| ರಾಘವ ಶರ್ಮ ನಿಡ್ಲೆ, ನವದೆಹಲಿನವೆಂಬರ್ 30ರ ತೆಲಂಗಾಣ ವಿಧಾನಸಭೆ ಚುನಾವಣೆ ಯಲ್ಲಿ ವೈಎಸ್ ಶರ್ವಿುಳಾ ನೇತೃತ್ವದ ವೈಎಸ್​ಆರ್ ತೆಲಂಗಾಣ ಪಾರ್ಟಿಯು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದು, ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಆಡಳಿತಾರೂಢ ಬಿಆರ್​ಎಸ್ ಪಕ್ಷಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್-ಬಿಆರ್​ಎಸ್ ನಡುವೆ ಪ್ರಬಲ ಪೈಪೋಟಿ ಕಂಡುಬಂದಿದ್ದು, ಹಲವು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಮಧ್ಯೆ ಭಾರಿ ಸೆಣಸಾಟದ ನಿರೀಕ್ಷೆಯಿದೆ. 10 ವರ್ಷಗಳ ಆಡಳಿತದ ಬಳಿಕ ಸಹಜವಾಗಿಯೇ ಬಿಆರ್​ಎಸ್ ಪಕ್ಷ ವಿರೋಧಿ ಅಲೆ ಎದುರಿಸುತ್ತಿದ್ದು, ಕಾಂಗ್ರೆಸ್ ಇದನ್ನು ಲಾಭವಾಗಿ ಪರಿವರ್ತಿಸಲು ಯತ್ನಿಸುತ್ತಿದೆ.
ಚುನಾವಣಾ ಕಣದಿಂದ ದೂರ ಸರಿದಿರುವ ವೈಎಸ್ ಶರ್ವಿುಳಾ, ತೆಲಂಗಾಣದ ಹಿತಾಸಕ್ತಿ ಕಾಪಾಡಲು ಮತ್ತು ಭ್ರಷ್ಟ ಬಿಆರ್​ಎಸ್ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್ ಜತೆ ಕೈಜೋಡಿಸುತ್ತಿದ್ದೇನೆ. ಬಿಆರ್​ಎಸ್ ವಿರೋಧಿ ಮತಗಳ ವಿಭಜನೆ ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ. ಶರ್ವಿುಳಾ ತನ್ನ ಸೋದರ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್​ವೋಹನ್ ರೆಡ್ಡಿಯಷ್ಟು ಜನಪ್ರಿಯ ನಾಯಕಿಯೇನಲ್ಲ. ಆದರೂ, ತಂದೆ ವೈಎಸ್ ರಾಜಶೇಖರ ರೆಡ್ಡಿ ಹೆಸರು, ಬಳುವಳಿ ಬಳಸಿ ಕೊಂಡು ತೆಲಂಗಾಣ ರಾಜಕೀಯದಲ್ಲಿ ಅಲೆ ಎಬ್ಬಿಸಲು ಯತ್ನಿಸಿದ್ದಾರೆ.
