ಕಾಶಿಯ ವಿಶ್ವನಾಥ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಅಧ್ಯಾತ್ಮ ಸಾಧನೆಯ ಹಸಿವಿನಿಂದ ಬರುವವರಿಗೆ ಕಾಶಿ ಪ್ರಶಸ್ತವಾದ ಸ್ಥಳ. ಅಷ್ಟಕ್ಕೂ, ಕಾಶಿ ವಿಶ್ವನಾಥನ ಮೂಲಮಂದಿರವು ಜ್ಞಾನವಾಪಿ ಮಸೀದಿಯ ಸ್ಥಳದಲ್ಲೇ ಇದ್ದದ್ದು ಎಂದು ಇತಿಹಾಸದ ಹಲವು ದಾಖಲೆಗಳು ಸ್ಪಷ್ಟವಾಗಿ ಹೇಳುತ್ತವೆ. 1669ರಲ್ಲಿ ಔರಂಗಜೇಬನು ಇದನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿಸಿ ‘ಜ್ಞಾನವಾಪಿ ಮಸೀದಿ’ ಎಂದು ಹೆಸರಿಟ್ಟ. ಆದರೆ, ಕಾಶಿ ಮೇಲೆ ದಾಳಿ ಅದಕ್ಕಿಂತ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಾಶಿಯ ಮೇಲೆ ಶಕವರ್ಷ 1194ರಲ್ಲಿ ಮೊಹಮ್ಮದ್ ಘೊರಿಯ ಸೇನಾನಾಯಕ ಕುತುಬ್-ಉದ್-ದೀನ್ ಐಬಕ್ ಮೊದಲ ಬಾರಿಗೆ ದಾಳಿ ಮಾಡಿದ ಎಂದು ಇತಿಹಾಸ ಹೇಳುತ್ತದೆ. ಈ ದಾಳಿಯನ್ನು ಎದುರಿಸಿ, ಕಾಶಿ ಮತ್ತೆ ಮೈಕೊಡವಿ ನಿಂತದ್ದೂ ಇದೆ. ಕುತುಬ್-ಉದ್-ದೀನ್ ಐಬಕ್ ಎಸಗಿದ ದಾಳಿಯ ಬಳಿಕ ಕೆಲವೇ ವರ್ಷಗಳಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬ ಮಂದಿರವನ್ನು ಮರುನಿರ್ವಣ ಮಾಡಿದ.
ಅದಾದ 200 ವರ್ಷಗಳ ಕಾಲ ಅಬಾಧಿತವಾಗಿ ಜನರಿಗೆ ಆಧ್ಯಾತ್ಮಿಕ ಅನುಭೂತಿ ನೀಡುತ್ತಿದ್ದ ವಿಶ್ವನಾಥ ಮತ್ತೆ 15ನೇ ಶತಮಾನದಲ್ಲಿ ಇಬ್ರಾಹಿಂ ಲೋಧಿಯ ಆಕ್ರಮಣಕ್ಕೆ ತುತ್ತಾದ. ಮಂದಿರವನ್ನು ಮತ್ತೆ ಕೆಡವಲಾಯ್ತು. ಅನೇಕ ದಶಕಗಳ ನಂತರ ರಾಜಾ ಮಾನ್​ಸಿಂಗರು ಇದನ್ನು ಮರುನಿರ್ವಣ ಮಾಡಿದರು. ಆದರೆ, ಔರಂಗಜೇಬ ಮಂದಿರವನ್ನು ಕೆಡವಿದ್ದು ಮಾತ್ರವಲ್ಲ, ಅಲ್ಲಿಯೇ ಮಸೀದಿಯನ್ನು ನಿರ್ವಿುಸಿದ. ಅದೇ ವಿಶ್ವನಾಥ ಮಂದಿರದ ಅವಶೇಷಗಳನ್ನು ಬಳಸಿ ಕಟ್ಟಿದ ಈ ಮಸೀದಿಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುವುದು ವರ್ಷಕ್ಕೊಮ್ಮೆ. ಮುಂದೆ ಅಹಲ್ಯಾಬಾಯಿ ಹೋಳ್ಕರ್ ಮಸೀದಿಯ ಪಕ್ಕದಲ್ಲಿ ಸುಂದರವಾದ ಮಂದಿರವೊಂದನ್ನು ನಿರ್ವಿುಸಿ ಅದನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಮಂದಿರದ ಭಾಗವಾದ ನಂದಿ
ಈ ಹಿಂದೆ ಮಂದಿರದ ಭಾಗವಾಗಿದ್ದ ನಂದಿ ಇಷ್ಟು ದಿನ ಮಸೀದಿಯ ಭಾಗವಾಗಿತ್ತು. ಕಾಶಿ ಕಾರಿಡಾರ್ ಯೋಜನೆಯ ಕಾರಣದಿಂದಾಗಿ ನಂದಿ ಮತ್ತೆ ಮಂದಿರದ ಭಾಗವಾಗಿದೆ. ಯಾತ್ರಿಕರು ಈಗ ವಿಶ್ವನಾಥನ ದರ್ಶನದ ನಂತರ ನಂದಿಯ ದರ್ಶನ ತಪ್ಪದೇ ಪಡೆಯುತ್ತಾರೆ. ಆ ನಂದಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ ಮಂದಿರದೆಡೆಗೆ ತಿರುಗಿರದೇ ಜ್ಞಾನವಾಪಿ ಮಸೀದಿಯೆಡೆಗೆ ಮುಖಮಾಡಿ ನಿಂತಿರುವುದು ಆಕ್ರಮಣದ ಕಥೆಯನ್ನು ವಿವರಿಸುತ್ತದೆ.
