ಲಖನೌ:ಉತ್ತರ ಭಾರತದಲ್ಲಿ ಆಯಾ ಹವಾಮಾನ ತಕ್ಕಂತೆ ದೇವರಿಗೆ ವಿಶೇಷ ಆರೈಕೆಗಳು ನಡೆಯುತ್ತವೆ. ಬೇಸಿಗೆಯಲ್ಲಿ ಗರ್ಭಗುಡಿಯಲ್ಲಿಯೇ ಎಸಿ ಅಳವಡಿಸುತ್ತಾರೆ. ಚಳಿಗಾಲದಲ್ಲಿ ದೇವರ ವಿಗ್ರಹಕ್ಕೆ ಬೆಚ್ಚನೆಯ ಉಡುಪುಗಳನ್ನು ತೊಡಿಸುವ ಪದ್ಧತಿ ಇಲ್ಲಿದೆ.
ಅಂತೆಯೇ ಉತ್ತರಪ್ರದೇಶದ ಜೌನ್​ಪುರ ಜಿಲ್ಲೆಯಲ್ಲಿರುವ ಜಗನ್ನಾಥ ಮಂದಿರದಲ್ಲಿ ವೈದ್ಯರೇ ದೇವರನ್ನು ಪರೀಕ್ಷಿಸಿ ಔಷಧ ನೀಡುವ ಶಿಫಾರಸು ಮಾಡುತ್ತಾರೆ. ಅಂತೆಯೇ ಔಷಧವನ್ನು ದೇವರಿಗೆ ಸಮರ್ಪಿಸಿ ಬಳಿಕ ಅದನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.
ಇದನ್ನೂ ಓದಿ;ದೇವರೇ ಕಾಪಾಡಬೇಕು; ಕರೊನಾ ನಿವಾರಣೆ ಮಾನವ ಯತ್ನ ಮೀರಿದ್ದು ಎಂದ ಸಿಎಂ ಉದ್ಧವ್​
ಪ್ರತಿವರ್ಷ ಇಂಥದ್ದೊಂದು ಸಂಪ್ರದಾಯ ನಡೆಯುತ್ತದೆ. ದೇವರ ವಿಗ್ರಹಕ್ಕೆ ಸ್ಟಥಾಸ್ಕೋಪ್​ನಿಂದ ಪರೀಕ್ಷಿಸುವ ವೈದ್ಯರು ಬಳಿಕ ಸೋರೆಕಾಯಿಯ ಜ್ಯೂಸ್​ ನೀಡುವಂತೆ ಹೇಳುತ್ತಾರೆ. ಅಂತೆಯೇ ಅದನ್ನು ದೇವರಿಗೆ ನೈವೇದ್ಯ ಮಾಡಿ ಬಳಿಕ ಭಕ್ತರಿಗೆ ಹಂಚಲಾಗುತ್ತದೆ.
ಈ ಪದ್ಧತಿಯ ಹಿಂದೆ ಹಲವು ಐತಿಹ್ಯಗಳಿವೆ. ಆಷಾಢ ಪೂರ್ಣಿಮೆಯಂದು ದೇವರು ಅನಾರೋಗ್ಯಕ್ಕೆ ಗುರಿಯಾಗಿದ್ದರು. ಹೀಗಾಗಿ ಅಂದು ಗರ್ಭಗುಡಿಯನ್ನು ಮುಚ್ಚಲಾಗುತ್ತದೆ. ದೇವರಿಗೆ ಅಜವಾನ್​, ಸೋಂಪು, ಕರಿಮೆಣಸು, ತುಳಸಿ, ಲವಂಗ ಮೊದಲಾದವುಗಳಿಂದ ತಯಾರಿಸಿದ ಕಷಾಯವನ್ನು ನೀಡಲಾಗುತ್ತದೆ.
ಇದನ್ನೂ ಓದಿ;ದೇಗುಲವನ್ನು ಮಸೀದಿಯಾಗಿಸಿದ ತಬ್ಲಿಘಿಗಳು; ಪಾಕ್​ನಲ್ಲಿ 102 ಹಿಂದುಗಳ ಬಲವಂತದ ಮತಾಂತರ
ಇನ್ನೊಂದು ಐತಿಹ್ಯದ ಪ್ರಕಾರ, ತನ್ನ ಭಕ್ತನಿಗೆ ಬಂದ ಅನಾರೋಗ್ಯವನ್ನು ಸ್ವತ: ದೇವರೇ ಅನುಭವಿಸುತ್ತಾರೆ. ಇನ್ನೊಂದು ನಂಬಿಕೆ ಏನೆಂದರೆ, ಜೂನ್​ ತಿಂಗಳ ಸೆಖೆಯಿಂದ ದೇವರಿಗೆ ಸಂಕಷ್ಟವಾದಾಗ ಭಕ್ತರು 1008 ಬಿಂದಿಗೆಯಿಂದ ಜಲಾಭಿಷೇಕ ನಡೆಸಿದ್ದರು. ಇದರಿಂದ ಜಗನ್ನಾಥನಿಗೆ ಶೀತ ಹಾಗೂ ನೆಗಡಿ ಕಾಣಿಸಿಕೊಂಡಿತಂತೆ…!
ಇಂಥ ಸಂಪ್ರದಾಯಗಳು ದೇವರ ಬಗ್ಗೆ ಜನಪದರಲ್ಲಿರುವ ನಂಬಿಕೆ ಹಾಗೂ ಭಕ್ತಿಗೆ ನಿದರ್ಶನವೇ ಹೊರತು ಬೇರೇನಲ್ಲ ಎನ್ನುವುದು ಪಂಡಿತರ ವ್ಯಾಖ್ಯಾನವಾಗಿದೆ.
ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
