ಲಖನೌ:ಕೆಲವರು ಮದುವೆಯಾದ ನಂತರವೂ ವಿವಾಹೇತರ ಸಂಬಂಧವನ್ನೂ ಹೊಂದುವ ಮೂಲಕ ತಮ್ಮ ಸುಂದರವಾದ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಅನೈತಿಕ ಸಂಬಂಧವೂ ಅನೇಕರ ಜೀವನ ಕೆಡೆಸಿದ್ದು, ಕೆಲವೊಮ್ಮೆ ಈ ವಿಚಾರಗಳಿಗೆ ಕೊಲೆಗಳು ಸಹ ನಡೆದಿವೆ. ಇದೀಗ ಇದಕ್ಕೆ ಪೂರಕವೆಂಬಂತೆ ವೈದ್ಯೆಯೊಬ್ಬಳು ತನ್ನ ಇಬ್ಬರು ಪ್ರೇಮಿಗಳೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದು ಪತಿ ಕೈಯಲ್ಲಿ ಥಳಿತಕ್ಕೊಳಗಾಗಿರುವ ಘಟನೆ ಉತ್ತರಪ್ರದೇಶದ ಕಾಸ್​ಗಂಜ್​ನಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ತನ್ನ ಪತ್ನಿ ಹೋಟೆಲ್​ ಒಂದರಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ವೈದ್ಯೆಯ ಪತಿ, ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೆಲ್​ ರೂಮಿಗೆ ಎಂಟ್ರಿ ನೀಡಿದ್ದಾನೆ. ತನ್ನ ಹೆಂಡತಿಯನ್ನು ಇತರ ಪುರುಷರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ ಪತಿ ಆಘಾತಕ್ಕೊಳಗಾಗಿದ್ದಾನೆ. ಇದನ್ನು ನೋಡಲಾದೆ ಪತಿ ವೈದ್ಯೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆಕೆ ಜತೆಗೆ ಇದ್ದ ಇಬ್ಬರು ವ್ಯಕ್ತಿಗಳಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
Extra-Marital affair Kalesh (Doctor (Husband caught his Doctor Wife doing three some in a Hotel in Kasganj, UP. The wife is a Govt Doctor and she was staying separate after having dispute with her husband since last one year)pic.twitter.com/fBeMbQD8PF
ಇದನ್ನೂ ಓದಿ:ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ತಮ್ಮ ಜಮೀನನ್ನೇ ದಾನ ಮಾಡಿದ ಮುಸ್ಲಿಂ ಸಹೋದರರು
ಈ ಕುರಿತು ಪ್ರತಿಕ್ರಿಯಿಸಿರುವ ಕಾಸ್​ಗಂಜ್​ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ವೈದ್ಯ ಹಾಗೂ ಆಕೆಉ ಜೊತೆಗಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪತಿ-ಪತ್ನಿ ನಡುವೆ ಸಂಬಂಧ ಅಷ್ಟಾಗಿ ಚೆನ್ನಾಗಿ ಇರಲಿಲ್ಲ ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.  ಇಬ್ಬರು ಕೂಡ ವೈದ್ಯರು ಎಂದು ತಿಳಿದು ಬಂದಿದೆ.
ವೈದ್ಯರ ಪತ್ನಿ ಕಾಸ್ಗಂಜ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸುಮಾರು ದಿನಗಳಿಂದ ಪತ್ನಿಯ ಮೇಲೆ ಈ ರೀತಿಯ ಅನುಮಾನಗಳು ಇತ್ತು ಎಂದು ಪತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತ್ನಿಯ ನಡವಳಿಕೆಯನ್ನು ಪತ್ತೆ ಮಾಡಲು ಬುಧವಾರ ಹೋಟೆಲ್​​​​ಗೆ ಬಂದಿದ್ದಾನೆ. ಆಗಾ ವೈದ್ಯೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಈ ವಿಚಾರ ಆತನ ಕುಟುಂಬಕ್ಕೂ ತಿಳಿದು ಹೋಟೆಲ್​​​ಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ತೀವ್ರ ವಾಗ್ವಾದ ನಡೆದು ಕೈ-ಕೈ ಮಿಲಾಯಿಸಿದ್ದಾರೆ. ಗಂಡನ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
