ನವದೆಹಲಿ:ಚಿಕ್ಕ ಮಕ್ಕಳ ಕೈಗೆ ಏನಾದರು ಸಿಕ್ಕರೆ ಸೀದಾ ಬಾಯಿಗೆ ಹಾಕಿ ಕೊಂಡು ಬಿಡುತ್ತವೆ. ಹೀಗೆ  ಖಮ್ಮಂ ನಗರದ ರಾಠಿ ದರ್ವಾಜ ಪ್ರದೇಶದ 5 ವರ್ಷದ ಬಾಲಕ ಮೊಹಮ್ಮದ್ ಮಹೈಜ್  ಎಂಬಾತ ತನ್ನ ಮನೆಯ ಹೊರಗೆ ಸಿಕ್ಕ ಹಳೆಯ ಬೀಗವನ್ನು ನುಂಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದನು. ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ ಮಾಡದೇ ಬೀಗ ಹೊರ ತಗೆದಿದ್ದಾರೆ.
ನಡೆದಿದ್ದೇನು?:5 ವರ್ಷದ ಮೊಹಮ್ಮದ್ ಮಹೈಜ್ ಎನ್ನುವ ಬಾಲಕ ಆಟವಾಡುತ್ತಾ ಇದ್ದನು.  ಈ ವೇಳೆ ಬಾಲಕ ಅಲ್ಲೇ ಬಿದ್ದಿದ್ದ ಬೀಗವನ್ನು ಬಾಯಿಗೆ ಹಾಕಿ ನುಂಗಿದ್ದಾನೆ.ತಕ್ಷಣ ಬಾಲಕನ ತಂದೆ ಗಮನಿಸಿ  ಹತ್ತಿರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ.ಎಕ್ಸರೇ ತೆಗೆದಿದ್ದಾರೆ ಬಾಲಕನ ಹೊಟ್ಟೆಯಲ್ಲಿ ಬೀಗ ಇರುವುದು ಪತ್ತೆಯಾಗಿದೆ. ಇದನ್ನುಶಸ್ತ್ರಚಿಕಿತ್ಸೆ ಮೂಲಕವಾಗಿ ತೆಗೆಯ ಬೇಕಾಗುತ್ತದೆ. ಆದರೆ  ಅಧಿಕ ಹಣ ಖರ್ಚಾಗುತ್ತದೆ ಎಂದು ಪೋಷಕರ ಬಳಿ ವೈದ್ಯರು ಹೇಳಿದ್ದಾರೆ. ಬಾಲಕನನ್ನುಖಮ್ಮಂನಲ್ಲಿರುವ ಸಾಯಿರಾಮ್ ಗ್ಯಾಸ್ಟ್ರೋ ಲಿವರ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾಯಿ ರಾಮ್ ಆಸ್ಪತ್ರೆ ಗ್ಯಾಸ್ಟ್ರೋದಲ್ಲಿ ಆಧುನಿಕ ಎಂಡೋಸ್ಕೋಪಿ ಮೂಲಕ ಶಸ್ತ್ರ ಚಿಕಿತ್ಸೆ ಇಲ್ಲದೆ ಬೀಗ ತೆಗೆದು ಬಾಲಕನ ಜೀವ ಉಳಿಸಿದ್ದಾರೆ ವೈದ್ಯ ಜಂಗಾಲ ಸುನಿಲ್ ಕುಮಾರ್.ಮಗು ಜೀವ ಉಳಿಸಿದ ವೈದ್ಯರಿಗೆ ಬಾಲಕನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಡಾ.ಜಂಗಾಲ ಸುನೀಲ್ ಕುಮಾರ್  ಮಾತನಾಡಿ, ಅತ್ಯಂತ ಗಂಭೀರವಾದ ಸಮಸ್ಯೆಗೆ ವೈಜ್ಞಾನಿಕ ಚಿಕಿತ್ಸೆ ನೀಡದೆ ಬೀಗ ತೆಗೆದಿದ್ದು, ಪೋಷಕರು ಸಕಾಲದಲ್ಲಿ ಸ್ಪಂದಿಸಿ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದರಿಂದ ಅನಾಹುತ ತಪ್ಪಿದೆ.ಇದೀಗ ಬಾಲಕ ಸಂಪೂರ್ಣ ಆರೋಗ್ಯವಂತನಾಗಿರುವುದರಿಂದ ಇಂತಹ ವಿಷಯಗಳನ್ನು ಮಕ್ಕಳಿಂದ ದೂರವಿಡಬೇಕು ಎಂದು ಡಾ.ಜಂಗಾಲ ಸುನೀಲ್ ಕುಮಾರ್ ಪೋಷಕರಿಗೆ ಸಲಹೆ ನೀಡಿದರು.
