ನವದೆಹಲಿ:ಕರೊನಾ ವೈರಸ್​ನಿಂದ ಮೃತಪಟ್ಟ ರೋಗಿಯ ವಿಚಾರದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರ ಮೇಲೆ ಆರು ಮಂದಿ ಕಿಡಿಗೇಡಿಗಳು ಕ್ಲೀನಿಕ್​ನ ಒಳಗಡೆಯೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕ ನಗರದ ಬಿಂದಾಪುರ್​ ಏರಿಯಾದಲ್ಲಿ ಶನಿವಾರ ರಾತ್ರಿ ನಡೆದಿದೆ.​
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಸುಖ್ಜಿಂದರ್​ ಮತ್ತು ಜೀತೆಂದರ್​ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಸಂತ್ರಸ್ತ ವೈದ್ಯ ಡಾ. ಅವ್ತಾರ್​ ಹನ್ಸ, ಸುಮಾರು ಐದರಿಂದ ಆರು ಮಂದಿ ಕ್ಲೀನಿಕ್​ನಲ್ಲೇ ಎಳೆದಾಡಿ ಥಳಿಸಿದರು. ಅಲ್ಲದೇ ಕ್ಲೀನಿಕ್​ನಲ್ಲಿದ್ದ ವಸ್ತುಗಳನ್ನು ದೋಚಿ, ರೋಗಿಗಳ ಮೇಲೂ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಆರೋಪಿ ಸುಖ್ಜಿಂದರ್​ ತಂದೆ ಇತ್ತೀಚೆಗಷ್ಟೇ ಕೋವಿಡ್​-19ನಿಂದ ಮೃತಪಟ್ಟಿದ್ದರು. ಹೀಗಾಗಿ ಸುಖ್ಜಿಂದರ್​ ಕುಟುಂಬಕ್ಕೂ ಕರೊನಾ ಹರಡಿರುವ ಸಾಧ್ಯತೆ ಇದೆ ಎಂದು ನೆರೆಯವರಿಗೆ ಮುನ್ನೆಚ್ಛರಿಕಾ ಕ್ರಮವಾಗಿ ವೈದ್ಯರು ಮಾಹಿತಿ ನೀಡಿದ್ದರು. ಇದು ಸುಖ್ಜಿಂದರ್​ ಕೋಪಕ್ಕೆ ಕಾರಣವಾಗಿದ್ದು, ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆಪಾದಿಸಿ, ತನ್ನ ಸಹಚರರೊಂದಿಗೆ ಸೇರಿ ಥಳಿಸಿದ್ದಾನೆ.ಇದನ್ನೂ ಓದಿ:ಸಚಿವ ಸುಧಾಕರ್ ತಂದೆಗೆ ಕರೊನಾ ಸೋಂಕು ಬೆನ್ನಲ್ಲೇ ಪತ್ನಿ, ಮಗಳಿಗೂ ಮಹಾಮಾರಿ ಕಂಟಕ
ಸಾಮಾನ್ಯವಾಗಿ ಕರೊನಾ ಸೋಂಕು ದೃಢವಾದರೆ ಸ್ಥಳೀಯರಿಗೆ ಎಚ್ಚರಿಕೆ ನೀಡುವುದು ವೈದ್ಯರ ಕರ್ತವ್ಯ. ಹಗಲಿರುಳು ಶ್ರಮಿಸುವ ಕರೊನಾ ವಾರಿಯರ್ಸ್​ ಮೇಲೆಯೇ ಹಲ್ಲೆ ಮಾಡುವುದು ಎಷ್ಟು ಸರಿ? ಇಂತಹ ಜನರು ಯಾವಾಗ ಬುದ್ಧಿ ಕಲಿಯುತ್ತಾರೋ? ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮನುಷ್ಯರಾಗಿ ವರ್ತಿಸುವುದು ತುಂಬಾ ಮುಖ್ಯವಾಗಿದೆ.(ಏಜೆನ್ಸೀಸ್​)
ಟ್ರಂಪ್​ ಸರ್ಕಾರದ ನಿರ್ಧಾರದಿಂದ ಭಾರತದ ಐಟಿ ಕಂಪನಿಗಳಿಗೆ ಹೊಡೆತ: ಹೆಚ್ಚಲಿದೆ ನಿರುದ್ಯೋಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
