ಹೈದರಾಬಾದ್​​:ಇತ್ತೀಚೆಗಷ್ಟೇ ಬಿಡುಗಡೆಯಾದ ಬೇಬಿ ಚಿತ್ರ ನಿರೀಕ್ಷೆಗಳನ್ನು ಮೀರಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಜುಲೈ 30 ರಂದು ಹೈದರಾಬಾದ್​​ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಮೆಗಾಸ್ಟಾರ್ ಅವರನ್ನು ಆಹ್ವಾನಿಸಲಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡ ಚಿರಂಜೀವಿ ಅವರ ವಾಚ್​​ ಅನೇಕರ ಗಮನ ಸೆಳೆದಿದೆ.ಆ ವಾಚ್‌ನ ವಿವರಗಳನ್ನು ತಿಳಿಯಲು ನೆಟ್ಟಿಗರು ಹುಡುಕಾಟ ಆರಂಭಿಸಿದ್ದಾರೆ
ಇದನ್ನೂ ಓದಿ:ಅಯ್ಯೋ…2 ನಿಮಿಷ ಹಿಂದಿಯಲ್ಲಿ ಮಾತನಾಡಿ ಕೆಲಸ ಕಳೆದುಕೊಂಡ ಟೆಕ್ಕಿ!
ಬೇಬಿ ಚಿತ್ರತಂಡ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಿರಂಜೀವಿ ಧರಿಸಿದ್ದ ವಾಚ್ ಬೆಲೆ 1.90 ಕೋಟಿ ರೂ. (230000 ಡಾಲರ್) ಎಂದು ಅಂದಾಜಿಸಲಾಗಿದೆ. ಇದು ರೋಲೆಕ್ಸ್ ಕಂಪನಿಯ ಕಾಸ್ಮೋಗ್ರಾಫ್ ಡೇಟೋನಾ ಐ ಆಫ್ ದಿ ಟೈಗರ್ ವಾಚ್ ಎಂಬುದು ಗಮನಾರ್ಹ. ನೋಡಲು ತುಂಬಾ ಸಿಂಪಲ್​ ಆಗಿ ಕಾಣುವ ಈ ವಾಚ್​ ಸಖತ್​​ ದುಬಾರಿಯಾಗಿದೆ.
ಇದನ್ನೂ ಓದಿ:ನಿಮಗಿದು ಗೊತ್ತಾ? ಚಿನ್ನಾಭರಣದಿಂದ ಸೌಂದರ್ಯವಷ್ಟೇ ಅಲ್ಲ ಆರೋಗ್ಯಕ್ಕೂ ಪ್ರಯೋಜನಗಳಿವೆ..
ತೆಲುಗು ಚಿತ್ರರಂಗದಲ್ಲಿ ರಾಮ್ ಚರಣ್, ಎನ್‌ಟಿಆರ್‌ನಂತಹ ನಟರು ಕೂಡ ದುಬಾರಿ ವಾಚ್‌ಗಳನ್ನು ಹೊಂದಿದ್ದಾರೆ. ಈ ಹಿಂದೆ ಹಲವು ಬಾರಿ ಈ ವಿಷಯ ಚರ್ಚೆಯಾಗಿದೆ. ಮೆಗಾಸ್ಟಾರ್ ಶೀಘ್ರದಲ್ಲೇ ಭೋಲಾ ಶಂಕರ್ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
VIDEO |ಬಸ್​​, ಆಟೋ, ಬೈಕ್​​ನಲ್ಲಿ ಕಾಲೇಜಿಗೆ ಬರುವ ಗೆಳೆಯರ ಮಧ್ಯೆ ಈ ವಿದ್ಯಾರ್ಥಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
