ಶಿವಪುರಿ:ಮೂರು ವರ್ಷದ ಮಗುವಿನ ಕಣ್ಣಿನಿಂದ ಜೀವಂತ ಹುಳುವನ್ನು ತೆಗೆದಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.ಪಾವಾ ಬಸಾಯಿ ಗ್ರಾಮದಲ್ಲಿ ವಾಸಿಸುವ ವಿರೇಂದ್ರ ಎಂಬುವರ ಮಗನಾದ ಕುಲದೀಪ್​ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಕೀಟ ಕಣ್ಣಿಗೆ ಪ್ರವೇಶಿಸಿದೆ. ಈ ಕೀಟವು ಕಣ್ಣಿಗೆ ಪ್ರವೇಶಿಸಿದ ನಂತರ ಮಗು ಹೆಚ್ಚು ನರಳಲಾರಂಭಿಸಿ, ಕಣ್ಣು ಊದಿಕೊಂಡಿತು ಎಂದು ಮಗುವಿನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮಗುವಿಗೆ ತೀವ್ರ ನೋವು ಕಾಣಿಸಿಕೊಂಡಾಗ ಆತನ ಪೋಷಕರು ನೇತ್ರ ವೈದ್ಯರನ್ನು ಕಾಣಲು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ.
ಇದನ್ನೂ ಓದಿ:ಮಹಿಳೆಯ ಗಂಟಲು ಕೊಯ್ದು, ದೇಹದಿಂದ ಕಾಲು ಬೇರ್ಪಡಿಸಿದ ದುರುಳರು..ಮಗುವಿನ ಕುಟುಂಬದವರು ಕಣ್ಣಿನ ವೈದ್ಯ ಗಿರೀಶ್ ಚತುರ್ವೇದಿಗೆ ಮಗುವಿನ ನೋವಿನ ಬಗ್ಗೆ ತಿಳಿಸಿದ್ದು, ವೈದ್ಯರು ತಪಾಸಣೆ ನಡೆಸಿದಾಗ ಮಗುವಿನ ಕಣ್ಣಿನಲ್ಲಿ ಜೀವಂತ ಹುಳು ಪತ್ತೆಯಾಗಿದೆ. ಆ ಬಳಿಕ ವೈದ್ಯರು ಸತತ 15 ನಿಮಿಷಗಳ ಪ್ರಯತ್ನದ ಬಳಿಕ ಮಗುವಿನ ಕಣ್ಣಿನಿಂದ ಕೀಟವನ್ನು ತೆಗೆದಿದ್ದಾರೆ.
ಈ ಕುರಿತು ಮಾತನಾಡಿದ ವೈದ್ಯರು, ತಮ್ಮ ವೈದ್ಯ ವೃತ್ತಿಯಲ್ಲಿ ರೋಗಿಯೊಬ್ಬರ ಕಣ್ಣಿಗೆ ಹುಳು ಬಂದಿರುವುದು ಇದೇ ಮೊದಲು. ಮಗುವಿನ ಕಣ್ಣನ್ನು ಪರೀಕ್ಷಿಸಿದಾಗ ಕಣ್ಣೀರಿನ ನಾಳದ ಬಳಿ ರಂಧ್ರ ಮಾಡಿ ಹುಳು ಕಣ್ಣಿನೊಳಗೆ ಪ್ರವೇಶಿಸಿತ್ತು. ಕೀಟವು ಪದೇ ಪದೇ ಮಗುವಿನ ಕಣ್ಣನ್ನು ಕಚ್ಚಲು ಯತ್ನಿಸುತ್ತಿದ್ದು, ಇದರಿಂದ ಕಣ್ಣಿನಿಂದ ರಕ್ತ ಬರಲಾರಂಭಿಸಿದೆ. ಮಗುವಿನ ಕಣ್ಣಿನಲ್ಲಿರುವ ಹುಳು ತೆಗೆಯಲು ಸಣ್ಣ ಆಪರೇಷನ್ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + five =
Remember me
