ಲಖನೌ:ಇತ್ತೀಚೆಗೆ ಡಾಕ್ಟರ್​ ಮತ್ತು ನರ್ಸ್​ ಜಟಾಪಟಿಯ ಒಂದು ವೈರಲ್​ ವಿಡಿಯೋವನ್ನು ನೀವು ನೋಡಿರಬೇಕು. ಮೊದಲು ನರ್ಸ್​ ಡಾಕ್ಟರ್​ ಕೆನ್ನೆಗೆ ಹೊಡೆಯುತ್ತಾಳೆ. ಅದಾದ ನಂತರ ಡಾಕ್ಟರ್​, ನರ್ಸ್​ಳ ಕೆನ್ನೆಗೆ ಬಾರಿಸುತ್ತಾನೆ. ಅಘಾತಕಾರಿ ವಿಚಾರವೆಂದರೆ ಆ ವೈರಲ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಡಾಕ್ಟರ್​ ಇದೀಗ ಹೆಣವಾಗಿ ಪತ್ತೆಯಾಗಿದ್ದಾನೆ.
ಹೌದು! ವಿಡಿಯೋದಲ್ಲಿದ್ದ ಉತ್ತರ ಪ್ರದೇಶದ ರಾಮ್​ಪುರ ನಿವಾಸಿ ವೈದ್ಯ ಡಾ. ಬಿಎಂ ನಗರ್​ ಇದೀಗ ಸಾವನ್ನಪ್ಪಿದ್ದಾರೆ. ಅವರ ಸಾವಿನ ಹಿಂದೆ ಅನೇಕ ರೋಚಕತೆ ಅಡಗಿ ಕುಳಿತಿದೆ.
ಬಿಎಂ ನಗರ್​ ಅವರು ರಾಮ್​ಪುರದಲ್ಲಿದ್ದ ತಮ್ಮ ಸರ್ಕಾರಿ ನಿವಾಸದಲ್ಲೇ ಹೆಣವಾಗಿ ಪತ್ತೆಯಾಗಿದ್ದಾರೆ. ಹೆಣ ಪತ್ತೆಯಾಗುತ್ತಿದ್ದಂತೆಯೇ ಜಿಲ್ಲೆಯ ವೈದ್ಯಾಧಿಕಾರಿ ಆ ಹೆಣವನ್ನು ಅವರ ಸ್ವಂತ ಊರಿಗೆ ಕಳುಹಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅದಾದ ನಂತರ ಊರಿನಲ್ಲಿದ್ದವರನ್ನು ರಾಮ್​ಪುರಕ್ಕೆ ಕರೆಸಿಕೊಳ್ಳಲಾಗಿದೆ. ಅವರ ಕುಟುಂಬ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲು ಬಿಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ಅವಶ್ಯಕತೆ ಇಲ್ಲವೆಂದು ಬರೆದುಕೊಟ್ಟು, ದೇಹವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಬಿಎಂ ನಗರ್​ ಅವರಿಗೆ ಶುಗರ್​ ಮತ್ತು ಬಿಪಿ ತುಂಬಾ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಅವರು ಸಾವನ್ನಪ್ಪಿರಬಹುದು ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಅಂದ ಹಾಗೆ ಬಿಎಂ ನಗರ್​ ಅವರು ನರ್ಸ್ ಜತೆ ಜಗಳವಾಡುವ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಅದರಲ್ಲಿ ಇಬ್ಬರೂ ಪರಸ್ಪರ ಹೊಡೆದುಕೊಂಡಿರುವುದೂ ಕಾಣಿಸಿಕೊಂಡಿತ್ತು. ವಿಡಿಯೋ ವೈರಲ್​ ಆದ ನಂತರ ನರ್ಸ್​ ಅನ್ನು ಸಸ್ಪೆಂಡ್​ ಮಾಡಿ, ಬಿಎಂ ನಗರ್​ ಅವರನ್ನೂ ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಅದಾದ ಕೆಲವೇ ದಿನಗಳಲ್ಲಿ ಅವರನ್ನು ವಾಪಾಸು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಈ ವಿಚಾರವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ ವೈದ್ಯರು ತಮಗೂ ಮತ್ತು ತಮ್ಮ ಕುಟುಂಬಕ್ಕೂ ಅಪಾಯವಿದೆ ಎಂದು ದೂರು ದಾಖಲಿಸಿದ್ದರು ಎನ್ನಲಾಗಿದೆ. (ಏಜೆನ್ಸೀಸ್)
ಸೋಂಕಿತೆಗೆ ಕೊಟ್ಟಿದ್ದ ಆಕ್ಸಿಜನ್​ ತೆಗೆದು ಏನೇನೋ ಪೂಜೆ ಮಾಡಿದ್ರು! ಸತ್ತ ಮೇಲೆ ವೈದ್ಯರನ್ನೇ ದೂಷಿಸಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fifteen =
Remember me
