ನವದೆಹಲಿ:ಸಂತೋಷ, ದುಖಃ, ಭಯ ಮನುಷ್ಯನಿಗೆ ಇರುವ ಸಹಜವಾದ ಗುಣವಾಗಿದೆ. ಭಯವು ನಮ್ಮ ಮಾನಸಿಕ ಮತ್ತು ದೈಹಿಕ ರಚನೆಯ ಮೇಲೆ ಪರಿಣಾಮ ಬೀರುವ ನೈಸರ್ಗಿಕ ಸ್ಥಿತಿಯಾಗಿದೆ.  ಕೆಲವು ಸನ್ನಿವೇಶಗಳು ನಮ್ಮಲ್ಲಿ ನಡುಕ ಹುಟ್ಟಿಸುತ್ತದೆ. ಆಗ ನಮಗೆ ಭಯವಾಗುತ್ತದೆ. ಭಯಕ್ಕೆ ಕಾರಣವೇನು? ಯಾವ ಸಂದರ್ಭದಲ್ಲಿ ನಮಗೆ ಭಯವಾಗುತ್ತದೆ ಎನ್ನುವ ವಿಷಯಗಳ ಕುರಿತಾಗಿ ಇಂದು ತಿಳಿದುಕೊಳ್ಳೋಣ….
ಭಯಕ್ಕೆ ಕಾರಣವೇನು?:ನಮ್ಮ ಮಾನಸಿಕ ಮತ್ತು ದೈಹಿಕ ರಚನೆಯ ಮೇಲೆ ಪರಿಣಾಮ ಬೀರುವ ನೈಸರ್ಗಿಕ ಸ್ಥಿತಿಯಾಗಿದೆ.ಭಯದ ಮೂಲ ಕಾರಣ ನಮ್ಮ ಮೆದುಳಿನಲ್ಲಿದೆ ಎಂದು ವಿಜ್ಞಾನ ಹೇಳುತ್ತದೆ.ಜೀವನದಲ್ಲಿ ವಿವಿಧ ಸವಾಲುಗಳು ಮತ್ತು ನಿಯಂತ್ರಿಸಲಾಗದ ಘಟನೆಗಳಿಂದ ಭಯ ಉಂಟಾಗುತ್ತದೆ.ವಾಸ್ತವವಾಗಿ, ಭಯವು ವಿವಿಧ ಕಾರಣಗಳಿಂದ ಹಾಗೂ ಬೇರೆ ಬೇರೆ ಸಸ್ನಿವೇಶಗಳಿಗೆ ಅನುಗುಣವಾಗಿ ಉದ್ಭವಿಸುತ್ತದೆ.
ಭಯದಿಂದ ದೇಹದಲ್ಲಾಗುವ ಬದಲಾವಣೆ:ಭಯವು ಮನಸ್ಸಿನ ಮೇಲೆ ಮಾತ್ರವಲ್ಲದೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ಭಯಗೊಂಡಾಗ ಹೃದಯವು ವೇಗವಾಗಿ ಬಡಿಯುತ್ತದೆ. ಇದು ನಮ್ಮ ಉಸಿರಾಟವನ್ನು ವೇಗಗೊಳಿಸುತ್ತದೆ. ಮೆದುಳನ್ನು ಎಚ್ಚರಿಕೆಯ ಕ್ರಮದಲ್ಲಿ ಇಡುತ್ತದೆ. ನಾವು ಬೆಳದ ವಾತಾವರಣ ಹಾಗೂ ನಮ್ಮ ಕೌಟುಂಬಿಕ ಹಿನ್ನೆಲೆಯು ಆಧಾರದ ಮೇಲೆ ಭಯವನ್ನು ಅನುಭವಿಸುತ್ತೇವೆ.
