ನವದೆಹಲಿ:ಜಗತ್ತಿನ ಮೂಲೆ ಮೂಲೆಯಲ್ಲಿ ಯಾವುದೇ ವಿಚಾರವಿರಲಿ, ಎಂತಹದ್ದೇ ಘಟನೆ ಇರಲಿ, ಅವೆಲ್ಲವೂ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ನೋಡುಗರ ಗಮನ ಸೆಳೆದು, ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆ ಸಾಲಿಗೆ ಇಲ್ಲೊಂದು ರುಚಿಕರವಾದ ಖಾದ್ಯದ ವಿಡಿಯೋ ಸೇರ್ಪಡೆಗೊಂಡಿದೆ.
ಇದನ್ನೂ ಓದಿ:ಪುನೀತ್‌ರಾಜಕುಮಾರ್ ಅವರ ಜನ್ಮ ದಿನದ ಅಂಗವಾಗಿ ಸಾಮೂಹಿಕ ಸರಳ ವಿವಾಹ
ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಡೆದಾಟ-ಬಡಿದಾಟ, ಅಹಿತಕರ ಘಟನೆಗಳ ದೃಶ್ಯಗಳೇ ಹೆಚ್ಚಾಗಿ ತುಂಬಿರುತ್ತವೆ. ಆದರೆ, ಈ ಖಾದ್ಯದ ಮೇಕಿಂಗ್ ವಿಡಿಯೋ ಸದ್ಯ ನೆಟ್ಟಿಗರಿಗಿಂತ ತಿಂಡಿ ಪ್ರಿಯರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಈ ದೃಶ್ಯ ನೋಡಿದವರ ಬಾಯಲ್ಲಿ ನೀರೂರುವುದು ಖಂಡಿತ ಎಂದೇ ಹೇಳಬಹುದು.
ಮಲೈ ಕೋಫ್ತಾ ಎಂದೇ ಕರೆಯಲ್ಪಡುವ ಈ ವಿಶಿಷ್ಟವಾದ ಖಾದ್ಯ ಖುಶಾಲ್ ಜಂಗಿದ್ ಅವರ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಆಗಿದ್ದು, ವೈರಲ್ ವೀಡಿಯೊದಲ್ಲಿ ಇದನ್ನು ಮಾಡುವ ಸರಳ, ಸುಲಭ ವಿಧಾನವನ್ನು ತೋರಿಸಲಾಗಿದೆ. ದೊಡ್ಡ ಪಾತ್ರೆಯಲ್ಲಿ ರಸ್ಕ್​ ಪ್ಯಾಕೆಟ್​ಗಳನ್ನು​ ಓಪನ್ ಮಾಡುತ್ತಿದ್ದರೆ ನೋಡುಗರಲ್ಲಿ ಅದೇನೋ ಕುತೂಹಲ.

A post shared by Khushal Jangid (@oyehoyeindia)

ಸದ್ಯ ಈ ವೀಡಿಯೊ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಕಾಮೆಂಟ್‌ಗಳಿಂದ ಕೂಡಿದೆ,(ಏಜೆನ್ಸೀಸ್).
ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
