ರಾಜಸ್ಥಾನ:ಯುವಕನೊಬ್ಬ ಹೊಟ್ಟೆಯಿಂದ ಬರೋಬ್ಬರಿ 56 ಬ್ಲೇಡ್‌ ತುಂಡುಗಳನ್ನು ವೈದ್ಯರು ತೆಗೆದಿದ್ದಾರೆ. ಈ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
26 ವರ್ಷದ ಯಶ್ಪಾಲ್ ರಕ್ತ ವಾಂತಿ ಮಾಡಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಎಕ್ಸ್-ರೇ ಮಾಡಿದಾಗ ಅವನ ಹೊಟ್ಟೆಯಲ್ಲಿ ಹಲವಾರು ಶೇವಿಂಗ್ ಬ್ಲೇಡ್​ಗಳು ಇರುವುದು ಕಂಡುಬಂದವು. ನಂತರ, ವೈದ್ಯರು ಎಂಡೋಸ್ಕೋಪಿ ನಡೆಸಿದರು ಮತ್ತು ನಂತರ ಒಟ್ಟು 56 ಶೇವಿಂಗ್ ಬ್ಲೇಡ್ ತುಂಡುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಒಂದರ ನಂತರ ಒಂದರಂತೆ ತೆಗೆದುಹಾಕಿದ್ದಾರೆ.
ಇದನ್ನೂ ಓದಿ:30 ಲಕ್ಷ ಸಂಬಳದ ಕೆಲಸ ಬಿಟ್ಟು ಸಮೋಸಾ ಮಾರಾಟ ಮಾಡಿದ ದಂಪತಿ; ವಾರ್ಷಿಕ 45 ಕೋಟಿ ರೂ. ಗಳಿಸ್ತಿದಾರೆ!
ಯುವಕ ಈ ತುಂಡುಗಳನ್ನು ಹೇಗೆ ನುಂಗಿದ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ, ಆದರೆ ಯುವಕನ ಕುಟುಂಬ, ಅವನ ಸ್ನೇಹಿತರು ಮತ್ತು ವೈದ್ಯರು ಸಹ ಈ ಘಟನೆಯಿಂದ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಯಶ್ಪಾಲ್ ಅವರ ಆರೋಗ್ಯ ಸ್ಥಿರವಾಗಿದೆ ಅಂತ ತಿಳಿಸಿದ್ದಾರೆ. ಡಾ. ನರಸಿ ರಾಮ್ ದೇವಸಿ ಅವರು ತುರ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಇದನ್ನೂ ಓದಿ:ತಾಯಿ ಕಣ್ಮುಂದೆ ಕಟ್ಟಡದ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡ ಮಗು
ವೈದ್ಯರು ಹೇಳುವ ಪ್ರಕಾರ, ಯುವಕನನ್ನು ಆಸ್ಪತ್ರೆಗೆ ಕರೆತಂದಾಗ ಆಮ್ಲಜನಕದ ಮಟ್ಟವು 80 ರಷ್ಟಿತ್ತು. ತನಿಖೆಯಲ್ಲಿ, ಹೊಟ್ಟೆಯಲ್ಲಿ ಬ್ಲೇಡ್ ಪತ್ತೆಯಾದಾಗ ಶಸ್ತ್ರಚಿಕಿತ್ಸೆಯ ಮೂಲಕ 56 ಬ್ಲೇಡ್​ಗಳನ್ನು ತೆಗೆದುಹಾಕಲಾಯಿತು.
ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದಲ್ಲೇ ಇವೆ 39 ನಗರಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + thirteen =
Remember me
