ನವದೆಹಲಿ:ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಪ್ರಮುಖ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಆಹಾರ ಕೃಷಿ ಸಂಸ್ಥೆ ವರದಿ ತಿಳಿಸಿದೆ. ಭಾರತವು 2010 ರಿಂದ 2020 ರವರೆಗೆ ವಾರ್ಷಿಕವಾಗಿ 2,66,000 ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಸೌರಶಕ್ತಿಗೆ ಬಲ ತುಂಬಲು ನಿರ್ಮಲಾ ಚಿತ್ತ: ಪಿಎಂ ಸೂರ್ಯ ಘರ್ ಯೋಜನೆಯಡಿ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್
ಸೋಮವಾರ ಬಿಡುಗಡೆಯಾದ ವರದಿ ಪ್ರಕಾರ, ಚೀನಾವು 1,937,000 ಹೆಕ್ಟೇರ್‌ಗಳ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದೆ. 4,46,000 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಭಾರತ ಮೂರನೇ ಸ್ಥಾನದಲ್ಲಿದೆ. ಟಾಪ್ 10ರ ಪಟ್ಟಿಯಲ್ಲಿರುವ ಇತರ ದೇಶಗಳಲ್ಲಿ ಚಿಲಿ, ವಿಯೆಟ್ನಾಂ, ಟರ್ಕಿ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಇಟಲಿ ಮತ್ತು ರೊಮೇನಿಯಾ ಸೇರಿವೆ.
ನವೀನ ವಿಧಾನಗಳ ಮೂಲಕ ಕೃಷಿ ಅರಣ್ಯವನ್ನು ವಿಸ್ತರಿಸುವಲ್ಲಿನ ಪ್ರಯತ್ನಗಳಿಗಾಗಿ ಯುಎನ್​ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ. ಇದು ದೇಶದಲ್ಲಿ ಉತ್ತಮ-ಬೆಂಬಲಿತ ಕೃಷಿ ಅರಣ್ಯವನ್ನು ಗುರಿಯಾಗಿಟ್ಟುಕೊಂಡು ಹೊಸ ರಾಷ್ಟ್ರೀಯ ನೀತಿಯ ಅಭಿವೃದ್ಧಿಯನ್ನು ಒಳಗೊಂಡಿದೆ.  ಕೆಲವು ದೇಶಗಳಲ್ಲಿ ಅರಣ್ಯನಾಶವಾದ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದೆ. ಹವಾಮಾನ ಬದಲಾವಣೆ ಕಾಳ್ಗಿಚ್ಚಿನಂತಹ ಮತ್ತು ಪ್ರಾಕೃತಿಕ ವಿಕೋಪಗಳು ಅರಣ್ಯ ನಾಶಕ್ಕೆ ಕಾರಣ ಎಂದು ಎಫ್​ಎಒ ಹೇಳಿದೆ.
ಸಿಎಂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ಬಿಜೆಪಿಯಿಂದ ನಿರಂತರ ಪ್ರಯತ್ನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
