ನವದೆಹಲಿ:ದೇಶದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯಿಸಲಿದೆಯೇ ಎಂಬ ಪ್ರಶ್ನೆಯೊಂದು ಮೂಡಿದ್ದು, ರಾಜಕೀಯ ಆಸಕ್ತರು ಈ ಬಗ್ಗೆ ಕುತೂಹಲವನ್ನು ತಾಳಿದ್ದಾರೆ. ಏಕೆಂದರೆ ಚುನಾವಣಾ ತಂತ್ರಗಾರ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್​ ಇಂಥದ್ದೊಂದು ಕೌತುಕ ಉಂಟಾಲು ಕಾರಣವಾಗಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್​ ಪಕ್ಷಕ್ಕೆ ಚುನಾವಣಾ ತಂತ್ರಗಳ ಪ್ರಾತ್ಯಕ್ಷಿಕೆ ನೀಡಿದ್ದ ವೇಳೆ ಸೋನಿಯಾ ಗಾಂಧಿ ಜತೆ ನಡೆದ ಮಾತುಕತೆ ಬಳಿಕ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಲ್ಲು ಹಬ್ಬಿತ್ತು. ಹೆಚ್ಚೂಕಡಿಮೆ ಹತ್ತು ದಿನಗಳ ಇದು ರಾಜಕೀಯ ವಲಯದಲ್ಲಿ ಕೌತುಕ ಕೆರಳಿಸಿತ್ತು. ಆದರೆ ಬಳಿಕ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ ಆಫರ್​ ನಿರಾಕರಿಸಿದ್ದಾಗಿ ಹೇಳಿದ ಬಳಿಕ ಈ ಕುತೂಹಲ ತಣಿದಿತ್ತು.
ಇದೀಗ ಪ್ರಶಾಂತ್ ಕಿಶೋರ್ ರಾಜಕೀಯ ನಡೆ ಮತ್ತೆ ಕುತೂಹಲ ಕೆರಳಿಸಿದೆ. ಅವರು ಹೊಸದೊಂದು ರಾಜಕೀಯ ಪಕ್ಷ ಕಟ್ಟಲಿದ್ದಾರಾ ಎಂಬ ಕೌತುಕ ಉಂಟಾಗಿದೆ. ಅವರ ಒಂದು ಟ್ವೀಟ್ ಇಂಥ ಬೆಳವಣಿಗೆಗಳಿಗೆ ಕಾರಣವಾಗಿದೆ.
ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳುವ ಮತ್ತು ಜನಪರ ನೀತಿಯನ್ನು ರೂಪಿಸಲು ಸಹಾಯ ಮಾಡುವ ನನ್ನ ಅನ್ವೇಷಣೆಯು 10 ವರ್ಷಗಳಲ್ಲಿ ಬಹಳಷ್ಟು ಏಳು-ಬೀಳುಗಳಿಗೆ ಕಾರಣವಾಯಿತು. ಒಮ್ಮೆ ಹಿಂದಿರುಗಿ ನೋಡಿದರೆ ಇದು ರಿಯಲ್ ಮಾಸ್ಟರ್ಸ್​ ಆದ ಜನರಿಗೆ ಉತ್ತಮ ಆಡಳಿತದ ಹಾದಿ ಒದಗಿಸಲು, ಜನರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಅವರ ಬಳಿಗೆ ಹೋಗಲು ಸರಿಯಾದ ಸಮಯ ಎಂದು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಹೊಸದೊಂದು ಪಕ್ಷ ಕಟ್ಟಿಲಿದ್ದಾರಾ ಅಥವಾ ಇನ್ಯಾವುದೇ ಪಕ್ಷವನ್ನು ಸೇರಲಿದ್ದಾರಾ ಎಂಬ ಕುತೂಹಲ ರಾಜಕೀಯಾಸಕ್ತ ಹಲವರಲ್ಲಿ ಉಂಟಾಗಿದೆ.
My quest to be a meaningful participant in democracy & help shape pro-people policy led to a 10yr rollercoaster ride!As I turn the page, time to go to the Real Masters, THE PEOPLE,to better understand the issues & the path to “जन सुराज”-Peoples Good Governanceशुरुआत#बिहारसे— Prashant Kishor (@PrashantKishor)May 2, 2022
My quest to be a meaningful participant in democracy & help shape pro-people policy led to a 10yr rollercoaster ride!As I turn the page, time to go to the Real Masters, THE PEOPLE,to better understand the issues & the path to “जन सुराज”-Peoples Good Governanceशुरुआत#बिहारसे
ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಯಾರಿಗೂ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + two =
Remember me
