ನವದೆಹಲಿ:ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಹೌದು ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಕರೊನಾದಿಂದ ಗಂಭೀರಗೊಂಡ ರೋಗಿಗಳಲ್ಲಿ ಧೂಮಪಾನ ಮಾಡುವವರೇ ಹೆಚ್ಚು ಎಂದು ತಿಳಿದುಬಂದಿದೆ.
ಕರೊನಾ ಸೋಂಕು ತಗುಲಿ ಸಾವಿಗೀಡಾದ ಹಾಗೂ ಐಸಿಯುನಲ್ಲಿದ್ದ ನಾಲ್ಕನೇ ಒಂದು ಭಾಗದ ರೋಗಿಗಳು ಧೂಮಪಾನ ಮಾಡುತ್ತಿದ್ದರು ಎಂದು ಚೀನಾದ ಅಕಾಡೆಮಿಕ್ಸ್​ ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ.
ಕೆಮ್ಮು ಮತ್ತು ಜ್ವರದಂತಹ ಸಣ್ಣ ರೋಗ ಲಕ್ಷಣಗಳನ್ನು ಹೊಂದಿದ್ದವರಲ್ಲಿ ಶೇ. 11 ರಷ್ಟು ರೋಗಿಗಳು ಸ್ಮೋಕ್​ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಇನ್ನೊಂದು ಸಂಶೋಧನೆಯ ಪ್ರಕಾರ ಸ್ಮೋಕ್​ ಮಾಡುವವರಿಗೆ ಕರೊನಾ ವೈರಸ್​ ಮೊದಲ ಹಂತದಲ್ಲಿ ದಾಳಿ ಮಾಡುವುದು ಕಡಿಮೆ. ಆದರೆ, ಟ್ವಿಸ್ಟ್​ ಏನೆಂದರೆ, ಧೂಮಪಾನ ಮಾಡುವರು ಕರೊನಾದಿಂದ ತೀವ್ರ ತೊಂದರೆಯನ್ನು ಅನುಭವಿಸುತ್ತಾರೆ ಎಂದು ಹೇಳಿದೆ.
ಧೂಮಪಾನ ಒಂದು ಮಾರಣಾಂತಿಕ ಹವ್ಯಾಸವು ಹೌದು. ಇದರಿಂದ ಕ್ಯಾನ್ಸರ್​, ಶ್ವಾಸಕೋಸ ಹಾನಿ ಮತ್ತು ಕಾಯಿಲೆಯ ಸಮಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನು ತಂದೊಡ್ಡುತ್ತದೆ.
ಚೀನಾದ ಕರೊನಾ ತವರು ವುಹಾನ್​ನ ಝೋಂಗನಾನ್​ ಹಾಸ್ಪಿಟಲ್​ ಪ್ರಕಾರ ದಾಖಲಾದ 140 ರೋಗಿಗಳ ಪೈಕಿ 1.4 ರಷ್ಟು ರೋಗಿಗಳು ಧೂಮಪಾನ ಮಾಡುವವರಾಗಿದ್ದರು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಕರೊನಾ ಭೀತಿ: ಬೇಡವೆಂದರೂ ಮನೆಯಿಂದ ಹೊರಹೋದ ತಮ್ಮನನ್ನೇ ಕೊಲೆಗೈದ ಅಣ್ಣ

ಕರೊನಾ ವೈರಸ್​ ನಮ್ಮಿಂದ ಹರಡಿದ್ದಲ್ಲ, ಹೊಸ ವರಸೆ ತೆಗೆದ ಚೀನಾ ಮಾಧ್ಯಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + ten =
Remember me
