ವಿಜಯವಾಡ:ಆಯಸ್ಕಾಂತಗಳನ್ನು ನುಂಗಿದ ಬಾಲಕನ ಜೀವವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಉಳಿಸಿರುವ ಘಟನೆ ತೆಲಂಗಾಣದ ವಿಜಯವಾಡದಲ್ಲಿ ನಡೆದಿದೆ.ಇದನ್ನೂ ಓದಿ:ಫೇಸ್​​ಬುಕ್ ಮುಖಾಂತರ ಸ್ನೇಹ, ಪ್ರೀತಿ: ಮದುವೆಯಾದ ಮೂರು ತಿಂಗಳಲ್ಲೇ ಟ್ವಿಸ್ಟ್..ಖಮ್ಮಂನ ನಿವಾಸಿಯಾಗಿರುವ ಆರ್ಯ(7) ಆಟವಾಡಲು ಕೆಲವು ವಸ್ತುಗಳನ್ನು ಖರೀದಿಸಿದ್ದನು. ಈ ವೇಳೆ ಅವುಗಳೊಂದಿಗೆ ಆಟವಾಡುತ್ತಿದ್ದಾಗ ಆಟಿಕೆಗಳಲ್ಲಿದ್ದ ಚಿಕ್ಕ ಚಿಕ್ಕ ಆಯಸ್ಕಾಂತ ಚೂರುಗಳನ್ನು ನುಂಗಿದ್ದಾನೆ. ಈ ಚೂರುಗಳು ಆತನ ಕರುಳಿನಲ್ಲಿ ಸಿಲುಕಿಕೊಂಡಿದ್ದರಿಂದ, ಬಾಲಕ ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದು, ಪೋಷಕರು ಭಯದಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರಿಗೆ ಅನುಮಾನ ಬಂದು ತಕ್ಷಣ ಸ್ಕ್ಯಾನಿಂಗ್ ಮಾಡಿ ವರದಿ ನೋಡಿ ಬೆಚ್ಚಿಬಿದ್ದಿದ್ದು ಆತನ ಹೊಟ್ಟೆಯಲ್ಲಿ ಆಯಸ್ಕಾಂತಗಳನ್ನು ಪತ್ತೆ ಹಚ್ಚಿದ್ದಾರೆ. ಕೊನೆಗೆ ಈ ಚೂರುಗಳು ಕರುಳಿನಲ್ಲಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 50 ಆಯಸ್ಕಾಂತ ಚೂರುಗಳನ್ನು ಹೊರತೆಗೆದಿದ್ದು, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತಂದು ಬಾಲಕನನ್ನು ಉಳಿಸಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ವೈದ್ಯರು. ಮಕ್ಕಳಿಗಾಗಿ ಖರೀದಿಸುವ ಆಟಿಕೆಗಳ ವಿಷಯದಲ್ಲಿ ಮುನ್ನೆಚ್ಚರಿಕೆ ತುಂಬಾ ಅಗತ್ಯ. ಮಕ್ಕಳ ಮೇಲೆ ನಿಗಾ ಇಡುವಂತೆಯೂ ಸೂಚಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × five =
Remember me
