ಬೆಂಗಳೂರು:ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ. ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬಬೇಡಿ, ಇದು ಇಂಧನ ಟ್ಯಾಂಕ್​ನಲ್ಲಿ ಸ್ಫೋಟಕ್ಕೆ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್ ಮಾತ್ರ ಇಂಧನ ತುಂಬಿಸಿ, ಇನ್ನರ್ಧ ಟ್ಯಾಂಕ್​ ಗಾಳಿಗಾಗಿ ಇಡಿ. ಈ ವಾರ ಗರಿಷ್ಠ ಪೆಟ್ರೋಲ್​ ತುಂಬಿದ ಅಂದರೆ ಫುಲ್​ ಟ್ಯಾಂಕ್ ಪೆಟ್ರೋಲ್ ಹಾಕಿಸಿದ ಕಾರಣಕ್ಕೆ ಐದು ವಾಹನಗಳು ಬ್ಲಾಸ್ಟ್​ ಆಗಿವೆ. ದಯವಿಟ್ಟು ದಿನಕ್ಕೊಮ್ಮೆ ಪೆಟ್ರೋಲ್ ಟ್ಯಾಂಕ್ ತೆರೆದು, ಒಳಗಿರುವ ಅನಿಲ ಹೊರಬರುವಂತೆ ಮಾಡಿ. ಗಮನಿಸಿ: ಈ ಸಂದೇಶವನ್ನು ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ಕಳಿಸಿ, ಇದರಿಂದ ಅಂಥ ಅಪಘಾತವನ್ನು ತಪ್ಪಿಸಬಹುದು.
– ಹೀಗೊಂದು ಸಂದೇಶ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್​ಗಳಲ್ಲಿ ರವಾನೆಯಾಗುತ್ತಿದ್ದು, ಇದು ಜನರಲ್ಲಿ ಆತಂಕ ಮೂಡಿಸುವಂತಿದೆ. ಈ ಸಲ ಮಾತ್ರವಲ್ಲ, ಹಿಂದೆಯೂ ಬೇಸಿಗೆ ಸಮಯದಲ್ಲಿ ಇಂಥದ್ದೊಂದು ಸಂದೇಶ ಹರಿದಾಡಿದ್ದಿದೆ.ಅದರಲ್ಲೂ ಇಂಡಿಯನ್ ಆಯಿಲ್ ಕಾರ್ಪೊರೇಷನ್​ ಹೆಸರಿನಲ್ಲೇ ಇಂಥದ್ದೊಂದು ಸುದ್ದಿ ಹರಿದಾಡುತ್ತಿದ್ದು, ಹಲವರು ಇದನ್ನು ಸತ್ಯವೆಂದೇ ನಂಬುವಂತಿದೆ.

ಅಸಲಿಗೆ ಇದೊಂದು ಸುಳ್ಳು ಸುದ್ದಿ. ಈ ಬಗ್ಗೆ ಹಿಂದೆಯೂ ಅಂದರೆ 2019ರಲ್ಲೇ ಇಂಡಿಯನ್​ ಆಯಿಲ್ ಕಾರ್ಪೋರೇಷನ್​ ತನ್ನ ಅಧಿಕೃತ ಟ್ಟಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿತ್ತು. ಈ ಸಲ ತನ್ನ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿದರೆ ವಾಹನ ಬ್ಲಾಸ್ಟ್ ಆಗುತ್ತದೆ ಎಂಬುದು ಸತ್ಯವಲ್ಲ ಎಂದು ತಿಳಿಸಿದೆ. ಮಾತ್ರವಲ್ಲ, ಬೇಸಿಗೆ-ಚಳಿ ಯಾವುದೇ ಕಾಲವಿರಲಿ, ಪೆಟ್ರೋಲ್​ ಟ್ಯಾಂಕ್​ ತುಂಬಾ ತುಂಬಿಸುವುದಕ್ಕೆ ಏನೂ ಅಪಾಯವಿಲ್ಲ ಎಂದು ಅದು ಹೇಳಿದೆ. ಅಲ್ಲದೆ ಈ ಕುರಿತು ನಡೆದ ಫ್ಯಾಕ್ಟ್​ಚೆಕ್​ನಲ್ಲಿ ಕೂಡ ಇತ್ತೀಚೆಗೆ ಅಂಥ ಐದು ಬ್ಲಾಸ್ಟ್ ಪ್ರಕರಣಗಳು ನಡೆದಿರುವುದು ಕಂಡುಬಂದಿಲ್ಲ.

Important announcement from#IndianOil. It is perfectly safe to fill fuel in vehicles up to the limit(max) as specified by the manufacturer irrespective of winter or summer.pic.twitter.com/uwQFDtjTdi— Indian Oil Corp Ltd (@IndianOilcl)June 3, 2019
Important announcement from#IndianOil. It is perfectly safe to fill fuel in vehicles up to the limit(max) as specified by the manufacturer irrespective of winter or summer.pic.twitter.com/uwQFDtjTdi
ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
