ನವದೆಹಲಿ:ಎಲ್ಲ ವೈದ್ಯರೂ ಜನರಿಕ್ ಔಷಧವನ್ನು ಬರೆದು ಶಿಫಾರಸು ಮಾಡುವುದು ಕಡ್ಡಾಯ. ತಪ್ಪಿದರೆ ಅಂಥ ವೈದ್ಯರಿಗೆ ದಂಡ ಕೂಡ ಬೀಳಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ಇಂಥದ್ದೊಂದು ಸೂಚನೆಯನ್ನು ನೀಡಿದೆ.
ವೈದ್ಯರು ಜನರಿಕ್ ಔಷಧವನ್ನು ಬರೆಯಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚನೆ ನೀಡುತ್ತಿರುವುದು ಇದೇ ಮೊದಲಲ್ಲದಿದ್ದರೂ ಇದೇ ಪ್ರಥಮ ಬಾರಿಗೆ ದಂಡ ವಿಧಿಸಲಿಕ್ಕೂ ಮುಂದಾಗಿದೆ.
ಇದನ್ನೂ ಓದಿ:ಪ್ರಯಾಣದಲ್ಲಿದ್ದ ತಮಿಳುನಾಡು ಸಚಿವರಿಗೆ ಹಠಾತ್ ಎದೆನೋವು; ನಾರಾಯಣ ಹೆಲ್ತ್​ ಸಿಟಿಗೆ ಕರೆ ತರುತ್ತಿರುವ ಬೆಂಬಲಿಗರು
ರಾಷ್ಟ್ರೀಯ ವೈದ್ಯಕೀಯ ಆಯೋಗದ ‘ರೆಗ್ಯುಲೇಷನ್ಸ್ ರಿಲೇಟಿಂಗ್ ಟು ಪ್ರೊಫೆಷನಲ್ ಕಂಡಕ್ಟ್ ಆಫ್ ರಿಜಿಸ್ಟರ್ಡ್ ಮೆಡಿಕಲ್ ಪ್ರ್ಯಾಕ್ಟಿಷಿನರ್ಸ್​’ ಪ್ರಕಾರ ವೈದ್ಯರು ಜನರಿಕ್ ಔಷಧವನ್ನು ಬರೆದುಕೊಡುವುದಲ್ಲದೆ, ಬ್ರ್ಯಾಂಡೆಡ್ ಜನರಿಕ್ ಔಷಧವನ್ನು ಬರೆಯುವುದನ್ನು ತಪ್ಪಿಸಬೇಕು ಎಂದೂ ಸೂಚನೆ ನೀಡಲಾಗಿದೆ.ಆಯೋಗದಿಂದ ಆ. 2ರಂದು ಈ ಸೂಚನೆ ಹೊರಬಿದ್ದಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಭಾರತದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಬ್ರ್ಯಾಂಡೆಡ್ ಔಷಧಗಳಿಗಿಂತ ಜನರಿಕ್ ಔಷಧ ಶೇ. 30ರಿಂದ 80ರಷ್ಟು ಕಡಿಮೆ ಬೆಲೆಯದ್ದಾಗಿದ್ದು, ವೈದ್ಯರು ಅಂಥ ಔಷಧಗಳನ್ನೇ ರೋಗಿಗಳಿಗೆ ಸೂಚಿಸಬೇಕು ಎಂದು ಆಯೋಗ ಹೇಳಿದೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ವೈದ್ಯರು ಜನರಿಕ್ ಔಷಧವನ್ನು ಬರೆಯದಿದ್ದಲ್ಲಿ ಅವರಿಗೆ ದಂಡ ವಿಧಿಸಲಾಗುವುದು. ಅದಾಗ್ಯೂ ಪದೇಪದೆ ಉಲ್ಲಂಘಿಸಿದರೆ ಅಂಥವರ ಪರವಾನಗಿಯನ್ನು ಅಮಾನತಿನಲ್ಲಿ ಇಡಲಾಗುವುದು ಎಂದೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.
ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್​: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 8 =
Remember me
