ಮುಂಬೈ:ದಣಿವರಿಯಿಲ್ಲದೆ ಸುಮಾರು 7 ಗಂಟೆಗಳ ಆಪರೇಷನ್ ಮಾಡುವ ಮೂಲಕ ಅಪಘಾತದಲ್ಲಿ ಹೆಬ್ಬೆರಳು ಕಳೆದುಕೊಂಡಿದ್ದ ವ್ಯಕ್ತಿಗೆ ಹೆಬ್ಬೆರಳು ಮರುಜೋಡಣೆ ಮಾಡುವಲ್ಲಿ ಮುಂಬೈ ವೈದ್ಯರು ಯಶಸ್ವಿಯಾಗಿದ್ದಾರೆ.
ಘಟನೆಯ ವಿವರಣೆಗೆ ಬರುವುದಾದರೆ, ಮುಂಬೈ ಮೂಲದ ರೋಹನ್​ ಅಜ್ಜಂಕರ್​ (42)ಗೆ ಬೈಕ್​ ಸ್ಟಂಟ್​ ಮಾಡುವ ಹುಚ್ಚು. ಹೀಗಾಗಿ ರೋಹನ್​ ಪತ್ನಿ ಜಾಗೃತಿ ಬೈಕ್​ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಕೆಲವು ದಿನಗಳ ಹಿಂದೆ ಒದ್ದೆ ಬಟ್ಟೆಯಿಂದ ಬೈಕ್​ ಒರೆಸುವಾಗ ಅದೇ ಸಮಯದಲ್ಲಿ ಇಂಜಿನ್​ ಸಹ ಆನ್​ ಆಗಿ, ರೋಹನ್​ ಎಡಗೈ ಹೆಬ್ಬೆರಳು ಚೈನ್​ಗೆ ಸಿಕ್ಕಿಕೊಂಡಿತ್ತು.
ಇದನ್ನೂ ಓದಿರಿ:ಕಸ್ತೂರಿ ರಂಗನ್ ವರದಿ ವಿರುದ್ಧ ಸುಪ್ರೀಂಗೆ ಮೊರೆ; 1553 ಹಳ್ಳಿಗಳಿಗೆ ಕಾಡುತ್ತಿದೆ ಆತಂಕ
ಕೆಲವೇ ಸೆಕೆಂಡ್​ಗಳನ್ನು ತನ್ನ ಕೈಯನ್ನು ರೋಹನ್​ ಎಳೆದುಕೊಂಡಿದ್ದ. ಬೆರಳಿನಲ್ಲಿ ರಕ್ತ ತುಂಬಿಕೊಂಡಿತ್ತು. ಏನು ಆಗುವುದಿಲ್ಲ. ಇದೊಂದು ಸಣ್ಣ ಗಾಯವಷ್ಟೇ ಅಂದುಕೊಂಡಿದ್ದ ರೋಹನ್​ ಸರಿಯಾಗಿ ನೋಡಿದಾಗ ಹೆಬ್ಬೆರಳಿನ ತುದಿ ಇಲ್ಲದಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದರು.
ತಕ್ಷಣ ಮುಂಬೈನ ಪರೇಲ್​ನಲ್ಲಿರುವ ಗ್ಲೋಬಲ್​ ಆಸ್ಪತ್ರೆಗೆ ರೋಹನ್​ ದಾಖಲಾದರು. ಇದಾದ ಬಳಿಕ ವೈದ್ಯರು ಸುಮಾರು 7 ಗಂಟೆಗಳ ಕಾಲ ಆಪರೇಷನ್​ ನಡೆಸಿ ಬೆರಳನ್ನು ಅಳವಡಿಸಲಾಗಿದೆ. ಆದರೆ, ತಾನು ಉಡುಗೊರೆಯಾಗಿ ನೀಡಿದ ಬೈಕ್‌ನಿಂದಾಗಿ ಪತಿಗೆ ಹೀಗಾಯಿತಲ್ಲ ಎಂದು ಜಾಗೃತಿ ಆಘಾತಕ್ಕೆ ಒಳಗಾಗಿದ್ದಾರೆ.(ಏಜೆನ್ಸೀಸ್​)
ವಿದ್ಯಾರ್ಥಿಗಳಿಗೆ ಅಶ್ಲೀಲಚಿತ್ರ ಕಳಿಸಿದ ಉಪನ್ಯಾಸಕ! ಆನ್​ಲೈನ್​ ಪಾಠದ ವೇಳೆ ಅವಾಂತರ, ಮುಂದೇನಾಯ್ತು?

ತನ್ನನ್ನು ಜೀವಂತ ಹೂತು ಬಿಡಿ ಎಂದು ಮನೆಯವರಿಂದಲೇ ಮಣ್ಣು ಹಾಕಿಸಿಕೊಂಡ ಮಹಿಳೆ!; ಎಲ್ಲ ಶಿವನನ್ನು ಮೆಚ್ಚಿಸಲು…

ಮಗುವಿನ ಕಿಡ್ನಾಪ್ ಹಿಂದಿನ‌ ಕತೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ! ಬೆದರಿಸಿ ಹಣ ಪಡೆಯುವುದಕ್ಕಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
