ಮುಂಬೈ:ದೇಶದ ನಂ. 1 ಶ್ರೀಮಂತ ಮುಕೇಶ್​ ಅಂಬಾನಿ ಅವರ ಪತ್ನಿ ಹಾಗೂ ರಿಲಯನ್ಸ್ ಫೌಂಡೇಷನ್​ ಅಧ್ಯಕ್ಷೆ ನೀತಾ ಅಂಬಾನಿ ಅವರು ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ತಮ್ಮ ಐಷಾರಾಮಿ ಜೀವನಶೈಲಿಯಿಂದಲೂ ನೀತಾ ಅಂಬಾನಿ ಖ್ಯಾತಿಯನ್ನು ಪಡೆದಿದ್ದಾರೆ.
ವಿಶ್ವದ ಅತ್ಯಂತ ದುಬಾರಿ ಸೀರೆಯಿಂದ ಹಿಡಿದು 3 ಲಕ್ಷ ರೂ. ಮೌಲ್ಯದ ಟೀ ಕಪ್​ವರೆಗೂ ಅನೇಕ ಐಷಾರಾಮಿ ವಸ್ತುಗಳನ್ನು​ ನೀತಾ ಅಂಬಾನಿ ಹೊಂದಿದ್ದಾರೆ. ಇದೀಗ ಹಳೆಯ ಸುದ್ದಿಯೊಂದು ಮತ್ತೆ ವೈರಲ್​ ಆಗಿದೆ. ಅದೇನೆಂದರೆ, ನೀತಾ ಅಂಬಾನಿ ಅವರು ವಿಶ್ವದ ದುಬಾರಿ ಫೋನ್,​ ಫಾಲ್ಕನ್​ ಸೂಪರ್​ನೋವಾ ಐಫೋನ್​ 6 ಪಿಂಕ್​ ಡೈಮಂಡ್ ಒಡತಿಯಾಗಿದ್ದಾರೆ​ ಎಂದು ಹೇಳಲಾಗುತ್ತಿದೆ.
ಹಲವಾರು ದಿವಸಗಳಿಂದ ಅನೇಕ ಮಾಧ್ಯಮಗಳಲ್ಲಿ ಈ ವಿಚಾರ ಬಹಳ ಸುದ್ದಿಯಾಗುತ್ತಲೇ ಇದೆ. ಅಂದರೆ, ಈ ಫಾಲ್ಕನ್​ ಸೂಪರ್​ನೋವಾ ಐಫೋನ್​ 6 ಪಿಂಕ್​ ಡೈಮಂಡ್ ಫೋನ್​ ವಿಶ್ವದ ಅತಿ ದುಬಾರಿ ಫೋನ್​ ಎಂದೇ ಹೇಳಲಾಗಿದೆ. ಇದರ ಬೆಲೆ 48.5 ಮಿಲಿಯನ್​ ಡಾಲರ್ಸ್​. ಭಾರತೀಯ ಕರೆನ್ಸಿ ಪ್ರಕಾರ 396 ಕೋಟಿ ರೂಪಾಯಿ.
ಇದನ್ನೂ ಓದಿ:ದೇವರು ನನಗೆ ಎಲ್ಲವನ್ನೂ ಕರುಣಿಸಿದ್ದಾನೆ: ಗೃಹಲಕ್ಷಿ ಯೋಜನೆ ಹಣ ತಿರಸ್ಕರಿಸಿ ಸ್ವಾಭಿಮಾನ ಮೆರೆದ ಅಜ್ಜಿ!
ಆದರೆ, ಆಗಾಗ ವೈರಲ್​ ಆಗುತ್ತಿರುವ ಈ ಸ್ಟೋರಿ ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಡೈಮಂಡ್​ ಇರುವ ಯಾವುದೇ ದುಬಾರಿ ಫೋನ್​ ಮತ್ತು ನೂರಾರು ಕೋಟಿ ರೂ. ಮೌಲ್ಯದ ಮೊಬೈಲ್​ ಫೋನ್ ಅನ್ನು ನೀತಾ ಅಂಬಾನಿ ಅವರು ಬಳಸುತ್ತಿಲ್ಲ. ನೀತಾ ಅವರ ಫೋನ್​ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.
