ನವದೆಹಲಿ:ಆಪರೇಷನ್​ ಥಿಯೇಟರ್​ ಒಳಗಡೆ ಬೆಡ್​ ಮೇಲೆ ರೋಗಿಯೊಬ್ಬರನ್ನು ಮಲಗಿಸಿ ವೈದ್ಯರಿಬ್ಬರು ವಾಗ್ವಾದಕ್ಕಿಳಿದಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಆಪರೇಷನ್​ ಥಿಯೇಟರ್​ ಅಂದರೆ ತುಂಬಾ ಗಂಭೀರತೆ ಕಾಪಾಡಿಕೊಳ್ಳಬೇಕು. ಏಕೆಂದರೆ, ರೋಗಿಯ ಜೀವ ಅಲ್ಲಿನ ವೈದ್ಯರ ಕೈಯಲ್ಲಿ ಇರುತ್ತದೆ. ಹೀಗಾಗಿ ವೈದ್ಯರ ಗಮನವೆಲ್ಲ ರೋಗಿಯ ಮೇಲಿರಬೇಕು. ಆದರೆ, ರೋಗಿಯನ್ನೇ ಮರೆತು ವೈದ್ಯರಿಬ್ಬರು ಮಾತಿನ ಚಕಮಕಿ ನಡೆಸಿರುವುದು ಅವರ ವೃತ್ತಿಪರತೆಯನ್ನು ಪ್ರಶ್ನೆ ಮಾಡಿದಂತಿದೆ.
ವಿಡಿಯೋದಲ್ಲಿ ಏನಿದೆ?ರೋಗಿಯನ್ನು ಆಪರೇಷನ್​ ಥಿಯೇಟರ್​ ಬೆಡ್​ ಮೇಲೆ ಮಲಗಿಸಿ ಸುತ್ತಲೂ ವೈದ್ಯರು ನಿಂತು ಶಸ್ತ್ರಚಿಕಿತ್ಸೆ ಮಾಡುತ್ತಿರುವಂತೆ ಕಾಣುತ್ತದೆ. ಈ ವೇಳೆ ವೈದ್ಯರಿಬ್ಬರು ಮಾತಿನ ಚಕಮಕಿ ನಡೆಸಿದ್ದಾರೆ. ಇಬ್ಬರು ಜಗಳ ಆಡುವುದನ್ನು ಉಳಿದ ವೈದ್ಯರು ಮೂಕ ಪ್ರೇಕ್ಷರಂತೆ ನೋಡುತ್ತಾ ನಿಂತಿದ್ದಾರೆ. ಇನ್ನೊಂದೆಡೆ ರೋಗಿ ಬೆಡ್​ ಮೇಲೆ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದಾನೆ.
ಆಪರೇಷನ್​ ಥಿಯೇಟರ್​ ಒಳಗಡೆ ಇದ್ದವರು ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರೋಗಿಯು ಹಾಗೂ ಇತರೆ ವೈದ್ಯರು ಕೋರಿ ಕೊಂಡರು ಅದನ್ನು ಕಡೆಗಣಿಸಿ ವೈದ್ಯರಿಬ್ಬರು ತಮ್ಮ ಜಗಳವನ್ನು ಮುಂದುವರೆಸಿದ್ದಾರೆ. ಇಬ್ಬರ ನಡುವೆ ಅಹಂ ಭಾವ ಮಾತಿನ ಚಕಮಕಿಗೆ ಕಾರಣ ಎನ್ನಲಾಗಿದೆ.
ಘರ್​ ಕೆ ಕಲೇಶ್​ (Ghar Ke Kalesh) ಎಂಬುವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು ಈವರೆಗೂ 70 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಡಿಯೋ ನೊಡಿದ ನೆಟ್ಟಿಗರು ವೈದ್ಯರ ವರ್ತನೆಯನ್ನು ಖಂಡಿಸಿದ್ದಾರೆ. ವೈದ್ಯರು ತಮ್ಮ ಜಗಳಗಳನ್ನು ಹೊರಗಡೆ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಆಪರೇಷನ್​ ಥಿಯೇಟರ್​ ಒಳಗೆ ಇಟ್ಟುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.(ಏಜೆನ್ಸೀಸ್​)
Verbal kalesh B/w Two Doctors While Operating Surgerypic.twitter.com/gkrddm9L7Z
— Ghar Ke Kalesh (@gharkekalesh)January 4, 2023

ಎಸಿಪಿ ಬೇಡ ಹೇಳಿದ್ರೂ ಕೇಳದ ಇನ್ಸ್​ಪೆಕ್ಟರ್​, ಸ್ಯಾಂಟ್ರೋ ರವಿಯ ನಾದಿನಿ ಮತ್ತು ಪತ್ನಿಯನ್ನು ಬಂಧಿಸಿದ..!

ಸ್ಯಾಂಟ್ರೋ ರವಿಗೆ ಹೆದರಿ ಸರ್ಕಾರಿ ಕೆಲ್ಸ ಬಿಟ್ಟಿರುವ ಅಣ್ಣ! ಬಾಲ್ಯದಿಂದಲೇ ರವಿಗೆ ಇತ್ತು ಕೀಚಕ ಬುದ್ಧಿ

ಇಂಥವರು ಇರ್ತಾರೆ ಹುಷಾರ್! ಉದ್ಯಮಿಯನ್ನು ಬೆತ್ತಲೆ ಮಾಡಿ 2.69 ಕೋಟಿ ರೂ. ದೋಚಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
