ಕೋಲ್ಕತ್ತಾ:‘ತಾನು ಆರ್​ಜೆ ಕರ್​ ಆಸ್ಪತ್ರೆ ಸೆಮಿನಾರ್ ಹಾಲ್‌ಗೆ ಬರುವಷ್ಟರಲ್ಲಿ ಸಂತ್ರಸ್ತೆ ಮೃತಪಟ್ಟಿದ್ದಳು ಎಂದು ಸುಳ್ಳು ಪತ್ತೆ (ಪಾಲಿಗ್ರಾಫ್​) ಪರೀಕ್ಷೆಯ ವೇಳೆ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಶಂಕಿತ ಸಂಜಯ್ ರಾಯ್ ಹೇಳಿದ್ದಾನೆ.
ಇದನ್ನೂ ಓದಿ:ದ್ರಾವಿಡ್ ವಿಶ್ವದಾಖಲೆ ಮುರಿದ ಜೋರೂಟ್​..ಮುಂದಿನ ಗುರಿ ತೆಂಡೂಲ್ಕರ್!
ರಾಯ್ ಆರಂಭದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದು, ಕೆಲವು ದಿನಗಳ ನಂತರ ಆ.25(ಭಾನುವಾರ)ಈ ಪರೀಕ್ಷೆಯನ್ನು ನಡೆಸಲಾಯಿತು. ಈಗ ಯೂ ಟರ್ನ್​ ಹೊಡೆದಿದ್ದು, ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಪರೀಕ್ಷೆಯ ಸಮಯದಲ್ಲಿ ಆರೋಪಿ ರಾಯ್ ನಿರಾತಂಕವಾಗಿ ಕಾಣಿಸಿಕೊಂಡಿದ್ದಾನೆ. ಆಸ್ಪತ್ರೆಗೆ ತಾನು ತಲುಪುವ ವೇಳೆಗೆ ವೈದ್ಯೆ ಮೃತಪಟ್ಟಿದ್ದು, ಭಯಪಟ್ಟು ಸ್ಥಳದಿಂದ ಓಡಿಹೋಗಿದ್ದಾಗಿ ಸಿಬಿಐ ಅಧಿಕಾರಿಗಳ ಎದುರು ಹೇಳಿಕೊಂಡಿದ್ದಾನೆ.
ಈ ಹೇಳಿಕೆಯು ಕೋಲ್ಕತ್ತಾ ಪೊಲೀಸರಿಗೆ ಘಟನೆ ನಡೆದ ಪ್ರಾರಂಭದಲ್ಲಿ ನೀಡಿದ್ದ ತಪ್ಪೊಪ್ಪಿಗೆಗೆ ವ್ಯತಿರಿಕ್ತವಾಗಿದೆ. ಈ ಹಿಂದೆ ಆತ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದರೆ ಸಿಬಿಐ ತನಿಖೆಯಲ್ಲಿ ಯೂ ಟರ್ನನ ಹೊಡೆದಿದ್ದಾನೆ. ಈ ಹಿಂದೆ ಆತ ನ್ಯಾಯಾಲಯದಲ್ಲಿ ಮಾತನಾಡುವಾಗ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದ. ಅಗತ್ಯವಾದರೆ ತನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದ.
ರಾಯ್​ನ ಹೇಳಿಕೆಗಳ ಹೊರತಾಗಿಯೂ, ಸಿಬಿಐ ಮತ್ತು ಪೊಲೀಸರು ಅವನ ಕಟ್ಟುಕಥೆಗಳಲ್ಲಿ ಹಲವಾರು ವಿರೋಧಾಭಾಸಗಳನ್ನು ಕಂಡುಕೊಂಡಿದ್ದಾರೆ. ರಾಯ್ ತನಿಖೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 9 ರಂದು ಮುಂಜಾನೆ 4ಗಂಟೆಗೆ ಆಸ್ಪತ್ರೆ ಆವರಣಕ್ಕೆ ರಾಯ್ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇದಕ್ಕೆ ಪೂರಕವಾಗಿ ರಾಯ್‌ಗೆ ಸೇರಿದ ಬ್ಲೂಟೂತ್ ಹೆಡ್‌ಸೆಟ್ ಸ್ಥಳದಲ್ಲಿ ಕಂಡುಬಂದಿದೆ.
ಕೆಲಸ ಮಾಡದೆ 3 ಕೋಟಿ ಸಂಬಳ ಕೊಟ್ಟ ಅಮೆಜಾನ್.. ಉದ್ಯೋಗಿ ಪೋಸ್ಟ್ ವೈರಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
