ಬೆಂಗಳೂರು:ಯಾವುದೇ ನೋಟುಗಳ ಮೇಲೆ ಏನನ್ನಾದರೂ ಬರೆದರೆ ಭಾರತೀಯ ರಿಸರ್ವ್ ಬ್ಯಾಂಕ್​ನ ಹೊಸ ಮಾರ್ಗಸೂಚಿಗಳ ಪ್ರಕಾರ ಅಂಥ ನೋಟುಗಳು ಮೌಲ್ಯ ಕಳೆದುಕೊಳ್ಳುತ್ತವೆ, ಅವುಗಳನ್ನು ಚಲಾಯಿಸುವಂತಿಲ್ಲ ಹಾಗೂ ಯಾರೂ ಸ್ವೀಕರಿಸುವಂತಿಲ್ಲ ಎಂಬ ಮಾಹಿತಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಇಂಥದ್ದೊಂದು ಮಾಹಿತಿ ಪ್ರೆಸ್ ಇನ್​​ಫಾರ್ಮೇಷನ್​ ಬ್ಯೂರೋವನ್ನು ಕೂಡ ತಲುಪಿದ್ದು, ಅವರು ಈ ಕುರಿತ ಸ್ಪಷ್ಟನೆಯೊಂದನ್ನು ನೀಡಿ ಸತ್ಯಾಂಶವನ್ನು ತಿಳಿಸಿದ್ದಾರೆ. ಅಮೆರಿಕದಲ್ಲೂ ಈ ಥರದ ನಿಯಮವಿದೆ, ಅಲ್ಲಿ ಡಾಲರ್​ಗಳ ಮೇಲೆ ಬರೆಯವಂತಿಲ್ಲ ಮತ್ತು ಅಂಥ ಡಾಲರ್​ಗಳನ್ನು ಯಾರೂ ಸ್ವೀಕರಿಸುವುದಿಲ್ಲ ಎಂಬ ಮಾಹಿತಿಯೊಂದಿಗೆ ಭಾರತೀಯ ನೋಟುಗಳ ಕುರಿತಾಗಿಯೂ ಇದೇ ವಿಚಾರ ಹರಿಯಬಿಡಲಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಭೀಕರ ಮರ್ಡರ್​: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಚಾರವನ್ನು ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋದ ಫ್ಯಾಕ್ಟ್​ಚೆಕ್​ ಸುಳ್ಳು ಎಂದಿರುವುದಲ್ಲದೆ, ಆ ಕುರಿತು ಸ್ಪಷ್ಟನೆಯನ್ನೂ ಪ್ರಕಟಿಸಿದೆ. ಏನನ್ನಾದರೂ ಬರೆದಿರುವ ನೋಟುಗಳು ಅಮಾನ್ಯವಾಗುವುದಿಲ್ಲ, ಅವುಗಳು ಕಾನೂನಾತ್ಮಕವಾಗಿ ಮೌಲ್ಯಯುತವಾಗಿಯೇ ಇರುತ್ತದೆ ಎಂದು ಪಿಐಬಿ ಹೇಳಿದೆ.
ಇದನ್ನೂ ಓದಿ:ಮುಂದಿನ ಮುಖ್ಯಮಂತ್ರಿ ಯಾರು?; ಇದೊಂದೇ ಪ್ರಶ್ನೆಗೆ ಯುವಕರ ಮಧ್ಯ ಮಾರಾಮಾರಿ, ಕೊಲೆ ಬೆದರಿಕೆ
ಅದಾಗ್ಯೂ ಕ್ಲೀನ್ ನೋಟ್ ಪಾಲಿಸಿ ಪ್ರಕಾರ ನೋಟುಗಳ ಬೇರೆ ಬರವಣಿಗೆ ಸರಿಯಲ್ಲ. ಏನನ್ನಾದರೂ ಬರೆಯುವುದರಿಂದ ಅದು ನೋಟುಗಳನ್ನು ವಿರೂಪವಾಗಿಸುವ ಜತೆಗೆ ಅವುಗಳ ಬಾಳಿಕೆಯ ಅವಧಿಯನ್ನೂ ಕ್ಷೀಣಿಸುವಂತೆ ಮಾಡುತ್ತವೆ. ಹೀಗಾಗಿ ಯಾರೂ ನೋಟುಗಳ ಮೇಲೆ ಬರೆಯಬಾರದು ಎಂಬುದಾಗಿ ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಮನವಿ ಮಾಡಿಕೊಂಡಿದೆ.
Does writing anything on the banknote make it invalid❓#PIBFactCheck
✔️NO, Bank notes with scribbling are not invalid & continue to be legal tender
✔️Under the Clean Note Policy, people are requested not to write on the currency notes as it defaces them & reduces their lifepic.twitter.com/rZj3vgkzMv
— PIB Fact Check (@PIBFactCheck)February 24, 2023


ಇವರಿನ್ನು ಶಂಕಿತ ಉಗ್ರರು, ಫೆ. 27ರಂದು ಶಿಕ್ಷೆ ಪ್ರಕಟ: ಹಿಂದು ಮುಖಂಡರ ಹತ್ಯೆಗೆ ಸ್ಕೆಚ್, ಮತೀಯ ಗಲಭೆಗೆ ಸಂಚು ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 2 =
Remember me
