ಕೋಯಿಕ್ಕೋಡ್​:ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದ್ದ ಪರಿಣಾಮ ಚಿಕಿತ್ಸೆಗೆಂದು ದಾಖಲಾಗಿದ್ದ 15 ವರ್ಷದ ಬಾಲಕಿಯ ಹೊಟ್ಟೆಯಿಂದ ಬರೋಬ್ಬರಿ ಎರಡು ಕೆಜಿ ಕೂದಲನ್ನು ಕೇರಳದ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರು ಹೊರತೆಗೆದಿದ್ದಾರೆ.
ಪಾಲಕ್ಕಾಡ್​ನ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಫೆ. 8 ರಂದು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಸಿಟಿ ಸ್ಕ್ಯಾನ್‌ ಮಾಡಿದಾಗ ಗಡ್ಡೆ ಇರುವುದು ಪತ್ತೆಯಾಗಿತ್ತು. ನಂತರ ಎಂಡೋಸ್ಕೋಪಿ ನಡೆಸಿದಾಗ ಹೊಟ್ಟೆಯಲ್ಲಿ ಕೂದಲಿನ ರಾಶಿ ಪತ್ತೆಯಾಗಿದೆ.
ಕೋಯಿಕ್ಕೋಡ್​​ ವೈದ್ಯಕೀಯ ಕಾಲೇಜು ಶಸ್ತ್ರಚಿಕಿತ್ಸಾ ವಿಭಾಗದ ಪ್ರೊ. ಡಾ. ವೈ. ಶಹಜಹಾನ್ ನೇತೃತ್ವದಲ್ಲಿ ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಕೂದಲಿನ ರಾಶಿಯನ್ನು ಹೊರ ತೆಗೆಯಲಾಯಿತು. ಹುಡುಗಿಯು ನಿಯಮಿತವಾಗಿ ತನ್ನ ಕೂದಲನ್ನು ಸೇವಿಸಿದ್ದರಿಂದ ಅಷ್ಟೊಂದು ಕೂದಲು ಹೊಟ್ಟೆಯಲ್ಲಿ ಸೇರಿತ್ತು ಎಂದು ತಿಳಿದುಬಂದಿದೆ.
ಕೂದಲು ತಿನ್ನುವ ಸ್ಥಿತಿಗೆ ಏನಂತಾರೆ?ಅಂದಹಾಗೆ ಕೂದಲು ತಿನ್ನುವ ಸ್ಥಿತಿಯನ್ನು ‘ಟ್ರೈಕೋಬೆಜೋರ್’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇದು ಆತಂಕ ಮತ್ತು ಒತ್ತಡದ ಮಕ್ಕಳಲ್ಲಿ ಅಪರೂಪವಾಗಿ ಕಂಡುಬರುತ್ತದೆ. ಸೇವಿಸುವ ಕೂದಲು ಹೊಟ್ಟೆಯಲ್ಲಿರುವ ಆಹಾರದೊಂದಿಗೆ ಸಂಯೋಜನೆಗೊಂಡು ದೈತ್ಯ ಗೆಡ್ಡೆಯನ್ನು ರೂಪಿಸಬಹುದು. ಈ ರೋಗ ಲಕ್ಷಣಗಳು ಯಾವುವೆಂದರೆ, ಆಹಾರದಲ್ಲಿ ಆಸಕ್ತಿಯ ನಷ್ಟ, ರಕ್ತಹೀನತೆ, ಕುಂಠಿತ ಬೆಳವಣಿಗೆ ಮತ್ತು ದೀರ್ಘಕಾಲದ ಆಯಾಸವನ್ನು ಒಳಗೊಂಡಿರುತ್ತದೆ.(ಏಜೆನ್ಸೀಸ್​)
ನಾನೇನಾದ್ರೂ ಅದರ ಬಗ್ಗೆ ಹೇಳಿದ್ರೆ ವಿವಾದ ಆಗ್ಬಿಡುತ್ತೆ! ಪಿವಿ ಸಿಂಧು ರಾಕ್,​ ವಿಜಯ್​ ಫ್ಯಾನ್ಸ್​ ಶಾಕ್​

ರಣವೀರ್​ ಸಿಂಗ್​, ಪೋರ್ನ್​ ಸ್ಟಾರ್​ ಜಾನಿ ಸಿನ್ಸ್​ ಜಾಹೀರಾತು! ಟಿವಿ ಇಂಡಸ್ಟ್ರಿಗೆ ಮಾಡಿದ ಅವಮಾನವೆಂದು ಆಕ್ರೋಶ

ಕರಿಮೆಣಸು ಬೇಡ ಎನ್ನಬೇಡಿ, ಒಮ್ಮೆ ಟ್ರೈ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen + nineteen =
Remember me
