ಭೋಪಾಲ್:ಲಾಕ್​ಡೌನ್ ಸಮಯದಲ್ಲಿ ಮಗನಿಗೆ ಶಿಕ್ಷಣ ನೀಡುತ್ತಿದ್ದ ಟ್ಯೂಷನ್ ಟೀಚರ್​ ಜತೆಯೇ ಲವ್ವಿ ಡವ್ವಿ ಆರಂಭಿಸಿದ ಅಪ್ಪ ಆಕೆಯೊಂದಿಗೇ ಮದುವೆಯಾಗಲು ಪ್ರಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂಡೋರ್​ನಲ್ಲಿ ನಡೆದಿದೆ. ಮದುವೆ ನಿಲ್ಲಿಸಿರುವ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜೀತೇಂದ್ರ ಪಿಂಡೋರಿಯಾ ಹೆಸರಿನ ವೈದ್ಯ ಎರಡು ವರ್ಷಗಳ ಹಿಂದೆ ಮಗಳ ಮದುವೆ ಮಾಡಿದ್ದ. ಮಗ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದು, ಆತನಿಗೆ ಟ್ಯೂಷನ್​ಗೆ ಕಳುಹಿಸಲಾಗುತ್ತಿತ್ತು. ಈ ಮಧ್ಯೆ 60 ವರ್ಷ ವಯಸ್ಸಾಗಿರುವ ವೈದ್ಯನಿಗೆ ಮಗನ ಟ್ಯೂಷನ್ ಟೀಚರ್ ಮೇಲೆ ಲವ್ವಾಗಿದೆ. 20 ವರ್ಷಗಳ ವಯಸ್ಸಿನ ಅಂತರವಿದ್ದರೂ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕುಟುಂಬದವರಿಗೆ ವಿಚಾರ ತಿಳಿಯದಂತೆ ಮದುವೆಯಾಗುವುದಕ್ಕೂ ಪ್ಲಾನ್ ಮಾಡಿದ್ದಾರೆ. ಅದರಂತೆ ಜೂನ್ 19ರಂದು ಮದುವೆ ನಿಶ್ಚಯಿಸಿ ಇಬ್ಬರೂ ವಧು ವರರಂತೆ ಸಿದ್ಧರಾಗಿ ಮಂಟಪದಲ್ಲಿ ಕುಳಿತಿದ್ದಾರೆ.
ವೈದ್ಯನ ಮದುವೆ ವಿಚಾರ ಕುಟುಂಬಕ್ಕೆ ಹೇಗೋ ತಿಳಿದಿದ್ದು, ಕುಟುಂಬ ಮದುವೆ ಸ್ಥಳಕ್ಕೆ ತೆರಳಿ ಜಗಳವಾಡಿದೆ. ಮಗ ತನ್ನ ಅಪ್ಪ ಎರಡನೇ ಮದುವೆಯಾಗುವುದನ್ನು ನಿಲ್ಲಿಸಲು ಜೋರಾಗೇ ಜಗಳವಾಡಿದ್ದಾನೆ. ಈ ವೇಳೆ ಹಲ್ಲೆಯೂ ನಡೆದಿದ್ದು, ಅದೇ ಹಿನ್ನೆಲೆಯಲ್ಲಿ ಆತನ ಟೀಚರ್ ಪೊಲೀಸ್ ಠಾಣೆಯಲ್ಲಿ ತನ್ನ ವಿದ್ಯಾರ್ಥಿಯ ಮೇಲೇ ದೂರು ದಾಖಲಿಸಿದ್ದಾಳೆ. ಆತನನ್ನು ಬಂಧಿಸಿದ ಪೊಲೀಸರು ಮಂಗಳವಾರದಂದು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.
ಮಂಗಳವಾರ ಮನೆಗೆ ವಾಪಾಸಾದ ಮಗ ಅಂದೇ ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಆತ ಸಾವನ್ನಪ್ಪಿದ ಎರಡೇ ಗಂಟೆಗಳಲ್ಲಿ ಕುಟುಂಬಸ್ಥರು ಅವನ ಅಂತ್ಯಸಂಸ್ಕಾರವನ್ನೂ ಮಾಡಿದ್ದಾರೆ. ಆದರೆ ಈ ವಿಚಾರ ಸ್ಥಳೀಯರಿಂದ ಪೊಲೀಸರಿಗೆ ತಿಳಿದಿದ್ದು ಪರಿಶೀಲನೆ ನಡೆಸಿದ್ದಾರೆ. ಕುಟುಂಬದವರು ಮಗನಿಗೆ ಹಾರ್ಟ್ ಅಟ್ಯಾಕ್ ಆಗಿರುವುದಾಗಿ ಹೇಳಿ ತಪ್ಪನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)
ನೀರಿನಲ್ಲಿ ತೇಲುತ್ತಿತ್ತು ಮಹಿಳೆಯ ದೇಹ; ರಕ್ಷಿಸಲು ಹೋದವರಿಗೆ ಕಾದಿತ್ತು ಬಿಗ್ ಶಾಕ್!

ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
