ನವದೆಹಲಿ:ಕರೊನಾ ಮೂರನೇ ಅಲೆ ಇನ್ನು ಕೆಲವೇ ದಿನಗಳಲ್ಲಿ ಭಾರತಕ್ಕೆ ಪ್ರವೇಶಿಸಲಿದೆ, ಇದು ಮಕ್ಕಳನ್ನು ಹೆಚ್ಚು ಬಾಧಿಸಲಿದೆ, ಎರಡನೇ ಅಲೆಗಿಂತಲೂ ಹೆಚ್ಚು ತೀವ್ರತೆ ಹೊಂದಿರಲಿದೆ ಎಂಬೆಲ್ಲ ವಿಷಯಗಳು ಈಗಾಗಲೇ ಹರಿದಾಡುತ್ತಿದ್ದು, ಜನರು ಚಿಂತೆಗೀಡಾಗುವಂತೆ ಮಾಡಿದೆ. ಈ ಮಧ್ಯೆ ಕರೊನಾ ಮೂರನೇ ಅಲೆಯ ಸಂಭಾವ್ಯ ಪರಿಣಾಮಗಳ ಕುರಿತು ಅಧ್ಯಯನ ನಡೆದಿದ್ದು, ಆ ಕುರಿತು ಮಾಹಿತಿಯೊಂದು ಹೊರಬಿದ್ದಿದೆ.
‘ಪ್ಲಾಸಿಬಿಲಿಟಿ ಆಫ್​ ಎ ಥರ್ಡ್​ ವೇವ್​ ಆಫ್​ ಕೋವಿಡ್​-19 ಇನ್​ ಇಂಡಿಯಾ: ಎ ಮ್ಯಾಥ್​ಮೆಟಿಕಲ್​ ಮಾಡೆಲಿಂಗ್ ಬೇಸ್ಡ್​ ಅನಾಲಿಸಿಸ್​’ ಎಂಬ ಶೀರ್ಷಿಕೆ ಮೇರೆಗೆ ಈ ಅಧ್ಯಯನ ನಡೆದಿದೆ. ಇದು ಭಾರತದಲ್ಲಿನ ಕರೊನಾ ಮೂರನೇ ಅಲೆಯ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದೆ.
ಈ ಅಧ್ಯಯನದ ಪ್ರಕಾರ ಕರೊನಾ ಮೂರನೇ ಅಲೆ ಎರಡನೇ ಅಲೆಗಿಂತ ತೀವ್ರವಾಗಿ ಬಾಧಿಸುವ ಸಾಧ್ಯತೆ ಕಡಿಮೆ. ಈಗಾಗಲೇ ಬಹಳಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಎರಡನೇ ಅಲೆ ಉತ್ತುಂಗದಲ್ಲಿ ಇರುವಾಗಲೇ ದೇಶದ ಶೇ. 40 ಜನರು ಎರಡೂ ಡೋಸ್​ ಲಸಿಕೆಯನ್ನು ಪಡೆದಿದ್ದಾರೆ. ಅಲ್ಲದೆ ಲಸಿಕೆ ಸೋಂಕಿನ ಪ್ರಮಾಣವನ್ನು ಶೇ. 60 ತಗ್ಗಿಸಲಿದೆ. ಹೀಗಾಗಿ ಮೂರನೇ ಅಲೆ ಅಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಈ ಅಧ್ಯಯನ ತಿಳಿಸಿದೆ. ಉಳಿದಂತೆ ಹಲವು ವಿಷಯಗಳನ್ನಾಧರಿಸಿ ಈ ಅಧ್ಯಯನ ನಡೆದಿದ್ದು, ಅದರ ಫಲಿತಾಂಶಗಳು ಇಂಡಿಯನ್ ಜರ್ನಲ್ ಆಫ್​ ಮೆಡಿಕಲ್​ ರಿಸರ್ಚ್​ನಲ್ಲಿ ಪ್ರಕಟವಾಗಿವೆ. (ಏಜೆನ್ಸೀಸ್)
ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

ಹೆದರಿ ಓಡಿ ಹೋಗಿದ್ದವರೆಲ್ಲ ಈಕೆಯನ್ನು ನೋಡಿ ಲಸಿಕೆ ಪಡೆದ್ರು; ಊರಿಗೇ ಮಾದರಿ 96ರ ಈ ಆಧಾರ್ ಕುಮಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