ವಿವಾದ ಏಕೆ?
ಮಹಾರಾಜ ವಿಕ್ರಮಾದಿತ್ಯ ನಿರ್ವಿುಸಿದ್ದ ಕಾಶಿ ವಿಶ್ವನಾಥನ ಪುರಾತನ ಮಂದಿರದ ಒಂದು ಭಾಗವನ್ನು ಮೊಘಲರ ದೊರೆ ಔರಂಗಜೇಬ್ 17ನೇ ಶತಮಾನದಲ್ಲಿ ಧ್ವಂಸಗೊಳಿಸಿ, ಜ್ಞಾನವಾಪಿ ಮಸೀದಿ ಕಟ್ಟಿಸಿದ. ಮಸೀದಿ ಆವರಣದ ಪಶ್ಚಿಮದ ಗೋಡೆಯಲ್ಲಿ ಶೃಂಗಾರ ಗೌರಿ ವಿಗ್ರಹ ಸೇರಿ ಅನೇಕ ದೇವತೆಗಳ ಪ್ರತಿಮೆಗಳಿವೆ. ಅಲ್ಲಿನ ಗೋಚರ ಮತ್ತು ಅಗೋಚರವಾಗಿರುವ ದೇವರಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ರಾಖಿ ಸಿಂಗ್, ಲಕ್ಷ್ಮಿದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್ ಕಳೆದ ವರ್ಷ ಏಪ್ರಿಲ್ 18ಕ್ಕೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಮಸೀದಿಯಲ್ಲೇನೂ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲ, ವರ್ಷಕ್ಕೊಮ್ಮೆ ನಮಾಜ್​ಗಾಗಿ ತೆರೆಯಲಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಾದಿತ ಮಸೀದಿಯ ಸಮೀಕ್ಷೆ ನಡೆಸುವಂತೆ ಕಳೆದ ಏ.26ಕ್ಕೆ ಕೋರ್ಟ್ ಆದೇಶಿಸಿತ್ತು. ಮೇ 10ರೊಳಗೆ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ನೇತೃತ್ವದ ತಂಡಕ್ಕೆ ಸೂಚಿಸಿತ್ತು. ಇದರಂತೆ ಮೇ 6 ಮತ್ತು 7ರಂದು ಸರ್ವೆಗೆ ಹೊರಟ ತಂಡಕ್ಕೆ ಅಡ್ಡಿ ಎದುರಾಯಿತು. ಮಸೀದಿಯಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದೆ ಪ್ರತಿಭಟನೆ ನಡೆಸಲಾಯಿತು. ಇದರಿಂದ ಕೆಲವು ಕಾಲ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. 54 ಜನರ ಸರ್ವೆ ತಂಡ ಸಮೀಕ್ಷೆ ನಡೆಸಲು ಸಾಧ್ಯವಾಗದ ಸ್ಥಿತಿಯನ್ನು ಕಳೆದ ಗುರುವಾರ (ಮೇ 12) ವಿಚಾರಣೆ ವೇಳೆ ಕೋರ್ಟ್​ಗೆ ನಿವೇದಿಸಿಕೊಂಡಿತ್ತು. ಜ್ಞಾನವಾಪಿ ಮಸೀದಿ ಅವರಣದಲ್ಲಿರುವ ದೇವರ ಪೂಜೆ ಅವಕಾಶಕ್ಕೆ ಕೋರಿ 1991ರಲ್ಲೇ ಸ್ಥಳೀಯ ಕೋರ್ಟ್​ಗೆ ಅರ್ಚಕರೊಬ್ಬರು ಅರ್ಜಿ ಸಲ್ಲಿಸಿದ್ದರು. ಆದರೆ, 1991ರ ವಿಶೇಷ ಕಾಯ್ದೆ ಅನ್ವಯ ಈ ಅರ್ಜಿಯನ್ನು ತಳ್ಳಿಹಾಕಲಾಗಿತ್ತು.