ನೀತಾ ಅಂಬಾನಿ ಅವರು ಯಾವ ಫೋನ್ ಬಳಸುತ್ತಾರೆ ಎಂಬುದು ದೃಢಪಟ್ಟಿಲ್ಲವಾದರೂ, ಅದು ವಜ್ರದಿಂದ ಕೂಡಿದ ಐಫೋನ್ ಅಂತೂ ಅಲ್ಲ ಎಂದು ಪರಿಶೀಲಿಸಲಾಗಿದೆ. ರಿಲಯನ್ಸ್‌ನ ಮೂಲಗಳು ಇಂಡಿಯಾ ಟುಡೆ ಟೆಕ್ ತಂಡಕ್ಕೆ ಮಾಹಿತಿ ನೀಡಿದ್ದು, ನೀತಾ ಅಂಬಾನಿ ಫಾಲ್ಕನ್ ಸೂಪರ್‌ನೋವಾ ಐಫೋನ್ 6 ಪಿಂಕ್ ಡೈಮಂಡ್ ಅನ್ನು ಹೊಂದಿಲ್ಲ ಎಂದು ದೃಢಪಡಿಸಿದೆ.
ಫಾಲ್ಕನ್ ಸೂಪರ್ನೋವಾ ಕಂಪನಿ ವಿಶ್ವದ ಅತ್ಯಂತ ದುಬಾರಿ ಫೋನ್ ರಚಿಸಲು ಐಫೋನ್ 6 ಅನ್ನು ಕಸ್ಟಮೈಸ್ ಮಾಡಿದೆ. ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ 24-ಕ್ಯಾರೆಟ್ ಚಿನ್ನದ ಲೇಪಿತ ಐಫೋನ್ 6 ಆಗಿದ್ದು, ಹಿಂಭಾಗದಲ್ಲಿ ಬೃಹತ್ ಗುಲಾಬಿ ವಜ್ರವನ್ನು ಅಳವಡಿಸಲಾಗಿದೆ. ಇದು ಮಾತ್ರವಲ್ಲದೆ ಫೋನ್ ಪ್ಲಾಟಿನಮ್​ನಿಂದ ಲೇಪಿತವಾಗಿದೆ. ಇದರ ಬೆಲೆ 48.5 ಮಿಲಿಯನ್‌ ಡಾಲರ್​ ತೆಗೆದುಕೊಳ್ಳುತ್ತದೆ.
ನೀತಾ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಫೋನ್ ಅನ್ನು ಹೊಂದಿಲ್ಲವಾದರೂ, ಅವರು ವಿಶ್ವದ ಅತ್ಯಂತ ದುಬಾರಿ ಸೀರೆ (ರೂ. 40 ಲಕ್ಷ) ಹೊಂದಿದ್ದಾರೆ ಮತ್ತು ವಿಶ್ವದ ಅತ್ಯಂತ ದುಬಾರಿ ನೆಕ್ಲೇಸ್ ಅನ್ನು (ರೂ. 450 ಕೋಟಿ) ಖರೀದಿಸಿದ್ದಾರೆ.(ಏಜೆನ್ಸೀಸ್​)
VIDEO | ಲಾಲು ಪ್ರಸಾದ್ ಯಾದವ್ ಮನೆಯಲ್ಲಿ ಭಾನುವಾರದ ಬಾಡೂಟ ತಯಾರಿಸಿದ ರಾಹುಲ್ ಗಾಂಧಿ!

ಕಿಡ್ನಿಸ್ಟೋನ್​ ಆಪರೇಷನ್​ ಬಳಿಕ ಕಿಡ್ನಿಯೇ ನಾಪತ್ತೆ: ವೈದ್ಯರ ವಿರುದ್ಧ ದೂರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 1 =
Remember me
