ಕೋಲ್ಕತ್ತಾ:ಕೋಲ್ಕತ್ತಾ ಟ್ರೈನಿವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದ್ದರೆ, ಆರೋಪಿಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ವಿಷಯ ಬೆಳಕಿಗೆ ಬಂದಿದೆ. ಸಂಜಯ್ ರಾಯ್ ವೈದ್ಯೆಯನ್ನು ಹತ್ಯೆ ಮಾಡುವ ಮೊದಲು ಕೋಲ್ಕತ್ತಾದ ಎರಡು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಎಂದು ಕೋಲ್ಕತ್ತಾ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮದ್ವೆಯಾಗಿ 2 ತಿಂಗಳಿಗೆ ಮನೆಯನ್ನು ಮಾರಾಟಕ್ಕಿಟ್ಟ ಸ್ಟಾರ್ ಹೀರೋಯಿನ್! ಕಾರಣವೇನು ಗೊತ್ತಾ?
ಘಟನೆ ಸಂಭವಿಸಿದ ಆಗಸ್ಟ್ 8 ರ ರಾತ್ರಿ ಮದ್ಯ ಸೇವಿಸಿದ್ದ ರಾಯ್, ಆಸ್ಪತ್ರೆಯ ಇನ್ನೊಬ್ಬ ನಾಗರಿಕ ಸ್ವಯಂಸೇವಕನೊಂದಿಗೆ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಸೋನಗಚಿಗೆ ಹೋಗಿದ್ದ. ಅಲ್ಲಿ ರಾಯ್ ವೇಶ್ಯಾಗೃಹದ ಹೊರಗೆ ನಿಂತಿದ್ದು, ಅವನ ಸ್ನೇಹಿತ ಒಳಗೆ ಹೋಗಿದ್ದ. ಬಳಿಕ ರಾತ್ರಿ 2 ಗಂಟೆಗೆ ದಕ್ಷಿಣ ಕೋಲ್ಕತ್ತಾದ ವೇಶ್ಯಾಗೃಹಕ್ಕೆ ತೆರಳಿದ್ದರು. ಆ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ರಾಯ್ ಕಿರುಕುಳ ನೀಡಿದ್ದಾನೆ. ಕುಡಿದ ಅಮಲಿನಲ್ಲಿ ಆಕೆಗೆ ನಗ್ನ ಚಿತ್ರಗಳನ್ನು ಕೇಳಿದ್ದಾನೆ. ಮುಂಜಾನೆ 3.50 ರ ಸುಮಾರಿಗೆ ರಾಯ್ ಆಸ್ಪತ್ರೆ ತಲುಪಿದ್ದ.
ಅವನು ಮೊದಲು ಆಪರೇಷನ್ ಥಿಯೇಟರ್ ಬಾಗಿಲು ಮುರಿದು 4 ಗಂಟೆಗೆ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರವೇಶಿಸಿದ್ದಾನೆ. ನಂತರ ಮೂರನೇ ಮಹಡಿಯಲ್ಲಿ ಸೆಮಿನಾರ್ ಕೊಠಡಿಗೆ ಹೋಗಿದ್ದಾನೆ. ಆ ಸಮಯದಲ್ಲಿ ಸಂತ್ರಸ್ತೆ ಸೆಮಿನಾರ್ ಹಾಲ್‌ನಲ್ಲಿ ಗಾಢ ನಿದ್ದೆಯಲ್ಲಿದ್ದಾಗ ರಾಯ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಮದ್ಯ ಸೇವಿಸಿ ಆಸ್ಪತ್ರೆಯ ಆವರಣದಲ್ಲಿ ಹಲವು ಬಾರಿ ತಿರುಗಾಡಿದ್ದಾನೆ. ಸಂತ್ರಸ್ತೆಯ ಸಾವು ಬೆಳಗ್ಗೆ ಬೆಳಕಿಗೆ ಬಂದಿದೆ.
‘ಮೊದಲು ನಿಮ್ಮ ಹೆಂಡ್ತಿಗೆ ಕ್ಷಮೆಯಾಚಿಸಿ’, ವೈದ್ಯೆ ಅತ್ಯಾಚಾರ ಪ್ರಕರಣದ ಪೋಸ್ಟ್ ಮಾಡಿದ್ದಕ್ಕೆ ಪಾಕ್ ನಟನಿಗೆ ಟ್ರೋಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + twelve =
Remember me
