ಮಥುರಾ:ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವೈದ್ಯಕೀಯ ಸಿಬ್ಬಂದಿಗೆ ಟಾರ್ಗೆಟ್​ ನೀಡಲಾಗಿದೆ. ನಿಗದಿತ ಸಮಯದಲ್ಲಿ ಇಂತಿಷ್ಟು ಜನರ ಮಾದರಿಗಳನ್ನು ಸಂಗ್ರಹಿಸಿ, ಕರೊನಾ ಟೆಸ್ಟ್​ಗೆ ಒಳಪಡಿಸಬೇಕು ಎಂದು ಸರ್ಕಾರಗಳೇ ಆದೇಶ ನೀಡಿವೆ.
ಅದರಂತೆ ಆರೋಗ್ಯ ಕಾರ್ಯಕರ್ತರು ಕರೊನಾ ಟೆಸ್ಟ್​ನಲ್ಲಿ ಬಿಜಿಯಾಗಿದ್ದಾರೆ. ಸರ್ಕಾರ ಕೊಟ್ಟಿರುವ ಟಾರ್ಗೆಟ್​ ತಲುಪಲು ಪ್ರಯತ್ನಿಸುತ್ತಿವೆ. ಹೀಗಿರುವಾಗ ಇಲ್ಲೋರ್ವ ವೈದ್ಯ ಒಂದು ವಿಚಿತ್ರ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯಿಂದ ಈಗಾಗಲೇ ಆದೇಶ ಹೊರಬಿದ್ದಿದ್ದು, ಕೊವಿಡ್​-19 ವಾರಿಯರ್ಸ್​​ಗೆ ಸಮಯ ಮತ್ತು ತಲುಪಬೇಕಾದ ಗುರಿಯ ನಿಗದಿ ಮಾಡಲಾಗಿದೆ. ಅದನ್ನು ತಲುಪಲು ವೈದ್ಯನೋರ್ವ ತನ್ನದೇ ಗಂಟಲು ದ್ರವದ ಮಾದರಿಯನ್ನು ನೀಡಿದ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಕೂಡ ವೈರಲ್ ಆಗಿದೆ. ಆತ ಒಂದು ಬಾರಿ ಕೊಟ್ಟಿದ್ದರೆ ಸುದ್ದಿಯಾಗುತ್ತಿರಲಿಲ್ಲವೇನೋ..ಆದರೆ ಒಟ್ಟು 15 ಸಲ ತನ್ನದೇ ಸ್ಯಾಂಪಲ್​ ನೀಡಿದ್ದಾನೆ.ಇದನ್ನೂ ಓದಿ:ಇದು ‘ಮಾಸ್ಕ್​’ ಧೋಖಾ; ಬೆಂಗಳೂರು ಉದ್ಯಮಿಗೆ ಅಮೆರಿಕನ್ನರಿಂದ 1.23 ಕೋಟಿ ರೂ.ವಂಚನೆ
ಈ ಘಟನೆ ನಡೆದಿದ್ದು ಬಾಲ್ಡಿಯೋದಲ್ಲಿ. ವೈದ್ಯನ ಹೆಸರು ಡಾ. ರಾಜಕುಮಾರ್​ ಸರಸ್ವತ್​ ಎಂದು ಗುರುತಿಸಲಾಗಿದೆ. ಆರೋಗ್ಯ ಕಾರ್ಯಕರ್ತ ವೈದ್ಯನ ಮೂಗು ಹಾಗೂ ಗಂಟಲು ದ್ರವವನ್ನು ತೆಗೆದು ಕಿಟ್​​ಗಳಲ್ಲಿ ಸಂಗ್ರಹಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಸಿಎಂಒದಿಂದ ನೀಡಲಾದ ಟಾರ್ಗೆಟ್ ರೀಚ್​ ಆಗಲು ಹೀಗೆ ಮಾಡುತ್ತಿರುವುದಾಗಿ ವೈದ್ಯ ಹೇಳಿಕೊಂಡಿದ್ದಾರೆ. ಈ 15 ಮಾದರಿಗಳೂ ಓರ್ವ ವೈದ್ಯನದ್ದೇ ಆಗಿದ್ದರೂ ನಂತರ ಸುಳ್ಳು ಹೆಸರುಗಳೊಂದಿಗೆ, ಬೇರೆಯವರದ್ದು ಎಂಬಂತೆ ಪರೀಕ್ಷೆಗೆ ಕಳಿಸುವುದು ಇವರ ದುರುದ್ದೇಶ.
ಇದೇ ಆಸ್ಪತ್ರೆಯ ಇನ್ನೋರ್ವ ವೈದ್ಯನಿಂದ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ನೋಡಿದ್ದೇವೆ. ಆರೋಪ ಸಾಬೀತಾದರೆ ಡಾಕ್ಟರ್​ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್​)
#fake#samplingof#corona#test: A video of#Mathura’s CHC doctor giving more than 15 samples for Corona test for completing his sampling target goes viral. Health officials mark inquiry into the matter.@timesofindia@UPGovt@dmmathura7512@myogiadityanathpic.twitter.com/b044iinffd
— Anuja Jaiswal (@AnujaJaiswalTOI)September 20, 2020

ಇದು ಜಗತ್ತಿನ ಮೊದಲ ಸೈಬರ್ ಅಟ್ಯಾಕ್​ ಸಾವು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 8 =
Remember me