ಭಯಕ್ಕೆ ಕೆಲವು ಹಾರ್ಮೋನ್​ಗಳು ಉತ್ಪಾದನೆಯಾಗಿ ಆರೋಗ್ಯ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಕೈ, ಕಾಲು ನಡುಗುತ್ತದೆ. ಮಾತು ತೊದಲುತ್ತದೆ. ಕೆಲವೊಬ್ಬರಿಗೆ ಬಾಯಾರಿಕೆ ಹಾಗೂ, ಮೂತ್ರ ವಿಸರ್ಜನೆ ಬಂದಂತೆ ಭಾಸವಾಗುತ್ತದೆ. ಭಯದಲ್ಲಿರುವ ನಾವು ಏನನ್ನು ಮಾತನಾಡುತ್ತಿದ್ದೇವೆ ಎನ್ನುವ ಅರಿವೂ ಕೂಡಾ ನಮಗೆ ಇಲ್ಲದ ಸ್ಥಿತಿಯಲ್ಲಿ ನಾವು ಇರುತ್ತವೇ. ಕೆಲವೊಮ್ಮೆ ಜೀವಕ್ಕೆ ಅಪಾಯ ಬರುವ ಸಾಧ್ಯತೆಯೂ ಇರುತ್ತದೆ. ಅನೇಕ ಸಂದರ್ಭಗಳಲ್ಲಿ, ಅತಿಯಾದ ಭಯವು ಹೃದಯಾಘಾತ ಅಥವಾ ಇತರ ತೊಡಕುಗಳಿಗೆ ಕಾರಣವಾಗಬಹುದು.
ಭಯ ಹುಟ್ಟಿಕೊಳ್ಳುವುದು ಹೇಗೆ?:ವಿಜ್ಞಾನದ ಪ್ರಕಾರ, ಮೆದುಳಿನಲ್ಲಿ ಭಯದ ಭಾವನೆಯನ್ನು ಉಂಟುಮಾಡುವ ಎರಡು ಸರ್ಕ್ಯೂಟ್ಗಳಿವೆ. ಈ ಸರ್ಕ್ಯೂಟ್‌ಗಳಲ್ಲಿ ಕ್ಯಾಲ್ಸಿಟೋನಿನ್ ಜೀನ್-ಸಂಬಂಧಿತ ಪೆಪ್ಟೈಡ್, ಮೆದುಳಿನ ಅಮಿಗ್ಡಾಲಾದಲ್ಲಿನ ನ್ಯೂರಾನ್‌ಗಳು ಸೇರಿವೆ. ಇವೆಲ್ಲವೂ ಒಟ್ಟಾಗಿ ಭಯದ ಭಾವನೆಯನ್ನು ಉಂಟುಮಾಡುತ್ತದೆ. ಒಬ್ಬ ವ್ಯಕ್ತಿಯು ಭಯಗೊಂಡಾಗ, ಅವನ ದೇಹದಲ್ಲಿ ವಿಶೇಷ ಹಾರ್ಮೋನುಗಳು ಮತ್ತು ರಾಸಾಯನಿಕ ಅಂಶಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಕಾರ್ಟಿಸೋಲ್, ಎಪಿನ್ಫ್ರಿನ್, ನೊರ್ಪೈನ್ಫ್ರಿನ್ ಮತ್ತು ಕ್ಯಾಲ್ಸಿಯಂ ಸೇರಿವೆ. ಈ ಹಾರ್ಮೋನುಗಳು ಮತ್ತು ರಾಸಾಯನಿಕಗಳು ಭಯದ ಅನುಭವದ ಸಮಯದಲ್ಲಿ ದೇಹದಲ್ಲಿ ವಿವಿಧ ಕಾರ್ಯಗಳನ್ನು ನಿಯಂತ್ರಿಸುತ್ತವೆ.
ದಿನಕ್ಕೆರಡು ಬಾರಿ ಕಾಫಿ ಕುಡಿಯುವ ಅಭ್ಯಾಸ ಇದೆಯಾ?  ಲಿವರ್ ಕಾಯಿಲೆ ಬರುವುದಿಲ್ಲ: ಅಧ್ಯಯನ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − three =
Remember me