ಎಂಡೋಸ್ಕೋಪಿ ವಿಧಾನ ಏನು?:ಅರಿವಳಿಕೆಗಾಗಿ ನಿದ್ರಾಜನಕವನ್ನು ನೀಡಲಾಗುವುದು, ಗಂಟಲು ಮರಗಟ್ಟುವಿಕೆಗೆ ಬಾಯಿಯಲ್ಲಿ ಸಿಂಪಡಿಸಲಾಗುತ್ತದೆ. ಉದ್ದವಾದ, ಹೊಂದಿಕೊಳ್ಳುವ ಟ್ಯೂಬ್ (ಎಂಡೋಸ್ಕೋಪ್) ಆಗಿರುವ ಹೊಂದಿಕೊಳ್ಳುವ ಎಂಡೋಸ್ಕೋಪ್ ಅನ್ನು ಬಾಯಿಯಲ್ಲಿ ಸೇರಿಸಲಾಗುತ್ತದೆ.ಎಂಡೋಸ್ಕೋಪ್ ಸ್ಕೋಪ್ ಗಂಟಲಿನ ಕೆಳಗೆ ಹಾದುಹೋದಾಗ ಮತ್ತು ಅದು ನಿಮ್ಮ ಅನ್ನನಾಳಕ್ಕೆ ಪ್ರವೇಶಿಸಿದಾಗ ವೈದ್ಯರು ರೋಗಿಯನ್ನು ನುಂಗಲು ಕೇಳುತ್ತಾರೆ. ಎಂಡೋಸ್ಕೋಪ್‌ನ ತುದಿಯಲ್ಲಿರುವ ಒಂದು ಸಣ್ಣ ಕ್ಯಾಮರಾ ಪರೀಕ್ಷಾ ಕೊಠಡಿಯಲ್ಲಿರುವ ವೀಡಿಯೊ ಮಾನಿಟರ್‌ಗೆ ಚಿತ್ರಗಳನ್ನು ರವಾನಿಸುತ್ತದೆ. ಎಂಡೋಸ್ಕೋಪಿ ವಿಧಾನದಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್ ನಿಮ್ಮ ಮೇಲಿನ ಜೀರ್ಣಾಂಗವ್ಯೂಹದ ಅಸಹಜತೆಗಳನ್ನು ನೋಡಲು ಮಾನಿಟರ್‌ನಲ್ಲಿ ಚಿತ್ರಗಳನ್ನು ವೀಕ್ಷಿಸುತ್ತಾರೆ. ಎಂಡೋಸ್ಕೋಪಿ ಪ್ರಕ್ರಿಯೆಯ ಸಮಯದಲ್ಲಿ ಎಂಡೋಸ್ಕೋಪ್ ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡುವ ಜೀರ್ಣಾಂಗವನ್ನು ಉಬ್ಬಿಸಲು ಅನ್ನನಾಳಕ್ಕೆ ಗಾಳಿಯ ಒತ್ತಡವನ್ನು ನೀಡಬಹುದು.ಶಸ್ತ್ರಚಿಕಿತ್ಸಾ ಎಂಡೋಸ್ಕೋಪ್ ಪ್ರಕರಣಗಳಲ್ಲಿ ಅಂಗಾಂಶ ಮಾದರಿಯನ್ನು ಸಂಗ್ರಹಿಸಲು ಅಥವಾ ಪಾಲಿಪ್ ಅನ್ನು ತೆಗೆದುಹಾಕಲು ಎಂಡೋಸ್ಕೋಪ್ ಮೂಲಕ ವಿಶೇಷ ಶಸ್ತ್ರಚಿಕಿತ್ಸಾ ಉಪಕರವಾಗಿ ಬಳಸಲಾಗುತ್ತದೆ.
ರಾಜಾಶ್ರಯದ ಜಾಗ ಮನರಂಜನೆಯ ಭಾಗ; ಕಂಬಳ ಆಚರಣೆಗೆ ಬಂದಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 18 =
Remember me
