ಪಂಜಾಬ್‌:40 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಸತತ ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ತಾವು ತೆಗೆದ ವಸ್ತುಗಳನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಘಟನೆ ಪಂಜಾಬ್‌ನ ಮೊಗಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಯುವ ಕೃಷಿಕರು ಭತ್ತದ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲಿ
ವ್ಯಕ್ತಿಯ ಹೊಟ್ಟೆಯಿಂದ ಇಯರ್‌ಫೋನ್‌, ಬೋಲ್ಟ್‌, ನಟ್ಸ್, ವಾಷರ್‌, ಬೀಗ ಮತ್ತು ಕೀಗಳು ಸೇರಿದಂತೆ ಹಲವಾರು ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಈ ಘಟನೆ ಇದೀಗ ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ.
ವರದಿಗಳ ಪ್ರಕಾರ, ವ್ಯಕ್ತಿ ಕಳೆದ ಎರಡು ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಮೊಗದ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ತೀವ್ರ ಹೊಟ್ಟೆ ನೋವು, ಜ್ವರ ಮತ್ತು ವಾಂತಿಯೇ ಕಾರಣ ಎಂದು ವೈದ್ಯರ ಬಳಿ ದೂರಿದ್ದಾರೆ. ಎಕ್ಸ್-ರೇ ಸ್ಕ್ಯಾನ್ ಮಾಡಿದ ವೈದ್ಯರು ಆತನ ಹೊಟ್ಟೆಯಲ್ಲಿದ್ದ ಹಲವಾರು ವಸ್ತುಗಳನ್ನು ಕಂಡು ಶಾಕ್​ ಆಗಿದ್ದು, ಸತತ ಮೂರು ಗಂಟೆಯ ಶಸ್ತ್ರಚಿಕಿತ್ಸೆ ನಂತರ ಅದನ್ನೆಲ್ಲಾ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಅ.1 ಮತ್ತು 2ರಂದು ಉಡುಪಿಯಲ್ಲಿ ದಸರಾ ಕ್ರೀಡಾಕೂಟ: ಒಂಭತ್ತು ಸ್ಪರ್ಧೆಗಳ ಆಯೋಜನೆ
ಈ ಬಗ್ಗೆ ಮಾತನಾಡಿದ ಮೆಡಿಸಿಟಿ ನಿರ್ದೇಶಕ ಡಾ. ಅಜ್ಮೀರ್ ಕಲ್ರಾ, “ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ. ಈ ವಸ್ತುಗಳು ದೀರ್ಘಕಾಲದವರೆಗೆ ಹೊಟ್ಟೆಯಲ್ಲಿದ್ದ ಕಾರಣ, ರೋಗಿಯ ಸ್ಥಿತಿ ಇನ್ನೂ ಸ್ಥಿರವಾಗಿಲ್ಲ. ವ್ಯಕ್ತಿಯ ಕುಟುಂಬದ ಸದಸ್ಯರು ಅನಾಮಧೇಯತೆಯನ್ನು ಕೋರಿದ್ದಾರೆ. ಹಾಗಾಗಿ ಹೆಚ್ಚು ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ” ಎಂದು ಹೇಳಿದರು.
ಈ ರೀತಿಯ ವಸ್ತುಗಳನ್ನು ಅವರು ಹೇಗೆ ಸೇವಿಸಿದರು ಎಂಬುದು ನಮಗೆ ತಿಳಿದಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಲ್ಲದೇ ತಮ್ಮ ಮಗನಿಗೆ ಮಾನಸಿಕವಾಗಿ ತೊಂದರೆಯಾಗಿದೆ ಎಂದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲ ಇದ್ಯಾ?; ನಟ ಶಿವರಾಜ್​ಕುಮಾರ್​ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
