಪಡದೆ ಇರಲಾರಿರಿ. ಹಾಗಾದರೆ ಅವರು ಬಳಸುವ ಕ್ಯಾಮೆರಾ ಯಾವುದು? ಅದರ ಬೆಲೆಯೆಷ್ಟು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕೆಲವು ಜನರು ವಿಡಿಯೋಗಳನ್ನು ರೆಕಾರ್ಟ್​ ಮಾಡಲು ಐಫೋನ್​ಗಳನ್ನು ಬಳಸುತ್ತಾರೆ. ಇನ್ನು ಕೆಲವರು 4K ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾಗಳನ್ನು ಬಳಸುತ್ತಾರೆ. ಕ್ಯಾಮೆರಾಗಳಲ್ಲಿ ಹಲವು ವಿಧಗಳಿವೆ. DSLR ಕ್ಯಾಮೆರಾಗಳು, ಫಿಲ್ಮ್ ಕ್ಯಾಮೆರಾಗಳು, ಡಿಜಿಟಲ್ ಸಿನಿಮಾ ಕ್ಯಾಮೆರಾಗಳು ಮತ್ತು ಇನ್​ಸ್ಟಂಟ್​ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಆದರೆ ಕೆಲವರು ವಿಡಿಯೋಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಸಿನಿಮೀಯ ನೋಟವನ್ನು ಹೊಂದಲು 8K ರೆಸಲ್ಯೂಶನ್ ಕ್ಯಾಮೆರಾಗಳನ್ನು ಬಳಸುತ್ತಾರೆ. ವಿಲೇಜ್ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ಕೂಡ 8K ರೆಸಲ್ಯೂಶನ್ ಹೊಂದಿರುವ ರೆಡ್ ರಾಪ್ಟರ್ ಕ್ಯಾಮೆರಾವನ್ನು ಬಳಸುತ್ತಿದೆ. ಇದರ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ. ಈ ಯೂಟ್ಯೂಬ್ ಚಾನೆಲ್ ಸಿನಿಮಾ ಚಿತ್ರೀಕರಣಕ್ಕೆ ಬಳಸಿದ ಕ್ಯಾಮರಾವನ್ನು ಬಳಸುತ್ತಿದೆ.
ರೆಡ್ ರಾಪ್ಟರ್ 8K ಇದುವರೆಗಿನ ಅತ್ಯಂತ ಶಕ್ತಿಶಾಲಿ, ಸುಧಾರಿತ ಸಿನಿಮಾ ಕ್ಯಾಮರಾ. ಎಸ್​35 ಅತ್ಯುತ್ತಮ ಮಲ್ಟಿ-ಫಾರ್ಮ್ಯಾಟ್ 8K ಸೆನ್ಸಾರ್​ ಅನ್ನು ಹೊಂದಿದೆ. 8K ಅಥವಾ 6K ಫಾರ್ಮ್ಯಾಟ್​ ಅನ್ನು ಶೂಟ್ ಮಾಡಬಹುದು. ಇದರ ವಿಡಿಯೋ ಕ್ವಾಲಿಟಿ ಸಿನಿಮಾ ರೇಂಜ್​ನಲ್ಲಿರುತ್ತದೆ. ವಿಡಿಯೋ ಗುಣಮಟ್ಟ ಉತ್ತಮವಾಗಿದ್ದರೆ, ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಅವಕಾಶವಿದೆ. ಅದಕ್ಕಾಗಿಯೇ ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳು ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಬಳಸುತ್ತಾರೆ. ವಿಲೇಜ್ ಕುಕ್ಕಿಂಗ್​ ಚಾನೆಲ್ ಬರೋಬ್ಬರಿ 22 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದರೊಂದಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ.(ಏಜೆನ್ಸೀಸ್​)
ನನ್ನ ಗುರಿ ಒಂದೇ… ಟೀಮ್​ ಇಂಡಿಯಾ ಮುಖ್ಯ​ ಕೋಚ್​ ಆದ ಬೆನ್ನಲ್ಲೇ ಗೌತಿ ಮಾಡಿದ ಪೋಸ್ಟ್​ ವೈರಲ್​!

ಆ ಒಂದು ಕಂಡೀಷನ್​ಗೆ ಒಪ್ಪಿದ್ರೆ ಮಾಡ್ತೀನಿ! ಕೃತಿ ಶೆಟ್ಟಿ ಲಿಪ್​ಲಾಕ್​ ದೃಶ್ಯದ ರಹಸ್ಯ ಬಯಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × three =
Remember me
