ಅಹಮದಾಬಾದ್:ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಗರ್ಭಪಾತಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 19 ವರ್ಷದ ಯುವಕ ಮತ್ತು 59 ವರ್ಷದ ವೈದ್ಯರನ್ನು ಶನಿವಾರ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.ಆರೋಪಿ ವೈದ್ಯ ಡಾ. ಚೆತನ್ ಷಾ ಐದು ತಿಂಗಳ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿಗೆ ಗರ್ಭಪಾತ ಮಾಡಿ ನಂತರ ಭ್ರೂಣವನ್ನು ನಗರದ ಕಸದ ಸ್ಥಳದಲ್ಲಿ ಎಸೆದಿದ್ದಾನೆ.ಮಣಿನಗರ ಪ್ರದೇಶದ ನಿವಾಸಿ ಶಾ ಕಳೆದ 29 ವರ್ಷಗಳಿಂದ ನಗರದ ವಾಟ್ವಾ ಜಿಐಡಿಸಿ ಪ್ರದೇಶದಲ್ಲಿ ‘ಕೆವಲ್ ಮೆಡಿಕೇರ್ ಸೆಂಟರ್’ ಆಸ್ಪತ್ರೆಯನ್ನು ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಜುಲೈ 6 ರಂದು, ಆತ ಅಪ್ರಾಪ್ತೆಗೆ ಗರ್ಭಪಾತ ಮಾಡಿ ಅದನ್ನು ರಹಸ್ಯವಾಗಿ ಕಸದ ತೊಟ್ಟಿಯಲ್ಲಿ ಎಸೆದಿದ್ದಾನೆ.
ಇದನ್ನೂ ಓದಿ:ಆತ ಬಾಲಕನ ಶಿರಚ್ಛೇದ ಮಾಡಿದ..ಅದು ದೇವರ ಅರ್ಪಣೆಗೆಂದುಕೊಳ್ಳಬೇಡಿ… ಕಾರಣ ಬೇರೆಯೇ ಇದೆ
ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಪೊಲೀಸರು ಈಗಾಗಲೇ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ, ತನಿಖಾ ಅಧಿಕಾರಿಗಳು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಶನಿವಾರ ವೈದ್ಯನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 318 (ಮಗುವಿನ ಮೃತ ದೇಹವನ್ನು ರಹಸ್ಯವಾಗಿ ಹೂತುಹಾಕುವುದು ಅಥವಾ ಜನನವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ವಿಲೇವಾರಿ ಮಾಡುವುದು) ಅಡಿ ಅವನ ವಿರುದ್ಧ ಅಪರಾಧ ದಾಖಲಿಸಲಾಗಿದೆ.
ಇದನ್ನೂ ಓದಿ:ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ
ಆರೋಪಿ ವೈದ್ಯನನ್ನು ಬಂಧಿಸಿದ ನಂತರ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ, ಸುನಿಲ್ ಸರ್ಗರಾ (19) ಎಂಬಾತನನ್ನು ಆಕೆ ಗರ್ಭಧರಿಸಲು ಕಾರಣವಾದ ಆರೋಪದ ಮೇಲೆ ಬಂಧಿಸಲಾಗಿದೆ.
ಆತನ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ಇತರ ಸಂಬಂಧಿತ ವಿಭಾಗಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೈದ್ಯ ಈ ಗರ್ಭಪಾತ ಮಾಡಲು 15 ಸಾವಿರ ರೂ. ವಸೂಲಿ ಮಾಡಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.
ಕಳುವು ಮಾಡಿದನೆಂದು ಸಂಶಯಿಸಿ ಸಾಯುವಂತೆ ಥಳಿಸಿದ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 1 =
Remember me