ಶರ್ವಿುಳಾ ಚುನಾವಣಾ ರಾಜಕೀಯ ಸಾಮರ್ಥ್ಯ ಇನ್ನೂ ಪರೀಕ್ಷೆಗೊಳಪಟ್ಟಿಲ್ಲ. ಏಕೆಂದರೆ, ಅವರ ಪಕ್ಷ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಆರಂಭದಲ್ಲಿ ಘೋಷಿಸಿದ್ದರೂ, ಈಗ ತೀರ್ವನದಿಂದ ಹಿಂದೆ ಸರಿದಿದ್ದಾರೆ. 2021ರಲ್ಲಿ ವೈಎಸ್​ಆರ್ ತೆಲಂಗಾಣ ಪಾರ್ಟಿ ಸ್ಥಾಪನೆ ಮಾಡಿದ ಶರ್ವಿುಳಾ, ಪಕ್ಷ ವಿಸ್ತರಣೆಗೊಳಿಸುವ ಸಲುವಾಗಿ ರಾಜ್ಯಾದ್ಯಂತ 3400 ಕಿಮೀ ಪಾದಯಾತ್ರೆ ಯನ್ನೂ ಕೈಗೊಂಡಿದ್ದಾರೆ. ಶರ್ವಿುಳಾರನ್ನು ನಿಜಕ್ಕೂ ತೆಲಂಗಾಣದ ಜನ ಸ್ವೀಕರಿಸುತ್ತಾರಾ ಎಂಬ ಪ್ರಶ್ನೆಗೆ ಈ ಚುನಾವಣೆಯಲ್ಲಿ ಸಿಗುವ ಸಾಧ್ಯತೆಯಿತ್ತು. ಆದರೆ, ಶರ್ವಿುಳಾ ಅಂಥದ್ದೊಂದು ಸವಾಲಿಗೆ ತೆರೆದುಕೊಳ್ಳುವುದರಿಂದ ದೂರ ಸರಿದಿದ್ದಾರೆ. ಕಾಂಗ್ರೆಸ್-ಬಿಆರ್​ಎಸ್ ಮಧ್ಯೆ ಪ್ರಬಲ ಫೈಟ್ ಇರುವ ಕಾರಣ ಕಾಂಗ್ರೆಸ್​ಗೆ ಬೆಂಬಲ ನೀಡಲು ಒಪ್ಪಿಕೊಂಡಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
ಹಲವು ಸಮೀಕ್ಷೆಗಳ ಪ್ರಕಾರ ತಾವು ಸ್ಪರ್ಧಿಸುವುದರಿಂದ ಕಾಂಗ್ರೆಸ್ ಮೇಲೆ ಅದು ನೇರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸದೆ ತ್ಯಾಗ ಮಾಡಲು ನಮ್ಮ ಪಕ್ಷ ನಿರ್ಧರಿಸಿದೆ. ರಾಜ್ಯದ ಹಿತಾಸಕ್ತಿಯಿಂದ ಬಿಆರ್​ಎಸ್ ಸೋಲಿಸಲು ಕಾಂಗ್ರೆಸ್​ಗೆ ಬೆಂಬಲ ನೀಡಲಾಗುವುದು.
| ವೈ.ಎಸ್.ಶರ್ವಿುಳಾ, ವೈಎಸ್​ಆರ್ ತೆಲಂಗಾಣ ಪಾರ್ಟಿ ನಾಯಕಿ
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಚುನಾವಣೆ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದು, ವಿವಾಹಿತ ಮಹಿಳೆಯರು, ಭೂರಹಿತ ಕೃಷಿ ಕಾರ್ವಿುಕರಿಗೆ ವಾರ್ಷಿಕ ಆರ್ಥಿಕ ನೆರವು, ಪ್ರತಿ ಕ್ವಿಂಟಲ್ ಭತ್ತ ರೂ 3100ಕ್ಕೆ ಖರೀದಿ, ಬಡ ಕುಟುಂಬಗಳಿಗೆ ರೂ 500ಕ್ಕೆ ಅಡುಗೆ ಸಿಲಿಂಡರ್ ಸೇರಿ ಹಲವು ಭರವಸೆಗಳನ್ನು ಪ್ರಕಟಿಸಿದ್ದಾರೆ. 2 ವರ್ಷಗಳಲ್ಲಿ ಛತ್ತೀಸ್​ಗಢದಲ್ಲಿ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ರಾಮಮಂದಿರಕ್ಕೆ ರಾಜ್ಯದ ಜನರನ್ನು ಕರೆದೊಯ್ಯಲಾಗುವುದು ಎಂದೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
9 ಕ್ಷೇತ್ರಗಳಿಂದ ಎಐಎಂಐಎಂ ಸ್ಪರ್ಧೆ:ತೆಲಂಗಾಣ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ 9 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಪಕ್ಷ ಈಗಾಗಲೇ 7 ಶಾಸಕರನ್ನು ಹೊಂದಿದ್ದು, ರಾಜೇಂದ್ರ ನಗರ ಮತ್ತು ಜುಬಿಲಿ ಹಿಲ್ಸ್ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಓವೈಸಿ ಮಾಹಿತಿ ನೀಡಿದ್ದಾರೆ.
ಚಿತ್ರರಂಗದ ಮಂದಿಗೆ ಸಂತಸದ ಸುದ್ದಿ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − four =
Remember me
