ಭುವನೇಶ್ವರ:ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ತಲೆಬುರುಡೆಗೆ ಮಂತ್ರವಾದಿಯೊಬ್ಬ ಸೂಜಿಗಳನ್ನು ಚುಚ್ಚಿದ್ದು, ಇದೀಗ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಇದನ್ನೂ ಓದಿ:ಕಾರಣವಿಲ್ಲದೆ 7ತಿಂಗಳ ಶಿಶು, ದಂಪತಿ ಮೇಲೆ ಗುಂಡುಹಾರಿಸಿದ ಮಹಿಳೆ! ಕೊನೆಗೆ ಏನಾಯ್ತು?
ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ( ವಿಮ್ಸಾರ್ ) ವೈದ್ಯರು ರೇಷ್ಮಾ ಬೆಹೆರಾ(19) ತಲೆಬುರುಡೆಯಿಂದ ಒಟ್ಟು 77 ಸೂಜಿಗಳನ್ನು ಹೊರತೆಗೆದಿದ್ದಾರೆ.
ಬಾಳಿಂಗಿರ್ ಜಿಲ್ಲೆಯ ರೇಷ್ಮಾ ಅನಾರೋಗ್ಯದಿಂದ ಬಳಲುತ್ತಿದ್ದು, ಮಾಂತ್ರಿಕ ಸಂತೋಷ್ ತೇಜರಾಜ್ ರಾಣಾನನ್ನು ಸಂಪರ್ಕಿಸಿದ್ದಾಳೆ. ಈತ ಆಕೆಯ ತಲೆಗೆ ನಿರಂತರವಾಗಿ 70 ಸೂಜಿಗಳನ್ನು ಚುಚ್ಚಿದ್ದಾನೆ. ಇದರ ಪರಿಣಾಮವಾಗಿ ಆಕೆಗೆ ವಿಪರೀತ ತಲೆನೋವು ಉಂಟಾಗಿ ಕಡೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶುಕ್ರವಾರ ವೈದ್ಯರು ಸಿಟಿ ಸ್ಕ್ಯಾನ್​ ಪರೀಕ್ಷೆ ನಡೆಸಿದ ಬಳಿಕ ಒಂದೂವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ತಲೆಬುರುಡೆಯಲ್ಲಿದ್ದ ಎಲ್ಲ ಸೂಜಿಗಳನ್ನು ಹೊರತೆಗೆಯಲಾಯಿತು. ಮೆದುಳಿಗೆ ಸೂಜಿಗಳು ಚುಚ್ಚಿಕೊಳ್ಳದ ಕಾರಣ ಆಕೆ ಬದುಕುಳಿದಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸರು ಮಾಂತ್ರಿಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಕೇದಾರನಾಥ ಕಾಲ್ನಡಿಗೆ ಮಾರ್ಗದಲ್ಲಿ ಕುಸಿದ ಕಲ್ಲು,ಮಣ್ಣಿನ ದಿಬ್ಬ..ಮೂವರು ಮೃತ್ಯು – 8 ಮಂದಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
