ನವದೆಹಲಿ:ಅನಾರೋಗ್ಯದ ಸಂದರ್ಭ ಚಿಕಿತ್ಸೆ ನೀಡುವ, ಜೀವ ಉಳಿಸುವ ವೈದ್ಯರನ್ನು ದೇವರ ಸಮಾನ ಎಂಬಂತೆ ನೋಡುತ್ತಾರೆ. ಆದರೆ ಅದಕ್ಕೆ ಅಪವಾದ ಎಂಬಂತೆ ಅಂಥ ಸಂಕಷ್ಟದ ಸಮಯದಲ್ಲೂ ಹಣಕ್ಕೆ ಹಪಾಹಪಿಸುವ ದುರುಳರೂ ಇದ್ದಾರೆ. ಆ ರೀತಿಯ ಧನದಾಹಿ ವೈದ್ಯನೊಬ್ಬ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾನೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಾಗಿದ್ದ ಬಡ ಮಹಿಳೆಯಿಂದಲೂ ಹಣ ಕೀಳಲು ಈ ವೈದ್ಯ ಮುಂದಾಗಿದ್ದ. ಸಿಜೇರಿಯನ್​ ಮಾಡಿಸುವ ಅಗತ್ಯವಿದೆ, ಅದಕ್ಕಾಗಿ 8 ಸಾವಿರ ರೂ. ಕೊಡಬೇಕು ಎಂದು ಲಂಚಕ್ಕೆ ಕೈಯೊಡ್ಡಿದ್ದ.

ಬಳಿಕ ಈ ಮಾಹಿತಿ ಭ್ರಷ್ಟಾಚಾರ ವಿರೋಧಿ ದಳಕ್ಕೆ ತಲುಪಿದ್ದು, ಅದರ ಅಧಿಕಾರಿಗಳು ಆರೋಪಿ ವೈದ್ಯನ ಮನೆ ಮೇಲೆ ದಾಳಿ ಮಾಡಿದ್ದರು. ಆ ಸಂದರ್ಭದಲ್ಲಿ ವೈದ್ಯನ ಮನೆಯಲ್ಲಿ 1.12 ಕೋಟಿ ರೂ. ನಗದು ಕಂಡುಬಂದಿದೆ. ಅದನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆಗೆ ಮುಂದಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಒಡಿಶಾದ ಪುರಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ.. ಅಲ್ಲಿನ ವೈದ್ಯ ಡಾ.ಎಸ್​.ಕೆ.ಜೇನಾ ಎಂಬಾತನೇ ಆರೋಪಿ.
ಒಂದು ವರ್ಷದ ಮಗಳನ್ನೇ ಮಾರಿದ ತಾಯಿ; ಅಮ್ಮನೂ ಸೇರಿ 9 ಮಂದಿಯ ಬಂಧನ

ಪದವಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:14 + nine =
Remember me