ಹಿಂದಿನ ಕಾಲದಲ್ಲಿ ಆಕ್ರಮಿಸಿಕೊಂಡಿರುವ ಯಾವುದೇ ಆರಾಧನಾಲಯ ಗಳನ್ನು ಅವರವರಿಗೆ ಬಿಟ್ಟು ಕೊಡುವುದು ಉತ್ತಮ. ದೇವಾಲಯ ಗಳನ್ನು ಖರೀದಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರೆ ಆಕ್ಷೇಪವಿಲ್ಲ. ಆದರೆ ದೇವಸ್ಥಾನ ಅತಿಕ್ರಮಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರೆ ಮರುಪರಿವರ್ತನೆ ಅನಿವಾರ್ಯ.
| ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಪೇಜಾವರ ಮಠ
ಹಿಂದಿನ ಕಾಲದಲ್ಲಿ ಆಕ್ರಮಿಸಿಕೊಂಡಿರುವ ಯಾವುದೇ ಆರಾಧನಾಲಯ ಗಳನ್ನು ಅವರವರಿಗೆ ಬಿಟ್ಟು ಕೊಡುವುದು ಉತ್ತಮ. ದೇವಾಲಯ ಗಳನ್ನು ಖರೀದಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರೆ ಆಕ್ಷೇಪವಿಲ್ಲ. ಆದರೆ ದೇವಸ್ಥಾನ ಅತಿಕ್ರಮಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರೆ ಮರುಪರಿವರ್ತನೆ ಅನಿವಾರ್ಯ.
| ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಪೇಜಾವರ ಮಠ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರು ವುದು ಸಂತಸ ತಂದಿದೆ. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಉತ್ಖನನ ನಡೆಸಿದರೂ ಅಲ್ಲೂ ಮಹಾದೇವ ಸಿಗುತ್ತಾನೆ. ನಾವು ಕಾಶಿಯ ವಿಶ್ವನಾಥನ ದರ್ಶನಕ್ಕೆ ಹೋದಾಗಲೆಲ್ಲ ಶೃಂಗಾರಗೌರಿಗೆ ನಮಿಸಲು ಹೋಗುತ್ತಿದ್ದೆವು. ಆದರೆ, ಪ್ರತಿಭಟನೆ ವ್ಯಕ್ತವಾಗುತ್ತಿತ್ತು. ಅನಗತ್ಯ ವಿವಾದ ಉಂಟು ಮಾಡುತ್ತಿರುವವರಿಗೆ ಮಸೀದಿ ಆವರಣದಲ್ಲಿ ದೊರಕಿರುವ ಶಿವಲಿಂಗ ಉತ್ತರವಾಗಿದೆ.
| ಕೇಶವ ಪ್ರಸಾದ್ ಮೌರ್ಯ
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ
ಕಾಶಿ ಕಾರಿಡಾರ್​ಗೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯಲ್ಲಿ ನಮಾಜ್ ಮಾಡುವುದಕ್ಕೆ ಮುನ್ನ ಕೈಕಾಲು ತೊಳೆಯಲು ಬಳಸುತ್ತಿದ್ದ ಕಲ್ಯಾಣಿಯಿದ್ದ ಸ್ಥಳದಲ್ಲಿ ಈಗ ಶಿವಲಿಂಗ ಪತ್ತೆಯಾಗಿರುವುದರಿಂದ, ಹಿಂದೂ ಶ್ರದ್ಧಾಳುಗಳ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಈಗಿರುವ ಮಸೀದಿ ಸ್ಥಳದಲ್ಲಿ ಹಿಂದೂ ಮಂದಿರಕ್ಕೆ ಸಂಬಂಧಿಸಿದ ಮೂರ್ತಿಗಳಿದ್ದವು ಎಂಬುದು ಇದರಿಂದ ದೃಢವಾಗುತ್ತದೆ. ಕೇವಲ ವಾರಾಣಸಿಯಲ್ಲ, ದೇಶದ ಅನೇಕ ಮಸೀದಿಗಳಿರುವ ಸ್ಥಳಗಳಲ್ಲಿ ಹಿಂದೂ ಮಂದಿರಗಳ ಕುರುಹುಗಳಿರುವುದು ನಿತ್ಯಸತ್ಯ. ಆದರೆ, ಕೆಲ ಮಂದಿಗೆ ಈ ಸತ್ಯ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ, ಜ್ಞಾನವಾಪಿ ಮಸೀದಿಯ ಹಿಂಭಾಗದ ಗೋಡೆಯನ್ನೇ ನೋಡಿ. ಅದು ಹಿಂದೂ ಮಂದಿರದ ಮಾದರಿಯಲ್ಲೇ ನಿರ್ವಣಗೊಂಡಿರುವುದು ಸ್ಪಷ್ಟವಾಗುತ್ತದೆ. ಮಸೀದಿ ಸ್ಥಳದಲ್ಲಿ ಶೃಂಗಾರ ಗೌರಿ ಮಂದಿರವಿದ್ದು, ದೀಪಾವಳಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿರುವುದು ಗೌಪ್ಯ ವಿಚಾರವೇನಲ್ಲ. ಇನ್ನಾದರೂ ಮುಸ್ಲಿಮರು ಸ್ವಯಂಪ್ರೇರಿತರಾಗಿ ಈ ಸ್ಥಳವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು.
| ಡಾ. ಬಸವಪ್ರಭು ಜಿರಲಿ ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥರು, ಬನಾರಸ್ ಹಿಂದೂ ಯುನಿವರ್ಸಿಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fifteen =
Remember me
