ನವದೆಹಲಿ:ಮೈಕ್ರೋಬ್ಲಾಗಿಂಗ್ ವೇದಿಕೆ ಆಗಿರುವ ಟ್ವಿಟರ್​ಗೆ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಮಾಲೀಕತ್ವ ಹೊಂದಿದ ಬೆನ್ನಿಗೇ ನಟಿ ಕಂಗನಾ ರಣಾವತ್​ ಅವರಲ್ಲಿ ಒಂದು ಆಶಾಭಾವನೆ ಮೂಡಿದೆ. ಈ ಕುರಿತು ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.
ಎಡ-ಬಲಗಳ ಸಂಘರ್ಷ, ಬಿಜೆಪಿ ಪರ ಬ್ಯಾಟಿಂಗ್ ಮಾತ್ರವಲ್ಲದೆ, ಆಗಾಗ ಟ್ವೀಟ್​ನಿಂದಾಗಿ ವಿವಾದಕ್ಕೆ ಒಳಗಾಗುತ್ತಿದ್ದ ನಟಿ ಕಂಗನಾ ರಣಾವತ್​ ಮೇಲೆ ಅದೇ ಕಾರಣಕ್ಕೆ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಇವೆಲ್ಲದರ ಹಿನ್ನೆಲೆಯಲ್ಲಿ ಕಳೆದ ವರ್ಷ ಕಂಗನಾ ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿತ್ತು.
ಆದರೆ ಇದೀಗ ಎಲಾನ್ ಮಸ್ಕ್​ ಟ್ವಿಟರ್​ ಮಾಲೀಕತ್ವ ಹೊಂದುವ ಮೂಲಕ ಕಂಗನಾಗೆ ಖಾತೆ ಮರಳಿ ಸಿಗುವ ಭರವಸೆ ಮೂಡಿದಂತಿದೆ. ಅಲ್ಲದೆ ಕಂಗನಾ ಟ್ವಿಟರ್ ಖಾತೆ ರಿಸ್ಟೋರ್ ಮಾಡಿ ಕೊಡುವಂತೆ ಅಭಿಮಾನಿಯೊಬ್ಬರು ಎಲಾನ್​ ಮಸ್ಕ್​ಗೆ ಟ್ವಿಟರ್​​ನಲ್ಲಿ ಮನವಿ ಮಾಡಿಕೊಂಡಿರುವುದನ್ನು ಕಂಗನಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಆಕೆ ಮಸ್ಕ್​ ಟ್ವಿಟರ್ ಮಾಲೀಕತ್ವ ಹೊಂದಿದ ಸುದ್ದಿಯ ತುಣುಕನ್ನೂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕಂಗನಾ ಟ್ವಿಟರ್​ಗೆ ಮರಳುವ ಸಾಧ್ಯತೆಗಳು ಗೋಚರಿಸಿವೆ.
‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
