ಗಯಾ:ಜಾತಿ ಪ್ರಮಾಣಪತ್ರಕ್ಕೆ ಮನುಷ್ಯರು ಅರ್ಜಿ ಹಾಕುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಬಿಹಾರದ ಗಯಾದಲ್ಲಿ ಶ್ವಾನವೊಂದು ಜಾತಿಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ, ಅದರ ಜತೆಗೆ ಆಧಾರ್ ಕಾರ್ಡ್ ಲಗತ್ತಿಸಿ ಎಲ್ಲರನ್ನು ಅಚ್ಚರಿಗೊಳಿಸಿದೆ.
ಗುರಾರು ವಲಯ ಕಚೇರಿಯಲ್ಲಿ ಟಾಮಿ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆಧಾರ್ ಕಾರ್ಡ್​ನಲ್ಲಿ ನಾಯಿಯ ಚಿತ್ರವಿದ್ದು, ತಂದೆಯ ಹೆಸರನ್ನು ಶೇರು ಹಾಗೂ ತಾಯಿ ಹೆಸರನ್ನು ಗಿನಿ ಎಂದು ನಮೂದಿಸಲಾಗಿದೆ. ಟಾಮಿ ಜನ್ಮ ದಿನಾಂಕವನ್ನು ಏಪ್ರಿಲ್ 14, 2022 ಎಂದು ನಮೂದಿಸಲಾಗಿದೆ. ವಿಳಾಸವನ್ನು ಗ್ರಾಮ ಪಾಂಡೆಪೋಖರ್, ಪಂಚಾಯತ್ ರೌನಾ, ವಾರ್ಡ್ ಸಂಖ್ಯೆ 13, ಪೊಲೀಸ್ ಠಾಣೆ ಕೊಂಚ್ ಎಂದು ಬರೆಯಲಾಗಿದೆ. ಜತೆಗೆ ಆಧಾರ್ ಕಾರ್ಡ್​ನಲ್ಲಿ ‘ಆಧಾರ್-ಆಮ್ ಕುತ್ತಾ ಕಾ ಅಧಿಕಾರ್’ ಎಂದೂ ಬರೆಯಲಾಗಿದ್ದು, ಈ ಆಧಾರ್​ಕಾರ್ಡ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗುರಾರು ಬಾಕ್​ನ ಸರ್ಕಲ್ ಆಫೀಸರ್ ಸಂಜೀವ್ ಕುಮಾರ್ ತ್ರಿವೇದಿ, ಅರ್ಜಿಯಲ್ಲಿ ನಮೂದಿಸಲಾದ ಫೋನ್ ಸಂಖ್ಯೆಯು ಟ್ರೂ ಕಾಲರ್​ನಲ್ಲಿ ರಾಜಬಾಬು ಹೆಸರನ್ನು ತೋರಿಸುತ್ತದೆ. ಚೇಷ್ಟೆಗಾಗಿ ಈ ಅರ್ಜಿ ಸಲ್ಲಿಸಲಾಗಿದ್ದು, ಅದರ ಹಿಂದಿರುವ ದುಷ್ಕರ್ವಿುಯನ್ನು ಹಿಡಿಯಲು ತನಿಖೆ ನಡೆಸಲಾಗುತ್ತಿದೆ. ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + four =
Remember me
