ಮಹಾರಾಷ್ಟ್ರ:ರೋಗಿಯೊಬ್ಬರಿಗೆ ತೀವ್ರ ತೊಂದರೆ ಇರುವುದನ್ನು ಕಂಡ ಆಸ್ಪತ್ರೆಯ ಅಧಿಕಾರಿಗಳು ಈ ಎಮರ್ಜೆನ್ಸಿ ಕೇಸ್​ ನೋಡಿಕೊಳ್ಳಲು ವೈದ್ಯರೊಬ್ಬರನ್ನು ನಿಯೋಜಿಸಿದ್ದಾರೆ. ಆದ್ರೆ, ತನ್ನ ಕರ್ತವ್ಯ ಮರೆತ ವೈದ್ಯ ಕಂಠಪೂರ್ತಿ ಕುಡಿದು, ರೋಗಿಯ ಕೊಠಡಿಗೆ ಪ್ರವೇಶಿಸಿರುವ ಘಟನೆ ಮಹಾರಾಷ್ಟ್ರದ ವಾಶಿಮ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಇಂಗ್ಲಿಷ್ ಫಲಕಗಳ ವಿರುದ್ಧ ಕನ್ನಡ ಘರ್ಜನೆ; ಖಾಕಿ- ಕಾರ್ಯಕರ್ತರ ಜಟಾಪಟಿ
ಕಾರಂಜಾ ಉಪಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ.ಮಹೇಶ್ ರಾಥೋಡ್ ಅಮಲೇರಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದು, ಸಿಬ್ಬಂದಿ ಹಾಗೂ ಇತರರು ಆತನನ್ನು ಹಾಸಿಗೆ ಮೇಲೆ ಮಲಗುವಂತೆ ಹೇಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಆಸ್ಪತ್ರೆಯ ಇತರ ಸಿಬ್ಬಂದಿ ಕುಡಿದು ಬಂದಿದ್ದ ವೈದ್ಯ ರಾಥೋಡ್​ನನ್ನು ಮನೆಗೆ ಹೋಗುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಅಷ್ಟಾದರೂ ಆತ ಏನನ್ನೂ ಗ್ರಹಿಸುವ ಸ್ಥಿತಿಯಲ್ಲಿರಲಿಲ್ಲ ಎಂಬುದು ತಿಳಿದುಬಂದಿದೆ. ಕೂಡಲೇ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಗಾಲಿಕುರ್ಚಿ ಬಳಸಿದ ಸಿಬ್ಬಂದಿಗಳು, ವೈದ್ಯನನ್ನು ಹಾಸಿಗೆ ಮೇಲೆ ಮಲಗಿಸಿದ್ದಾರೆ.
ಇದನ್ನೂ ಓದಿ:ಬದಲಾದ ರಾಜಕೀಯ ಸಮೀಕರಣ; ಸದ್ದು ಮಾಡಿದ ಭ್ರಷ್ಟಾಚಾರ, ಜಾತಿಗಣತಿ ವಿವಾದಗಳು
ವೈದ್ಯ ರಾಥೋಡ್ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಮಹೇಶ ಲಹಾನೆ ತಿಳಿಸಿದ್ದು, “ಈ ಘಟನೆ ಡಿಸೆಂಬರ್ 24 ರಂದು ನಡೆದಿದ್ದು, ಸಂಜೆ 6 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ನನಗೆ ಕರೆ ಬಂದಿತು. ತುರ್ತು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದ್ದ ವೈದ್ಯರು ಕುಡಿದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು. ನಾನು ಸಮಸ್ಯೆಯನ್ನು ಉನ್ನತ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ತ್ರಿಪುರ: ಮಾಜಿ ಸಚಿವ, ಬಿಜೆಪಿ ಶಾಸಕ ಸುರ್ಜಿತ್ ದತ್ತಾ ನಿಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
